
ತಾಳಿಕೋಟಿ ಬಾಲಭಾರತಿ ವಿದ್ಯಾಮಂದಿರದಲ್ಲಿ ಶಾಲಾ ಸಂಸತ್ತು ಮತ್ತು ಕ್ರೀಡಾಕೂಟದ ಉದ್ಘಾಟನಾ ಸಮಾರಂಭ
ತಾಳಿಕೋಟಿ ಪಟ್ಟಣದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಾದ ಬಾಲ ಭಾರತಿ ಪ್ರಾಥಮಿಕ ಶಾಲೆ ಹಾಗೂ ಶ್ರೀ ಲಕ್ಷ್ಮಣಸಿಂಗ್ ಅಮರಸಿಂಗ್ ಹಜೇರಿ ವಿದ್ಯಾಭಾರತಿ ಪ್ರೌಢಶಾಲೆ ಇದರ 2025-26ನೇ ಶಾಲಾ ಸಂಸತ್ ಹಾಗೂ ವಾರ್ಷಿಕ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ಇಂದು ಜರುಗಿತು.
ಸಂಸ್ಥೆಯ ಅಧ್ಯಕ್ಷ ಶ್ರೀ ಚಿದಂಬರ್ ಕರಮರಕರ (ಬಾಳು ಬಕ್ಷಿ) ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನಾಡಿನ ಖ್ಯಾತ ಪ್ರವಚನಕಾರರಾದ ಪರಮಪೂಜ್ಯ ಸಿದ್ದರಾಮ ಶಿವಯೋಗಿಗಳು ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರಗಳನ್ನು ಬೆಳೆಸಿಕೊಳ್ಳುವುದು ಅತ್ಯಾವಶ್ಯಕ ಎಂದು ಹೇಳಿದರು. ಉತ್ತಮ ಸಂಸ್ಕಾರಗಳ ಕೊರತೆಯಿಂದ ಸಮಾಜದಲ್ಲಿ ನೈತಿಕ ಮೌಲ್ಯಗಳು ಕ್ಷೀಣಿಸುತ್ತಿವೆ. ವಿದ್ಯಾರ್ಥಿಗಳು ಆಧ್ಯಾತ್ಮಿಕ ಒಲವು ಬೆಳೆಸಿಕೊಂಡು ಉನ್ನತ ಗುರಿಯೊಂದಿಗೆ ಜೀವನದಲ್ಲಿ ಸಾಧನೆ ಮಾಡಬೇಕು. ಹೆತ್ತವರು ಹಾಗೂ ಕಲಿತ ಸಂಸ್ಥೆಗೆ ಕೀರ್ತಿಯನ್ನು ತರುವಂತಾಗಬೇಕು ಎಂದು ಆಶೀರ್ವಚನ ನೀಡಿದರು.
ಹಿರಿಯ ಪತ್ರಕರ್ತ ಜಿ.ಟಿ. ಘೋರ್ಪಡೆ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾ ಭಾರತಿ ಶಿಕ್ಷಣ ಸಂಸ್ಥೆಯು ಶಿಕ್ಷಣದೊಂದಿಗೆ ಉತ್ತಮ ಸಂಸ್ಕಾರ ಹಾಗೂ ಭಾರತೀಯ ಸಂಸ್ಕೃತಿಯ ಪರಿಚಯವನ್ನು ನೀಡುತ್ತಿರುವ ಆದರ್ಶ ಸಂಸ್ಥೆಯಾಗಿದೆ ಎಂದು ಹೇಳಿದರು.ಶಾಲಾ ಸಂಸತ್‌ನಿಂದ ದೇಶದ ಸಂಸತ್‌ವರೆಗೆ:
ತಾಳಿಕೋಟಿ ಕ್ಲಸ್ಟರ್‌ನ ಸಿ.ಆರ್.ಪಿ. ಶ್ರೀ ರಾಜುಸಿಂಗ್ ವಿಜಾಪುರ್ ಸರ್ ಮಾತನಾಡಿ, "ಶಾಲಾ ಸಂಸತ್ ಚುನಾವಣೆಯು ಪ್ರಜಾಪ್ರಭುತ್ವದ ಮೊದಲ ಪಾಠ. ಇಂದು ಇಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿ ವಿಜೇತರಾದ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಇಲ್ಲಿ ಪಡೆದ ಅನುಭವವು ನಿಮ್ಮನ್ನು ಮುಂದೊಂದು ದಿನ ನಮ್ಮ ದೇಶದ ಸಂಸತ್ತಿನಲ್ಲಿ ಕುಳಿತು ದೇಶಸೇವೆ ಮಾಡುವಂತೆ ಪ್ರೇರೇಪಿಸಲಿ," ಎಂದು ಹಾರೈಸಿದರು.
ಈ ಸಂದರ್ಭದಲ್ಲಿ 2025-26ನೇ ಸಾಲಿನ ಶಾಲಾ ಸಂಸತ್ ಚುನಾವಣೆಯಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಶ್ರೀಗಳು ನೂತನ ಸಂಸತ್ ಸದಸ್ಯರಿಗೆ ಆಶೀರ್ವಾದಿಸಿದರು.
ಕಾರ್ಯಕ್ರಮದ ವೇದಿಕೆಯಲ್ಲಿ ಸಂಸ್ಥೆಯ ಕಾರ್ಯದರ್ಶಿ ಅಮರಸಿಂಗ್ (ಬಾಬು) ಹಜೇರಿ, ಸಿ.ಆರ್.ಸಿ. ರಾಜುಸಿಂಗ್ ವಿಜಾಪುರ, ಪತ್ರಕರ್ತರಾದ ಅಬ್ದುಲ್ ಗನಿ ಮಕಾಂದಾರ, ಸಂಜಯಸಿಂಗ್ ರಜಪೂತ, ಸಂಗನಗೌಡ ಗಬಸಾವಳಗಿ ಹಾಗೂ ಸಂಸ್ಥೆಯ ನಾಮ ನಿರ್ದೇಶೀತ ಸದಸ್ಯರಾದ ಸಿ,ಎಂ,ಹಿರೇಮಠ, ಸಂಬಾಜಿರಾವ್ ವಾಡ್ಕರ್, ಘನಶ್ಯಾಮ ಹಂಚಾಟೆ, ತಮ್ಮಣ್ಣ ದೇಶಪಾಂಡೆ, ಮಲ್ಲಿಕಾರ್ಜುನ ಹಿಪ್ಪರಗಿ, ಪ್ರಕಾಶ ಕಟ್ಟಿಮನಿ, ಬಾಲ ಭಾರತಿ ವಿದ್ಯಾಮಂದಿರ ಪ್ರಾಥಮಿಕ ಶಾಲೆಯ ಮುಖ್ಯ ಗುರುಗಳಾದ ಶ್ರೀ ಮಹೇಶ್ ಓದಿ , ಪ್ರೌಢಶಾಲೆಯ ಮುಖ್ಯ ಗುರುಗಳು ಹಾಗೂ ಆಡಳಿತ ಅಧಿಕಾರಿಗಳಾದ ಶ್ರೀ ಪ್ರದೀಪ್ ಗೊಂಡ, ಶ್ರೀ ಧರ್ಮಣ್ಣ ಕಟ್ಟಿಮನಿ, ಭೋದಕ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ನಿರ್ವಹಣೆಯನ್ನು ಶ್ರೀಮತಿ ಸುಮಂಗಲಾ ಯಾಳವಾರ ಮಾತಾಜಿ, ಸ್ವಾಗತ ವನ್ನು ಶ್ರೀಮತಿ ಸಮೃದ್ಧಿ ಸುರಪುರ ಮಾತಾಜಿ, ಪ್ರಮಾಣ ವಚನ ಬೋಧನೆಯನ್ನು ಶ್ರೀ ಎಚ್ ಕೆ ನಾಟಿಕಾರ್ ದೈಹಿಕ ಶಿಕ್ಷಕರು, ಪ್ರೌಢಶಾಲಾ ಮಂತ್ರಿಮಂಡಲ ಪರಿಚಯವನ್ನು ಶ್ರೀ ಗುರುರಾಜ್ ಚೆಟ್ಟೆರ್ ಗುರೂಜಿ, ಪ್ರಾಥಮಿಕ ಶಾಲಾ ಮಂತ್ರಿ ಮಂಡಲದ ಪರಿಚಯವನ್ನು ಶ್ರೀ ರಾಘವೇಂದ್ರರಾವ್ ಗುರೂಜಿ, ಪ್ರಾಸ್ತಾವಿಕ ನುಡಿಗಳನ್ನು ಶ್ರೀ ರಮೇಶ್ ಕುಲಕರ್ಣಿ ಗುರೂಜಿ, ಕಾರ್ಯಕ್ರಮದ ವಂದನಾರ್ಪಣೆಯನ್ನು ಶ್ರೀ ಮಹೇಶ್ ಓದಿ ಮುಖ್ಯ ಗುರುಗಳು ನೆರವೇರಿಸಿದರು ಹಾಗೂ ಎಲ್ಲ ಗುರೂಜಿ ಮಾತಾಜಿ ಆಡಳಿತ ಮಂಡಳಿಯ ಸದಸ್ಯ ವರ್ಗ ಉಪಸ್ಥಿತರಿದ್ದು ಕಾರ್ಯಕ್ರಮ ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತ್ತು.
ವರದಿ: ಸಂಗನಗೌಡ ಗಬಸಾವಳಗಿ, ಎಸ್ ಸಿ ಏನ್ ನ್ಯೂಸ್, ತಾಳಿಕೋಟಿ