ಶಿಲೆಗಳು ಸಂಗೀತ ಹಾಡಿವೇ ಗ್ರೂಪ್ ವತಿಯಿಂದ
ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ಕೊಪ್ಪಳ ಜಿಲ್ಲೆಯ
ಕುಷ್ಟಗಿ : ಶಿಲೆಗಳು ಸಂಗೀತ ಹಾಡಿವೇ ಗ್ರೂಪ್ ವತಿಯಿಂದ ಪತ್ರಿಕಾ ದಿನಾಚರಣೆ, ಲೆಕ್ಕಪರಿಶೋಧಕರ ದಿನಾಚರಣೆ, ವೈದ್ಯಕೀಯ ದಿನಾಚರಣೆ, ಅಂಚೆ ದಿನಾಚರಣೆ ಹಿನ್ನೆಲೆಯಲ್ಲಿ ಆಯಾ ಕ್ಷೇತ್ರದಲ್ಲಿ ಕೆಲಸವನ್ನು ನಿರ್ವಹಿಸುತ್ತಿರುವ ವ್ಯಕ್ತಿ ಗಳನ್ನು ಗುರುತಿಸಿ ಗೌರವಿಸುವ ಮೂಲಕ ಸನ್ಮಾನಿಸಲಾಯಿತು.
ಮಾದ್ಯಮ ಕ್ಷೇತ್ರ ಸಂಗಮೇಶ ಲೂತಿಮಠ,ವೈದ್ಯಕೀಯ ಕ್ಷೇತ್ರ ಡಾ ಪ್ರವೀಣಕುಮಾರ ಬಡಿಗೇರ, ಲೆಕ್ಕಪರಿಶೋಧಕರ ವಿಭಾಗದಲ್ಲಿ ಸುಮಿತ ರಾಯಬಾಗಿ, ಅಂಚೆ ಇಲಾಖೆಯ ಪೊಸ್ಟ್ ಮಾಸ್ಟರ್ ಅಡಿವೆಪ್ಪ ಕವಿತಾಳ ಅವರನ್ನು ಗೌರವಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಉದ್ಯಮಿ ಫಕೀರಪ್ಪ ಹೊಸಕಲ್ಲ ವಹಿಸಿದ್ದರು. ಶಾಂತರಾಜ ಗೋಗಿ ಸನ್ಮಾನಿಸಿದರು .ಕಾರ್ಯಕ್ರಮ ನಿರೂಪಣೆ ರವಿಂದ್ರ ಬಾಕಳೆ ಮಾಡಿದರು. ಭರತೇಶ ಜೋಶಿ ವಂದಿಸಿದರು. ನಾಗರಾಜ ಬಡಿಗೇರ, ಚಂದ್ರು ಪುರದ,ಸಂಗಪ್ಪ ಬಳೋಡಿ, ಶಿವಕುಮಾರ್ ಗಂಧದಮಠ,ಕುಮಾರ ಬಡಿಗೇರ, ಅನಿಲ ಕಮ್ಮಾರ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು