logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅರ್ಜಿ ಕೊಟ್ಟು ವರ್ಷವಾದರೂ ಕೆಲಸ ಮಾಡದೇ ಇರುವ ಬಿದರಕುಂದಿ ಗ್ರಾಮ ಪಂಚಾಯತ್

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಬಿದರಕುಂದಿ ಹೆಸರಿಗೆ ಗ್ರಾಮ ಪಂಚಾಯಿತಿ ಇರುತ್ತದೆ ಆದರೆ ಇಲ್ಲಿನ ಅಧಿಕಾರಿಗಳು ಯಾವಾಗ ಬರುತ್ತಾರೆ ಯಾವಾಗ ಹೋಗುತ್ತಾರೆ ಅಂತ ಗೊತ್ತಾಗುವುದಿಲ್ಲ ಯಾರನ್ನ ಕೇಳಬೇಕು ಗೋಡೆಗೆ ಕೇಳಬೇಕು ಅಷ್ಟೇ . ಗ್ರಾಮ ಪಂಚಾಯತಿ ಎಂದರೆ ಗ್ರಾಮಗಳ ಆಡಳಿತಕ್ಕಾಗಿ ಇರುವ ಒಂದು ಸ್ಥಳೀಯ ಸರಕಾರಿ ಸಂಸ್ಥೆ ಇದು ಗ್ರಾಮಗಳ ಅಭಿವೃದ್ಧಿ ಮತ್ತು ಜನರ ಅಗತ್ಯತೆಗಳನ್ನು ಪೂರೈಸುವ ಜವಾಬ್ದಾರಿ ಯನ್ನು ಹೊಂದಿರುತ್ತದೆ ಆದರೆ ಇಲ್ಲಿ ನಡೆಯುತ್ತಿರುವುದೇ ಬೇರೆ.

ಒಬ್ಬ ಅಧಿಕಾರಿ ಒಂದು ದಿನ ಬಂದು ಹೋದರೆ ಮತ್ತೆ ಯಾವಾಗ ಬರುತ್ತಾನೆ ಅನ್ನೋದೇ ಗೊತ್ತಾಗುವುದಿಲ್ಲ ಯಾರು ಪಿಡಿಒ ಯಾರು ಸೆಕ್ರೆಟರಿ ಯಾರು ಸಿಬ್ಬಂದಿ ಅಂತ ಕೆಲವರಿಗೂ ಇನ್ನು ಗೊತ್ತಿಲ್ಲ . ಯಾವಾಗಲೂ ಪಿಡಿಒ ಅವರ ಫೋನ್ ಬಂದ ಇರುತ್ತದೆ ಸೆಕ್ರೆಟರಿ ಅವರನ್ನು ಹೇಳಿದರೆ ಸರ್ ಬಂದ ಮೇಲೆ ನಿಮ್ಮ ಕೆಲಸ ಆಗುತ್ತೆ ಅಂತ ಕಾಟಾಚಾರಕ್ಕೆ ಹೇಳಿ ಕಳಿಸುತ್ತಾರೆ ಏನಾದರೂ ಸಾರ್ವಜನಿಕರು ಜೋರಾಗಿ ಮಾತನಾಡಿದರೆ ಪಿಡಿಒ ಸರ್ ಬಂದ ತಂಬು ಒತ್ತಬೇಕು ಆಮೇಲೆ ನಿಮ್ಮ ಕೆಲಸಗಳು ಆಗುತ್ತೆ ಅಂತ ಹೇಳುತ್ತಾರೆ ,ಹಾಗಾದರೆ ಸಾರ್ವಜನಿಕರ ಕೆಲಸ ಮಾಡುವವರು ಯಾರು ಅನ್ನೋದೇ ಗೊತ್ತಾಗುತ್ತಿಲ್ಲ

ಮನೆಯ ತೆರೆಗೆ ಹಣ ಪಾವತಿ ಮಾಡಿದರು ಕೂಡ ಎನ್ ಓ ಸಿ ನೀಡುತ್ತಿಲ್ಲ ಅದೇ ರೀತಿ ಕಂಪ್ಯೂಟರ್ ಉತಾರೆ ನೀಡುತ್ತಿಲ್ಲ ಹೀಗಾದರೆ ಹೇಗೆ ಎಂಬುದು ಇಲ್ಲಿನ ಸಾಮೂಹಿಕ ಸಾರ್ವಜನಿಕರ ಅಭಿಪ್ರಾಯ.
ಅರ್ಜಿ ನೀಡಿ ವರ್ಷಗಳಾದರು ಅರ್ಜಿಗೆ ಇನ್ನೂ ಉತ್ತರ ಕೊಟ್ಟಿರುವುದಿಲ್ಲ ಒಂದು ಚಿಕ್ಕ ಕೆಲಸ ಮಾಡದೆ ಇವರು ಏನು ಮಾಡುತ್ತಾರೆ, ಸಾರ್ವಜನಿಕರು ತೆರಿಗೆ ಹಣ ಪಾವತಿ ಮಾಡಿಸಿದರು ಕೂಡ ಅದು ಕಂಪ್ಯೂಟರ್ನಲ್ಲಿ ಕಡಿಮೆ ಆಗಿಲ್ಲ ಯಾಕೆ ಅಂತ ಹೋಗಿ ಅಲ್ಲಿ ಕೇಳಿದರೆ ಅಲ್ಲಿರುವ ಒಬ್ಬ ಸಿಬ್ಬಂದಿ ಅದನ್ನು ಕಂಪ್ಯೂಟರ್ನಲ್ಲಿ ಕಡಿಮೆ ಮಾಡದೆ ಹಣ ಗುಳುಂ ಮಾಡಿದ ಆರೋಪಗಳು ಈ ಪಂಚಾಯತಿಗೆ ಇದೆ.
ಇನ್ನು ಮುಂದೆಯಾದರೂ ಸಂಬಂಧ ಪಟ್ಟ ಅಧಿಕಾರಿಗಳು ಇಂತಹ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳತ್ತಾರೋ ಇಲ್ವೋ ಅಂತ ಕಾದು ನೋಡಬೇಕಾಗಿದೆ..

105
1857 views

Comment