logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ದೌರ್ಜನ್ಯನಿಂದ ಕಾಂಪೌಂಡ್ ನಿರ್ಮಾಣ : ನ್ಯಾಯಕ್ಕಾಗಿ ದಲಿತ ಕುಟುಂಬ.

ಬೆಂಗಳೂರು : ದೌರ್ಜನ್ಯ ನಿಂದ ಕಾಂಪೌಂಡ್ ನಿರ್ಮಾಣ ಮಾಡುವುದಕ್ಕೆ ದಲಿತ ಕುಟುಂಬಸ್ಥರು ವಿರೋಧಿಸಿ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದೆ.
ಬೆಂಗಳೂರು ಉತ್ತರ ತಾಲೂಕಿನ ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 16/2 ರಲ್ಲಿ 1 ಎಕರೆ 12 ಗುಂಟೆ ಜಮೀನಿನಲ್ಲಿ ಒತ್ತುವರಿ ಮಾಡಿಕೊಂಡು ದೌರ್ಜನ್ಯ ನಿಂದ ಪುಡಿ ರೌಡಿಗಳನ್ನು ಬಳಸಿ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಜಮೀನಿನ ಮಾಲೀಕ ನರಸಿಂಹ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ.
ಗೊಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 16/2 ರಲ್ಲಿ 1 ಎಕರೆ 12 ಗುಂಟೆ ಜಮೀನು ನರಸಿಂಹ ಎಂಬುವವರಿಗೆ ಎಲ್ ಆರ್ ಎಫ್ ನಲ್ಲಿ ಜಮೀನು ಮಂಜೂರಾಗಿತ್ತು ಅಂದಿನಿಂದಲೂ ಇಂದಿನ ವರೆಗೆ ಸ್ವಾಧೀನದಲ್ಲಿ ನರಸಿಂಹ ಕುಟುಂಬಸ್ಥರು ಇದ್ದರು. ಆದ್ರೆ ಇತ್ತಿಚಿಗೆ ಪಕ್ಕದ ಜಮೀನಿನವರು ಒತ್ತುವರಿ ಮಾಡಿಕೊಂಡು ಕಾಂಪೌಂಡ್ ಮಾಡುತ್ತಿದ್ದಾರೆ. ಇದನ್ನು ವಿರೋಧಿಸಿ ಕಾಂಪೌಂಡ್ ನಿರ್ಮಾಣ ಮಾಡಲು ತಡೆಯಲು ಹೋದ್ರೆ ಹಲ್ಲೆಗೆ ಮುಂದಾಗುತ್ತಾರೆ. ಮಹಿಳೆ ಮತ್ತು ಮಕ್ಕಳಿಗೆ ಕೊಲೆ ಬೆದರಿಕೆ ಹಾಕುತ್ತಾರೆ. ಈ ಬಗ್ಗೆ ಪೋಲಿಸ್ ಇಲಾಖೆಗೆ ಮತ್ತು ಕಂದಾಯ ಇಲಾಖೆಗೆ ದೂರು ನೀಡಿದರು ದಲಿತ ಕುಟುಂಬಸ್ಥರಿಗೆ ನ್ಯಾಯ ಒದಗಿಸುತ್ತಿಲ್ಲ ಎಂದು ನರಸಿಂಹ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನರಸಿಂಹ ಕುಟುಂಬಸ್ಥರಿಗೆ ನ್ಯಾಯ ಒದಗಿಸುವಂತೆ ಶ್ರೀ ಓಂಕಾರ ಸೇವಾ ಟ್ರಸ್ಟ್ ರಾಜ್ಯಾಧ್ಯಕ್ಷ ಹಂದರಹಳ್ಳಿ ಮುನಿಯಪ್ಪ ಮಾದಿಗ ದಂಡೋರ ದೇವನಹಳ್ಳಿ ತಾಲ್ಲೂಕು ಉಪಾಧ್ಯಕ್ಷ ಬೂದಿಗೆರೆ ಮುನಿಯಪ್ಪ ಸೇರಿದಂತೆ ಅನೇಕ ಹೋರಾಟಗಾರರು ಒತ್ತಾಯಿಸಿದರು.

227
2775 views

Comment