ಬೆಂಗಳೂರು ನೆನ್ನೆ ಮೆಟ್ರೋದಲ್ಲಿ 9,66,732 ಜನರು ಪ್ರಯಾಣ
ಬೆಂಗಳೂರು ನೆನ್ನೆ ಮೆಟ್ರೋದಲ್ಲಿ 9,66,732 ಜನರು ಪ್ರಯಾಣ
RCB ತಂಡವು ಚೊಚ್ಚಲ ಬಾರಿಗೆ IPL ಕಪ್ ಗೆದ್ದ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆ ವೇಳೆ ಒಟ್ಟು 9,66,732 ಪ್ರಯಾಣಿಕರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಬೆಂಗಳೂರು ಮೆಟ್ರೋ ವಿವಿಧ ಮಾರ್ಗಗಳಲ್ಲಿ ಗಮನಾರ್ಹವಾಗಿ ಪ್ರಯಾಣಿಕರ ಸಂಖ್ಯೆಯಲ್ಲಿ ಸುಮಾರು 3 ಪಟ್ಟು ಹೆಚ್ಚಳ ಕಂಡುಬಂದಿದೆ. ಮೆಟ್ರೋ ಮಾರ್ಗ 1 ರಲ್ಲಿ 4,78,334 ಪ್ರಯಾಣಿಕರು & ಮಾರ್ಗ 2 ರಲ್ಲಿ 2,84,674 ಪ್ರಯಾಣಿಕರು ಸಂಚರಿಸಿದ್ದಾರೆ. ಕೆಂಪೇಗೌಡ ಇಂಟರ್ಚೇಂಜ್ ನಿಲ್ದಾಣದಲ್ಲಿಯೇ 2,03,724 ಜನರು ಪ್ರಯಾಣ ಮಾಡಿದ್ದಾರೆ.