logo

ದ.ಕ. ಜಿಲ್ಲೆಗೆ ನೂತನ ಎಸ್ಪಿ ಡಾ.ಅರುಣ್ ಅಧಿಕಾರ ಸ್ವೀಕಾರ

ತಾರೀಕು 30/05/2025 ಶುಕ್ರವಾರ

'ಮತೀಯ, ಗೂಂಡಾಗಿರಿ ಪ್ರಕರಣಗಳ ಬಗ್ಗೆ ಗಂಭೀರ ಪರಿಗಣನೆ'

ಮಂಗಳೂರು: ದಕ್ಷಣ ಕನ್ನಡ ಜಿಲ್ಲಾ ನೂತನ ಎಸ್ಪಿಯಾಗಿ ಡಾ. ಅರುಣ್ ಕೆ. ಶುಕ್ರವಾರ ನಿರ್ಗಮನ ಎಸ್ಪಿ ಯತೀಶ್ ಎನ್. ಅವರಿಂದ ಅಧಿಕಾರ ಸ್ವೀಕರಿಸಿದರು.

ಅಧಿಕಾರ ವಹಿಸಿಕೊಂಡ ಬಳಿಕ ಮಾತನಾಡಿದ ಅವರು, ಮತೀಯ ಪ್ರಕರಣ, ಗೂಂಡಾಗಿರಿ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಲಾಗುವುದು. ರೌಡಿ ಶೀಟರ್ ಗಳ ಚಲನವಲನಗಳ ಬಗ್ಗೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ನಿಗಾ ಇರಿಸಲಾಗುವುದು ಎಂದರು.

ಕಾನೂನು ಸುವ್ಯವಸ್ಥೆ ಕಾಪಾಡುವುದು ಹಾಗೂ ಅಪರಾಧ ಪ್ರಕರಣಗಳ ನಿಯಂತ್ರಮಕ್ಕೆ ಮೊದಲ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.

13
3532 views