logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಬೆಂಗಳೂರಿನಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನಗರದಲ್ಲಿ ಕಾಣಿಸಿಕೊಂಡ ಚಿರತೆ, ಅರಣ್ಯಾಧಿಕಾರಿಗಳ ನಿರ್ಲಕ್ಷೆ, ಸಿಲಿಕಾನ್ ಸಿಟಿಯ ಜನತೆಯ ತಳಮಳ.

ಕಳೆದ ಮಾರ್ಚ್ ತಿಂಗಳ 24ರಂದು ಲಾಲ್ ಬಹುದ್ದೂರ್ ಶಾಸ್ತ್ರಿ ನಗರ ಒಂದನೇ ಹಂತದಲ್ಲಿ ಚಿರತೆಯೊಂದುಕಾಣಿಸಿಕೊಂಡಿದ್ದು ಒಂದು ಕರುವನ್ನು ಬಗೆದು ತಿಂದುಹಾಕಿತ್ತು, ಇದನ್ನು ವಲಯ ಅರಣ್ಯ ಅಧಿಕಾರಿಗಳಿಗೆ ತಿಳಿಸಲಾಗಿತ್ತು. ವಲಯ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು. ನಂತರ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ದೂರವಾಣಿಯ ಮೂಲಕ ಅಹವಾಲನ್ನು ತಿಳಿಸಲಾಗಿದ್ದರೂ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ, ಇದಾಗಿ ಕೆಲವು ದಿನಗಳ ನಂತರ ವಿಭಾಗೀಯ ಅರಣ್ಯಾಧಿಕಾರಿಗಳಿಗೆ ದೂರನ್ನು ದೂರವಾಣಿಯ ಮೂಲಕ ತಿಳಿಸಲಾಗಿತ್ತು. ಆದರೆ ಯಾವುದೇ ಸೂಕ್ತ ಕ್ರಮಗಳನ್ನು ಕೈಗೊಂಡಿಲ್ಲ. ನಂತರ ವಿಭಾಗೀಯ ಅರಣ್ಯಾಧಿಕಾರಿಗಳಿಗೆ ಇಮೇಲ್ ಮೂಲಕ ದೂರನ್ನು ಸಲ್ಲಿಸಲಾಯಿತು ಆದರೂ ಯಾವುದೇ ಕ್ರಮಗಳನ್ನು ಕೈಗೊಳ್ಳುವ ಘೋಷ್ಠಿಗೆ ಹೋಗಲಿಲ್ಲ. ಈ ಪ್ರದೇಶದಲ್ಲಿ ವಾಸವಿರುವ ಚಿರತೆಯು ದಿನಕ್ಕೊಂದು ಬೀದಿ ನಾಯಿಗಳನ್ನು ತಿಂದು ಹಾಕುತ್ತಿದೆ ಮತ್ತು ದಿನೇ ದಿನೇ ಸಾರ್ವಜನಿಕರ ಕಣ್ಣಿಗೂ ಕಾಣಿಸುತ್ತಿದೆ. ಇದರಿಂದಾಗಿ ಜನಸಾಮಾನ್ಯರು ರಸ್ತೆಯಲ್ಲಿ ಓಡಾಡಲು ಹೆದರುತ್ತಿದ್ದಾರೆ. ಈಗಲಾದರೂ ಅರಣ್ಯ ಇಲಾಖೆಯು ಮೈ ಚಳಿಯನ್ನು ಬಿಟ್ಟು ಕರ್ತವ್ಯ ನಿರತರಾಗಿ ಕ್ರಮ ಕೈಗೊಳ್ಳಬೇಕಾಗಿದೆ.

128
7418 views

Comment