Corona Virus: ಕೊರೋನಾಗೆ 21 ವರ್ಷದ ಯುವಕ ಬಲಿ! ದೇಶಾದ್ಯಂತ ಹೆಚ್ಚಾಗ್ತಿದೆ ಮಹಾಮಾರಿ ಅಬ್ಬರ
ಮಹಾರಾಷ್ಟ್ರದ ಠಾಣೆಯಲ್ಲಿ ಕೋವಿಡ್-19 ಸಾಂಕ್ರಾಮಿಕಕ್ಕೆ ಸಂಬಂಧಿಸಿದಂತೆ ಮೊದಲ ಮರಣ ಸಂಭವಿಸಿದೆ ಎಂದು ವರದಿಯಾಗಿದೆ.ಐದು ವರ್ಷಗಳ ಹಿಂದೆ ಇಡೀ ಜಗತ್ತನ್ನೆ ಬೆಚ್ಚಿಬೀಳಿಸಿದ್ದ ಕೊರೊನಾ ವೈರಸ್ (COVID-19) ಈಗ ಮತ್ತೆ ತಾಂಡವವಾಡುತ್ತಿದೆ. ಭಾರತದಲ್ಲಿ ಕಳೆದ ಎರಡು ದಿನಗಳಲ್ಲಿ 257 ಹೊಸ ಪ್ರಕರಣಗಳು ವರದಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಈಗಾಗಲೇ ಮಾಸ್ಕ್ ಧರಿಸಲು, ಸಾಮಾಜಿಕ ಅಂತರ ಕಾಪಾಡಲು ಮತ್ತೆ ಸೂಚನೆಗಳನ್ನು ನೀಡಲಾಗಿದೆ. ಇದೀಗ ಮತ್ತೆ ಲಾಕ್‌ಡೌನ್ ಹೇರಲಾಗುತ್ತಾ?