logo
Select Language
Hindi
Bengali
Tamil
Telugu
Marathi
Gujarati
Kannada
Malayalam
Punjabi
Urdu
Oriya

ಅದಿತಿರುಪತಿ ಎಂದೇ ಹೆಸರುವಾಸಿ ಬುರುಡಗುಂಟೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನ.

ಚಿಕ್ಕಬಳ್ಳಾಪುರ :ಜಿಲ್ಲೆಯ ನೂತನ ಚೇಳೂರು ತಾಲ್ಲೂಕಿನ ಬುರುಡಗುಂಟೆ ಗ್ರಾಮದಲ್ಲಿ ಸಿಗುವ ವೆಂಕಟೇಶ್ವರ ದೇವಸ್ಥಾನ ಮೂಲಗಳ ಪ್ರಕಾರ ಆದಿ ತಿರುಪತಿ ಎಂದು ಅನೇಕ ಗ್ರಾಮಸ್ಥರು ಹೇಳುತ್ತಾರೆ, ಕಲಿಯುಗದ ವೆಂಕಟೇಶ್ವರ ಸ್ವಾಮಿ ಜನ್ಮ ಸ್ಥಳ ಬುರುಡಗುಂಟೆ,ಆ ಪರಮಾತ್ಮ ಮೊದಲು ಇಲ್ಲಿ ನೆಲಸಿ, ದೇವಸ್ಥಾನ ನಿರ್ಮಾಣವಾದಾಗ ಅವರ ತಾಯಿ ವಕುಳಾದೇವಿ ದೇವಸ್ಥಾನದ ಸೌಂದರ್ಯ ಮೆಚ್ಚಿತ್ತಾಳೆ ಆದರೆ ಬಾಗಿಲು ಪಶ್ಚಿಮಕ್ಕೆ ಇದ್ದ ಕಾರಣ ನೀನು ಉದ್ದಾರ ಆಗಲ್ಲ ಎಂದಳು, ಈ ಕಾರಣಕ್ಕೆ ವೆಂಕಟೇಶ್ವರ ಸ್ವಾಮಿ ಬುರುಡಗುಂಟೆ ಬಿಟ್ಟು ತಿರುಪತಿಗೆ ಹೋಗಿ ನೆಲಸಿದ್ದಾರೆ ಎಂದು ಪೂರ್ವಿಕರು ತಿಳಿಸುತ್ತಾರೆ, ನಂತರ ಸುಮಾರು ಶತಮಾನಗಳು ಕಳೆದ ನಂತರ ದೇವಸ್ಥಾನದಲ್ಲಿ ಪೂಜೆಗಳು ಇಲ್ಲದೆ ಹೋಗುತ್ತವೆ, ನಂತರ ಬುರುಡಗುಂಟೆ ಆಸ್ಥಾನದಲ್ಲಿ ಪಾಳೇಗಾರ ವಂಶಸ್ಥರು ಬೊಮ್ಮನಾಯಕ ಹಾಗೂ ತಮ್ಮನಾಯಕ ಎನ್ನುವ ಸಹೋದರರು ದೇವಸ್ಥಾನವನ್ನು ಅಭಿವೃದ್ಧಿ ಮಾಡಿದರುತ್ತಾರೆ, ಆದರೆ ಕಳಕ್ರಮೇಣ ದೇವಸ್ಥಾನ ವು ಪೂಜೆ ಪುನಸ್ಕಾರಗಲಿಲ್ಲದೆ, ಹಾಗೆಯೇ ಉಳಿದಿರುತ್ತದೆ, ಆದರೆ ಈಗ ಬೆಂಗಳೂರಿನ ಪರಿಸರ ಸಂರಕ್ಷಣಾ ಸಂಘ ಹಾಗೂ ಟೈಟನ್ ಕಂಪನಿ ಯವರು ಇತ್ತೀಚಿನ ದಿನಗಳಲ್ಲಿ ಸ್ವಲ್ಪ ದೇವಸ್ಥಾನವನ್ನು ಅಭಿವೃದ್ಧಿ ಮಾಡಿಸುತ್ತಿದ್ದಾರೆ. ವರದಿ ನವೀನ್ ಗರುಡ.

154
6476 views

Comment