logo

ಹೈದರಾಬಾದ್ :- ಕದನ ವಿರಾಮ ಬಿಡಿ, ಪಹಲ್ಗಾಮ್‌ ಭಯೋತ್ಪಾದಕರನ್ನು ಹಿಡಿಯಿರಿ: ಒವೈಸಿ

ತಾರೀಕು 11/05/2025 ಭಾನುವಾರ

ಹೈದರಾಬಾದ್‌: ‘ಕದಾನ ವಿರಾಮ ಇರಲಿ ಬಿಡಲಿ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿರುವವರನ್ನು ಭಾರತ ಬೆನ್ನಟ್ಟುವುದನ್ನು ಮುಂದುವರಿಸಬೇಕು’ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಈ ಬಗ್ಗೆ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಪಾಕಿಸ್ತಾನವು ತನ್ನ ಭೂಪ್ರದೇಶವನ್ನು ಭಾರತದ ವಿರುದ್ಧ ಭಯೋತ್ಪಾದನೆಗೆ ಬಳಸುವವರೆಗೆ ಶಾಶ್ವತ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

‘ಈ ಸಂದರ್ಭದಲ್ಲಿ ಸಶಸ್ತ್ರ ಪಡೆಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ. ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧ ಎಂ. ಮುರಳಿ ನಾಯಕ್, ಎಡಿಸಿಸಿ ರಾಜ್ ಕುಮಾರ್ ಥಾಪಾ ಅವರಿಗೆ ನನ್ನ ಸಂತಾಪಗಳು. ಸಂಘರ್ಷದ ಸಮಯದಲ್ಲಿ ಮೃತಪಟ್ಟ ಮತ್ತು ಗಾಯಗೊಂಡ ಎಲ್ಲಾ ನಾಗರಿಕರಿಗಾಗಿ ನಾನು ಪ್ರಾರ್ಥಿಸುತ್ತೇನೆ’ ಎಂದಿದ್ದಾರೆ.

ಈ ಕದನ ವಿರಾಮವು ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ನೆಮ್ಮದಿ ನೀಡಿದೆ ಎಂದು ನಾನು ಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

1
705 views