ಕೆಐಡಿಬಿಗೆ ಜಮೀನು ನೀಡುತ್ತೇವೆ. ಕೆಐಡಿಬಿ ಕೈಗಾರಿಕೆ ಸ್ಥಾಪಿಸಿ ನಿರುದ್ಯೋಗ ನಿವಾರಣೆ ಮಾಡುವಂತೆ ರೈತರಿಂದ ಪ್ರತಿಭಟನೆ
ಚಿಕ್ಕಬಳ್ಳಾಪುರ:ಶಿಡ್ಲಘಟ್ಟ ತಾಲೂಕಿನ ಜಂಗಮಕೋಟೆ ಹೋಬಳಿಯಲ್ಲಿ ಕೆಐಎಡಿಬಿ,ಮಂಡಳಿಯು ಕೈಗಾರಿಕೆ ಸ್ಥಾಪನೆಗೆ 13, ಹಳ್ಳಿಗಳ 2823, ಎಕರೆ ಜಮೀನು ಭೂಸ್ವಾದಿಕ್ಕೆ ಸಂಬಂದಿಸಿದಂತೆ ಸರ್ಕಾರದ ನೀತಿ ನಿಯಮವಾಳಿಯಂತೆ ಜಮೀನು ನೀಡಲು ಓಪ್ಪಿಗೆ ಸೂಚಿಸಿರುವ ಪ್ರತಿ ರೈತನಿಗೂ ಉತ್ತಮ ಬೆಲೆ ನೀಡಿ ಜಮೀನು ನೀಡಿದ ಪ್ರತಿ ರೈತನ ಮನೆಗೊಂದು ಉದ್ಯೋಗ ನೀಡಿ ತ್ವರಿತ ಗತಿಯಲ್ಲಿ ಕ್ರಮ ವಹಿಸುವಂತೆ ಒತ್ತಾಯಿಸಿ ಜಂಗಮಕೋಟೆ ಹೋಬಳಿ ಕೆಐಎಡಿಬಿ, ಜಮೀನುಗಳ ರೈತರ ಪರ ಹೋರಾಟ ಸಮಿತಿ ಸೋಮವಾರ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.
ಈ ವೇಳೆ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ,ಜಂಗಮಕೋಟೆ ಹೋಬಳಿಯ 13, ಹಳ್ಳಿಗಳಲ್ಲಿ 2823,ಎಕರೆ ಜಮೀನು ಭೂಸ್ವಾದಿನ ಪಡಿಸಿ ಕೈಗಾರಿಕೆಗಳನ್ನು ಪ್ರಾರಂಬಿಸಲು ಸರ್ಕಾರ ಅಧಿಸೂಚನೆ ಹೊರಡಿಸಿದೆ, ಅದರಂತೆ ಎಲ್ಲಾ ರೈತರಿಗೂ ನೋಟೀಸ್ ನೀಡಿದ್ದು, ಸರ್ಕಾರದ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ತಾಲೂಕು ಆಡಳಿತ, ಕೆಐಎಡಿಬಿ, ಮಂಡಳಿ ಅಧಿಕಾರಿಗಳು ಸೇರಿದಂತೆ ಏಪ್ರಿಲ್ 25 ರಂದು ಜಂಗಮಕೋಟೆ ಹೋಬಳಿಯ ಜ್ಯೋತಿ ಅಂಗ್ಲಶಾಲೆಯಲ್ಲಿ 2823,ಎಕರೆ ಜಮೀನುವಿನಲ್ಲಿ ಸರ್ಕಾರಿ ಜಮೀನು ಬಿಟ್ಟು ಉಳಿದ 1088,ಜನ ರೈತಖಾತೆದಾರರಿಗೆ ನೋಟೀಸ್ ನೀಡಿ ಅಬಿಪ್ರಾಯ ಸಂಗ್ರಹಣ ಮಾಡಿದ್ದು, ಆ ಅಬಿಪ್ರಾಯ ಸಂಗ್ರಹಣದಲ್ಲಿ ಸರರ್ಕಾರದ ಪರವಾಗಿ 370,ಜನ ರೈತರು ಬಿಳಿ ಚೀಟಿ, ವಿರುದ್ದವಾಗಿ 400, ಜನ ಕೆಂಪುಚೀಟಿ, 280, ಜನ ರೈತರು ತಮ್ಮ ಯಾವುದೇ ವಿರೋದ ಇಲ್ಲ ಗೈರು ಹಾಜರಾಗಿರುತ್ತಾರೆ, ತಮ್ಮ ಸರ್ಕಾರದ ಕಾನೂನು ನಿಯಮದಲ್ಲಿ ಗೈರು ಹಾಜರಿಯಾದವರನ್ನು ಸದರಿ ಕೈಗಾರಿಕೆ ಸ್ಥಾಪನೆಗೆ ತಮ್ಮ ವಿರೋದ ಎಂದು ಗೈರು ಹಾಜರಿಯಾಗಿರುತ್ತಾರೆ, ಹಾಗಾಗಿ ಓಟ್ಟು ಶೇ 60 ರಷ್ಟು ರೈತರು ಕೈಗಾರಿಕೆಯ ಪರವಾಗಿ ಬೆಂಬಲವನ್ನು ಕೊಟ್ಟಿರುತ್ತಾರೆ. ಅದರಂತೆ ತಾವು ಕೆಐಎಡಿಬಿ, ಮಂಡಳಿಯ ನೀತಿ ನಿಯಮವಾಳಿಯಂತೆ ಪ್ರಕ್ರಿಯೆಗಳನ್ನು ಪ್ರಾರಂಬಿಸಬೇಕು ಮತ್ತು ಕೆಲವರು ಭೂಸ್ವಾದೀನ ಅಬಿಪ್ರಾಯ ಸಂಗ್ರಹಣದಲ್ಲಿ ಯಾರು ಕೆಂಪು ಚೀಟಿ,ಕೊಟ್ಟಿದ್ದಾರೆ, ಯಾರು ಬಿಳಿ ಚೀಟಿ ಕೊಟ್ಟಿದ್ದಾರೆ, ಎಂಬ ಮಾಹಿತಿಯನ್ನು ಪಡೆದು ಗ್ರಾಮಗಳಲ್ಲಿ ಅಶಾಂತ ವತಾವರಣ ಸೃಷ್ಟಿ ಮಾಡಲು ಹೊರಟಿದ್ದಾರೆ, ಇದರಿಂದ ಗ್ರಾಮಗಳಲ್ಲಿ ರೈತರು ರೈತರೇ ಹೊಡೆದಾಡಿಕೊಂಡು ಕೊಲೆಗಳಾಗುವ ಸಂಭವ ಇದೆ ಒಂದು ವೇಳೆ ಗೌಪ್ಯ ಮತದಾನ ಮಾಹಿತಿ ನೀಡಿದಲ್ಲಿ ಗ್ರಾಮಗಳಲ್ಲಿ ಆಗುವ ಅಶಾಂತಿ ವತಾವರಣ,ಗಲಭೆಗಳಿಗೆ,ನೀವೇ ನೇರ ಹೊಣೆಗಾರರಾಗಿರುತ್ತಿರಿ.ಹಾಗಾಗಿ ಯಾವುದೇ ಕಾರಣಕ್ಕೂ ಈ ಗೌಪ್ಯ ಮತದಾನದ ಮಾಹಿತಿಯನ್ನು ಯಾರಿಗೂ ಸೊರಿಕೆ ಆಗದಂತೆ ಕ್ರಮ ವಹಿಸಬೇಕು, ಹಾಗೂ ಈಗಾಗಾಲೇ ಸರ್ಕಾರದ ಅಧಿಸೂಚನೆಯಂತೆ ಕೈಗಾರಿಕಾಪದೇಶಾಭಿವೃದ್ಧಿ ಮಂಡಳಿಯವರು ಅವರ ಕಾನೂನುವಿನಲ್ಲಿರುವ ಅಧಿಕಾರ ಚಲಾವಣೆ ಮಾಡಿತ್ವರಿತ ಗತಿಯಲ್ಲಿ ಜಮೀನು ನೀಡಿದ ಪ್ರತಿ ಎಕರೆಗೆ 2, ಕೋಟಿ ಭೂ ಪರಿಹಾರ ನೀಡಬೇಕು, ಜಮೀನು ನೀಡಿದ ಪ್ರತಿ ರೈತನ ಕುಟುಂಬದಲ್ಲಿ ಓಬ್ಬರಿಗೆ ಖಡ್ಡಾಯವಾಗಿ ಉದ್ಯೋಗ ನೀಡಿ, ಈ ನಮ್ಮ ಹಿಂದುಳಿದ ತಾಲೂಕನ್ನು ಅಭಿವೃದ್ಧಿಪಡಿಸಬೆಕೇಂದು ಮನವಿ ಮಾಡಿದರು.
ಪ್ರತಿಭಟನೆಯ ನಂತರ ಪ್ರತಿಭಟನಾಕಾರರು ಅಪರ ಜಿಲ್ಲಾಧಿಕಾರಿ ಡಾ.ಎನ್.ಭಾಸ್ಕರ್ ರಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರಾಜ್ಯ ಉಪಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಎ,ಎನ್,ಮುನೇಗೌಡ, ಎನ್,ಸಿ ಸುಬ್ರಮಣಿ, ನಡುಪಿನಾಯಕನಹಳ್ಳಿ ವಾಸುದೇವ ಮೂರ್ತಿ,ಬಸವಪಟ್ಟಣ ಆಂಜಿನಪ್ಪ, ಪ್ರಭುಗೌಡ, ಮಧುರಾಮದಾಸ್, ಯಣ್ಣಂಗೂರು ಪ್ರದೀಪ್,ನರಸಿಂಹಮೂರ್ತಿ,ವೈ,ಎಸ್.ಮದು, ರವಿ, ಪ್ರಮೋದ್, ಜಂಗಮಕೊಟೆ ಮಂಜುನಾದ್,ಚೀಂಮಗಲ ಚೆನ್ನಪ್ಪ, ಎಚ್,ಎನ್,ಕದೀರೇಗೌಡ, ಹುಸೇನ್ ಸಾಬ್, ಮತ್ತಿತರರು ಇದ್ದರು.