ಜಮೀನು ವಿವಾದ ಕೊಲೆಯಲ್ಲಿ ಅಂತ್ಯ.
ಮಂಚೇನಹಳ್ಳಿ : ಚಿಕಬಳ್ಳಾಪುರ ಜಿಲ್ಲೆಯ ಗ್ರಾಮ ಪಂಚಾಯಿತಿಯಲ್ಲಿ ಭಾನುವಾರ ಬೆಳಿಗ್ಗೆ ಸುಮಾರು 10-30ರಲ್ಲಿ ಕೊಲೆಯಾಗಿದ್ದು ಇದಕ್ಕೆ ಕಾರಣ ಜಮೀನ ವಿವಾದವಾಗಿದೆ.
ಬಾಲ ಕುಂಟಹಳ್ಳಿ ನಂದೀಶ್ (26) ವಯಸ್ಸು ಎಂಬ ಯುವಕ ತನ್ನ ಸಂಬಂಧಿಯಾದ ಲಕ್ಷ್ಮಿ ನರಸಪ್ಪ (60) ವಯಸ್ಸು ರವರ ಮನೆಗೆ ಮಾತನಾಡಲು ಬೆಳಿಗ್ಗೆ ಬಂದಿದ್ದನು.
ಆದರೆ ಮಾತಿಗೆ ಮಾತು ಪರಸ್ಪರ ಬೆಳೆದು ನಂದೀಶ್ ಏಕಾಏಕಿ ಮಚ್ಚಿನಲ್ಲಿ ಚಿಕ್ಕನರಸಿಂಹಪ್ಪ ಹಲ್ಲೆ ನಡೆಸಿದ್ದಾನೆ, ಇನ್ನು ಸಂಬಂಧಿಕರು ಬಿಡಿಸಲು ಬಂದರೆ ಹಲ್ಲೇ ಮಾಡಲು ಮುಂದಾಗಿದ್ದಾನೆ, ಕೊನೆಗೆ ಕೊಲೆಯಲ್ಲಿ ಅಂತ್ಯವಾಗಿದೆ.
ಚಿಕ್ಕನರಸಿಂಹಪ್ಪ ನವರ ಕುಟುಂಬಸ್ಥರ ಆಕ್ರಂದನ ನೋಡಲಾರದ ಪರಿಸ್ಥಿತಿಯಲ್ಲಿತ್ತು.
ಈ ವಿಷಯ ತಿಳಿದ ಕೂಡಲೇ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆಆಗಮಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆ ಮುಂದುವರಿಸಿದ್ದಾರೆ .