ಕೆಐಡಿಬಿಗೆ ಜಮೀನು ನೀಡಲು ರೈತರ ಪರ ಹೋರಾಟ ಸಮಿತಿಯಿಂದ ಅಭ್ಯಂತರವಿಲ್ಲಾ-ಭಕ್ತರಹಳ್ಳಿ ಪ್ರತೀಶ್
ಚಿಕ್ಕಬಳ್ಳಾಪುರ: ಕೆಐಎಡಿಬಿ ಅಧಿಸೂಚನೆಯಂತೆ ದೇವನಹಳ್ಳಿ ವಿಮಾನ ನಿಲ್ದಾಣದ ಸಮೀಪದಲ್ಲಿರುವ ಶಿಡ್ಲಘಟ್ಟ ತಾಲ್ಲೂಕಿನ ಜಂಗಮಕೋಟೆ ಭಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಿದರೆ ಜಮೀನು ಬಿಟ್ಟು ಕೊಡಲು ಸಿದ್ಧ. ರೈತರ ಪರ ಹೋರಾಟ ಸಮಿತಿಯಿಂದ ಅಭ್ಯಂತರವಿಲ್ಲಾ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಹೇಳಿದರು.
ನಗರದ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿ, ಭೂಸ್ವಾದಿನಕ್ಕೆ ಒಳಪಟ್ಟಿರುವ 13, ಹಳ್ಳಿಗಳ 2823,ಎಕರೆಯಲ್ಲಿ ಸರ್ಕಾರದ ಜಮೀನು ಬಿಟ್ಟು ಉಳಿದಂತೆ 1082,ಜನ ರೈತಖಾತೆದಾರಾರಿದ್ದು ಎಲ್ಲರಿಗೂ ನೊಟೀಸ್ ನೀಡಿ ಅಬಿಪ್ರಾಯ ಸಂಗ್ರಹಣೆ ಮಾಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ,ಕೆಐಎಡಿಬಿ ಭೂ ಸ್ವಾಧೀನಕ್ಕೆ ಅಧಿಸೂಚನೆ ನಂತರ ರಾಜ್ಯದ ಎಲ್ಲಿಯೂ ಈವರೆಗೂ ರೈತರ ಅಭಿಪ್ರಾಯ ಸಂಗ್ರಹಿಸಿ ಭೂ ಸ್ವಾಧೀನ ಪಡಿಸಿಕೊಳ್ಳುವ ಪ್ರಕ್ರಿಯೆ ನಡೆದಿಲ್ಲ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ಮತ್ತು ಶಿಡ್ಲಘಟ್ಟ ಶಾಸಕ ಬಿ.ಎನ್.ರವಿಕುಮಾರ್ ನೇತತದಲಿ ಮೊದಲ ಬಾರಿಗೆ ರೈತರಅಭಿಪ್ರಾಯ ಸಂಗ್ರಹಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಡ್ಲಘಟ್ಟ ತಾಲ್ಲೂಕು ಅಭಿವೃದ್ಧಿ ಹೊಂದುವ ಜೊತೆಗೆ ಈ ಭಾಗದ ನಿರುದ್ಯೋಗ ಯುವಕ, ಯುವತಿಯರಿಗೆ ಉದ್ಯೋಗ ಕಲ್ಪಿಸಿದಂತಾಗುತ್ತದೆ. ತಾಲ್ಲೂಕಿನ ಯಾವುದೇ ಭಾಗದಲ್ಲಿ ಕೈಗಾರಿಕಾ ಪ್ರದೇಶ ಮಾಡಿದರೂ ಸಹ ರೈತರ ಭೂಮಿಗಳಲ್ಲಿಯೇ ಮಾಡಬೇಕಲ್ಲ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವರು. ಸ್ಥಳಿಯ ಶಾಸಕರು ಈ ಬಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಿ ನಿರುದ್ಯೋಗ ಸಮಸ್ಯೆ ನಿವಾರಣೆ ಮಾಡಿ ಭೂಮಿ ಕಳೆದುಕೊಂಡ ಪ್ರತಿ ರೈತನ ಕುಟುಂಬಕ್ಕೆ ಒಂದು ಉದ್ಯೋಗ, ಉತ್ತಮ ಹೆಚ್ಚಿನ ಬೆಲೆ, ನೀಡಿದಲ್ಲಿ ನಿಮ್ಮ ಪೊಟೊಗಳನ್ನು ಪ್ರತಿ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುತ್ತೇವೆಂದರು.
ಜಿಲ್ಲಾ ಉಸ್ತುವಾರಿ ಸಚಿವರು ಹಸೀರು ಶಾಲು ಹಾಕಿಕೊಂಡಿರುವವರು ಮಾತ್ರ ರೈತರು ಹಸಿರು ಶಾಲು ಹಾಕದೇ ಇರುವವರೆಲ್ಲ ರೈತರಲ್ಲವೇ, ಎಂಬ ಹೇಳಿಕೆ ಸಮಂಜಸವಾಗಿರುತ್ತದೆ, ಏಕೆಂದರೆ ಕೇವಲ ನೂರು ಎಕರೆ ಜಮೀನು ಇರುವವರು ಮಾತ್ರ ರೈತರೇ, ದಿನಕ್ಕೆ ನೂರು ಲೀಟರ್ ಹಾಲು ಉತ್ಪಾದನೆ ಮಾಡುವವರು ರೈತರೇ, ಅಥವಾ ರೈತ ಶಾಲು ಹಾಕಿಕೊಂಡವರು ಮಾತ್ರ ರೈತರು ಎಂದು ಯಾವುದಾದರೂ ಕಾನೂನುನಲ್ಲಿ ದಾಖಲೆ ಇದಿಯಾ? ನಮ್ಮ ಸಂವಿದಾನದ ಅಡಿಯಲ್ಲಿ ಬಾಯಿಂದ ಆಹಾರ ಸೇವೆನೆ ಮಾಡುವ ಪ್ರತಿಯೊಬ್ಬ ಭಾರತೀಯನಿಗೂ ಕೂಡ ವವ್ಯಸಾಯ ಮಾಡಲಿ ಮಾಡದೇ ಇರಲಿ ರೈತನ ಬಗ್ಗೆ ಧ್ವನಿ ಎತ್ತಬಹುದು ರೈತರ ಹೊರಾಟಗಳಲ್ಲಿ ಬಾಗಿಯಾಗಬಹುದು.ಜಂಗಮಕೋಟೆ ಹೊಬಳಿಯಲ್ಲಿ ಪಿ ಎನ್ ಎಲ್, ಕೆಂಪನಿಯ ಹೆಸರಿನಲ್ಲಿ ಕೆಲ ಮದ್ಯವರ್ತಿಗಳು ಅಮಾಯಕ ರೈತರಿಗೆ ಹೆಚ್ಚಿನ ಬೆಲೆ ನೀಡುವುದಾಗಿ ನಂಬಿಸಿ ಕೇವಲ 50 ಸಾವಿರ 1 ಲಕ್ಷ ಹಣ ನೀಡಿ ಜಿಪಿಎ, ಮಾಡಿಸಿಕೊಂಡು ಮೊಸ ಮಾಡಿರುತ್ತಾರೆ, ಆದರೆ ಪಹಣಿಯಲ್ಲಿ ರೈತರ ಹೆಸರು ಇರುವ ಕಾರಣ ಅವರ ಅಬಿಪ್ರಾಯವು ಕೇಳಿದ್ದಾರೆ, ಇದರಲ್ಲಿ ತಪ್ಪೆನಿದೆ, ನೀವು ಪಿಎಸ್ ಎಲ್ ಕೆಂಪನಿಯ ಪರವಾಗಿ ಮತನಾಡಲು ನೀವು ಆ ಆಕ್ರಮ ವವ್ಯಹಾರಗಳಲ್ಲಿ ಪಾಲುದಾರರಾಗಿದ್ದೀರಾ? ಎಂದು ಕೆಐಡಿಬಿಗೆ ಜಮೀನು ನೀಡಲು ವಿರೋಧಿಸುತ್ತಿರುವ ಬಣವನ್ನು ಪ್ರಶ್ನಿಸಿದರು.
ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಸರ್ಕಾರದ ಕಾನೂನುಯಾವ ರೀತಿ ಇದಿಯೊ ಆ ರೀತಿ ಅವರಿಗೆ ದತ್ತವಾದ ಅಧಿಕಾರವನ್ನು ಉಪಯೋಗಿಸಿಕೊಂಡು ತ್ವರಿತ ಗತಿಯಲ್ಲಿ ಜಮೀನು ಒಪ್ಪಿಗೆ ನೀಡಿದ ರೈತರಿಗೆ ಉತ್ತಮ ಬೆಲೆ,ಮನೆಗೊಂದು ಉದ್ಯೋಗ ನೀಡಿ ಬಹು ಬೇಗ ಕೈಗಾರಿಕೆಗಳನ್ನು ಸ್ಥಾಪಿಸಿ ಈ ಬಾಗದ ನಿರುದ್ಯೋಗ ನಿವಾರಣೆ ಮಾಡಬೇಕೇಂದು ಮನವಿ ಮಾಡಿದರು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಮಾತನಾಡಿ, ಜಂಗಮಕೋಟೆ ಜ್ಯೋತಿ ಅಂಗ್ಲ ಪೌಡಶಾಲೆಯಲ್ಲಿ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯ ಭೂಸ್ವಾದಿನಕ್ಕೆ ಒಳಪಟ್ಟಿರುವ 13, ಹಳ್ಳಿಗಳ 2823,ಎಕರೆಯಲ್ಲಿ ಸರ್ಕಾರದ ಜಮೀನು ಬಿಟ್ಟು ಉಳಿದ 1082,ಜನ ರೈತಖಾತೆದಾರಾರಿದ್ದು ಎಲ್ಲರಿಗೂ ನೊಟೀಸ್ ನೀಡಿ ಅಬಿಪ್ರಾಯ ಸಂಗ್ರಹಣೆ ಮಾಡಿರುವ ಕ್ರಮವನ್ನು ನಾವು ಸ್ವಾಗತಿಸುತ್ತೇವೆ,ಇದು ಇತಿಹಾಸದಲ್ಲಿ ಪ್ರದಮವಾಗಿದೆ ಮತ್ತು ರೈತರ ಅಬಿಪ್ರಾಯ ಸಂಗ್ರಹಣದಲ್ಲಿ ಶಾಸಕ ಬಿ.ಎನ್.ರವಿಕುಮಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್ ರವರು ಬೆಳ್ಳೆಗ್ಗೆಯಿಂದ ಸಂಜೆ 8,ಗಂಟೆಯವರೆವಿಗೂ ಸ್ಥಳದಲ್ಲಿದ್ದು ಒಬ್ಬ ಸಾಮಾನ್ಯ ರೈತನಂತೆ ರೈತರಿಗೆ ಮಾಡಿದ ಉಪಹಾರವನ್ನೇ ಸೇವಿಸಿ ರೈತರ ಕೆಲಸದಲ್ಲಿ ಇಡಿ ದಿನ ಕಳೆದಿದ್ದು ಇತಿಹಾಸದ ಪುಟಗಳಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಹಾಗಾಗಿ ನಾವು ಅವರಿಗೆ ಚಿರಋುಣಿಗಳು ಎಂದರು.
ಅಬಿಪ್ರಾಯ ಸಂಗ್ರಹಣದಲ್ಲಿ ಖಾತೆದಾರರಲ್ಲದೆ ಇರುವ ಕೆಲ ರೈತರು ಉದ್ದೇಶಪೂರ್ವಕವಾಗಿ ಕೆಂಪು ಚೀಟಿ ಬರೆದುಕೊಟ್ಟಿದ್ದಾರೆ, ಇದರಲ್ಲಿ ತಾಲೂಕು ಆಡಳಿತ ನಿರ್ಲಕ್ಷ್ಯ ವಹಿಸಿದೆ, ಹೊರಗಡೆ ಕೆಲ ನೊಟೀಸ್ ಗಳನ್ನೇ ಕಲರ್ ಪ್ರೀಂಟ್ ಮಾಡಿಸಿಕೊಂಡು ಬಂದು ಅದನ್ನ ತೋರಿಸಿ ಓಳಗೆ ಬಂದು ಬೆಳ್ಳೆಗ್ಗೆಯಿಂದ ಸಂಜೆಯವರೆವಿಗೂ ಅಲ್ಲಿಯೇ ಸೇರಿಕೊಂಡು ಪ್ರತಿ ಕೊಠಡಿಯ ಓಳಗೆ ಹೋಗಿ ಕೆಂಪುಚೀಟಿ ಬರೆದುಕೊಡಲು ಪ್ರೇರಪಣೆ ನೀಡಿದರು. ಅಲ್ಲಿನ ಸ್ಥಳಿಯ ಪೋಲಿಸರು ಮುಲಾಜಿಗೆ ಓಳಪಟ್ಟು ನೋಡಿಯೂ ನೋಡದಂಗೆ ಸುಮ್ಮನಾದರೂ ಈ ರೀತಿಯ ಬಲವಂತದ ಕೆಂಪು ಚೀಟಿಗಳ ಸಂಖ್ಯೆ 60 ರಿಂದ 70 ಆದವು ಎಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ರಾಜ್ಯ ಉಪಾದ್ಯಕ್ಷ ಬೆಳ್ಳೂಟಿ ಮುನಿಕೆಂಪಣ್ಣ, ಎ,ಎನ್,ಮುನೇಗೌಡ, ಎನ್,ಸಿ ಸುಬ್ರಮಣಿ, ನಡುಪಿನಾಯಕನಹಳ್ಳಿ ವಾಸುದೇವ ಮೂರ್ತಿ,ಬಸವಪಟ್ಟಣ ಆಂಜಿನಪ್ಪ,ಪ್ರಭುಗೌಡ,ಮದುರಾಮದಾಸ್, ಯಣ್ಣಂಗೂರು ಪ್ರದೀಪ್,ನರಸಿಂಹಮೂರ್ತಿ,ವೈ,ಎಸ್ ಮದು,ರವಿ,ಪ್ರಮೋದ್,ಜಂಗಮಕೊಟೆ ಮಂಜುನಾದ್,ಚೀಂಮಗಲ ಚೆನ್ನಪ್ಪ, ಎಚ್,ಎನ್,ಕದೀರೇಗೌಡ, ಹುಸೇನ್ ಸಾಬ್,ಮತ್ತಿತರರು ಇದ್ದರು.