
ಅದ್ಧೂರಿ ಮೆರವಣಿಗೆ: ನಿವೃತ್ತಿಗೊಂಡ ಸೈನಿಕ
ಭಾರತೀಯ ಸೇನೆಯಲ್ಲಿ 22 ವರ್ಷ
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ
ಗೋತಗಿ ಗ್ರಾಮ ನಿವೃತ್ತ ಯೋಧ ಅಂದಾನ ಯ್ಯ ಹಿರೇಮಠ
ಭಾರತೀಯ ಸೇನೆಯಲ್ಲಿ 22 ವರ್ಷ ಸೇವೆ
ಸಲ್ಲಿಸಿದ್ದು ನನ್ನ ಪುಣ್ಯವೆಂದು ನಿವೃತ್ತ ಯೋಧ ಅಂದಾನ ಯ್ಯ ಹಿರೇಮಠ ಹೇಳಿದರು. ಸೇನಾ ನಿವೃತ್ತಿಯಾದ ಹಿನ್ನೆಲೆಯಲ್ಲಿ ತಾಲೂಕಿನ ಗೋತಗಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅಭಿನಂದಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.ಸೇನೆಯಿಂದ ನಿವೃತ್ತಿಯಾ ದರೂ ಜನ ಸೇವೆ ಮಾಡುತ್ತೇನೆ ಎಂದ ಅವರು, ಯು ವಕರು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗಿ ಜೀವನ ಕಟ್ಟಿಕೊಳ್ಳಬೇಕು. ದುಶ್ಚಟಗಳಿಗೆ ಬಲಿಯಾಗದೆ ಸದೃಢವಾದ ಬದುಕು ನಡೆಸಬೇಕು ಎಂದರು. ಅಫಜಲ ಪುರದ ವೀರಮಹಾಂತ ಸ್ವಾಮೀಜಿ ಮಾತನಾಡಿ, ಸೈನಿಕರು ಎಂದರೆ ದೇವರಿಗಿಂತ ದೊಡ್ಡವರು. ನಮ್ಮನ್ನು ಕಾಪಾಡಲು ಗಡಿ ಕಾಯುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾವು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದರು. ಪ್ರಾಸ್ತಾವಿಕ ಮಾತನಾಡಿ ಶಿಕ್ಷಕ ನಟರಾಜ ಸೋನಾರ, ದೇಶ ಕಾಯುವ ಸೈನಿಕರು ಹಾಗೂ ಅನ್ನ ಹಾಕುವ ರೈತರು ಮಾತ್ರ ನಮ್ಮ ಹಿರೋಗಳು ಎಂದು ಕರೆಯಬೇಕು ಎಂದರು.
ಅದ್ಧೂರಿ ಮೆರವಣಿಗೆ: ನಿವೃತ್ತಿಗೊಂಡ ಸೈನಿಕ
ಅಂದಾನಯ್ಯ ಹಿರೇಮಠ ಅವರನ್ನು ಕುಷ್ಟಗಿಯ ಮಲ್ಲಯ್ಯ ವೃತ್ತ, ಮತ್ತು ಟಕ್ಕಳಕಿ ಬಿಜಕಲ್ಲ ಹೆಸರೂರು ಮಾರ್ಗವಾಗಿ ದೋಟಿಹಾಳ ಶುಖಮುನಿ ಸ್ವಾಮಿ ದೇವಸ್ಥಾನದಲ್ಲಿ ಸನ್ಮಾನಿಸಲಾಯಿತು. ಗೋತಗಿಯಲ್ಲಿ ಕುದುರೆ ಮೇಲೆ ಕೂಡ್ರಿಸಿ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯಮೇಳಗಳೊಂದಿಗೆ ಅದ್ದೂರಿಯಾಗಿ ಮೆರವಣಿಗೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ಮಹಾಂತೇಶ ಹಂದ್ರಾಳ, ದೇವರಾಜ ತೆಗ್ಗಿಹಾಳ, ಶಿವಾನಂದಯ್ಯ ಹಿರೇಮಠ, ತಿಮ್ಮಣ್ಣ ದಾಸರ, ಚನ್ನಯ್ಯ ಹಿರೇಮಠ, ಮಹಾಂತೇಶ ಕಮತರ, ಶರಣಪ್ಪ ಚಕ್ರ ಗಟ್ಟಿ, ಮುತ್ತು ಬೀಳಗಿ, ಅಶೋಕ ಬೋದೂರು, ಗುರುನಗೌಡ ಮುಕ್ಕಣ್ಣವರ, ಮುತ್ತು ಬೂದಿಹಾಳ, ಮುತ್ತು ಪಾಟೀಲ, ಶಿವರಾಜ ಪಾಟೀಲ ಇದ್ದರು.