logo

ಸಿಂಧನೂರು ನಗರದ ವಿವಿಧ ಕಾಮಗಾರಿಗಳಿಗೆ ಅಡಿಗಲ್ಲು ಹಾಗೂ ಭೂಮಿ ಪೂಜೆ ನೆರವೇರಿಸಿದ ಎಂಎಲ್ ಸಿ ಬಸನಗೌಡ ಬಾದರ್ಲಿ


ಸಿಂಧನೂರು. ಎಪ್ರಿಲ್ ೨೯
ವಿಧಾನ ಪರಿಷತ್ತ ಶಾಸಕರ ಸ್ಥಳಿಯ ಪ್ರದೇಶಾಭಿವೃದ್ದಿ ಯೋಜನೆಯಡಿ ಹಾಗೂ ಕೆಕೆಆರ್ ಡಿಬಿ ಯೋಜನೆಯಡಿಯ ಅನುದಾನದ ಅಡಿಯಲ್ಲಿ ಬಸನಗೌಡ ಬಾದರ್ಲಿ ಶಾಸಕರು ವಿಧಾನ ಪರಿಷತ್ತು ರವರು ಸಿಂಧನೂರು ತಾಲೂಕಿನ ನಗರದ ಕುಷ್ಟಗಿ ರಸ್ತೆಯಲ್ಲಿರುವ ಡಾ|| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ಸ್ ನಂತರದ ಬಾಲಕರ ವಸತಿ ನಿಲಯದ ರೂ. 11.00 ಲಕ್ಷದ ಅಭಿವೃದ್ದಿ ಕಾಮಗಾರಿ, ಕುಷ್ಟಗಿ ರಸ್ತೆಯಲ್ಲಿರುವ ಡಾ|| ಬಿ.ಆರ್ ಅಂಬೇಡ್ಕರ್ ಮೆಟ್ರಿಕ್ಸ್ ನಂತರದ ಬಾಲಕಿಯರ ವಸತಿ ನಿಲಯದ ರೂ. 10.69 ಲಕ್ಷದ ಅಭಿವೃದ್ದಿ ಕಾಮಗಾರಿ ಹಾಗೂ ನಗರದ ಶಿವಜ್ಯೋತಿ ನಗರ ಕಾಲೋನಿಯಲ್ಲಿರುವ ಪರಿಶಿಷ್ಟ ಪಂಗಡ ಮೆಟ್ರಿಕ್ಸ್ ನಂತರದ ಬಾಲಕಿಯರ ವಸತಿ ನಿಲಯದ ರೂ. 18.00 ಲಕ್ಷದ ಅಭಿವೃದ್ದಿ ಕಾಮಗಾರಿಗಳ ಅಡಿಗಲ್ಲು ಮತ್ತು ಭೂಮಿ ಪೂಜೆ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿದರು. ಈ ವೇಳೆ ಹಬೀಬ್ ಖಾಜಿ,ಯೂಸುಫ್ ಏತ್ಮಾರಿ, ಹನುಮಂತ ಕರ್ಣಿ, ಶಹಬಾಜ್, ವೀರೇಶ ರಾರಾವಿ, ಚನ್ನಪ್ಪ ಅಗಸಿ, ಚನ್ನಬಸವ, ಚಂದ್ರಶೇಖರ ಬಾದರ್ಲಿ, ಚನ್ನಬಸವ ಕೋಟೆ, ಪ್ರಶಾಂತ, ಸಂತೋಷ ಹುಡಾ, ಅಮರೇಶ್ ಹತ್ತಿಗುಡ್ಡ, ಮುನ್ನ, ರಫಿ ಹಾಗೂ ಇತರರು ಉಪಸ್ಥಿತರಿದ್ದರು.


ವರದಿ:ಎಸ್. ಎನ್. ವೀರೇಶ
ಸಿಂಧನೂರು. ರಾಯಚೂರು .ಜಿಲ್ಲೆ

123
9293 views