
ರಾಷ್ಟ್ರೀಯ ಹೆದ್ದಾರಿ ರಸ್ತೆ ಬದಿಯ ಗಿಡಗಳಿಗೆ ನೀರು ಹಾಕಿರೋ ದಿಕ್ಕಿಲ್ಲ..?
ರಸ್ತೆ ಪ್ರಾಧಿಕಾರ ಇರೋದು ಬರೀ ದುಡ್ಡು ಮಾಡ್ಲಿಕ್ಕೆ ಅಷ್ಟೇ..!
ಚಿಕ್ಕನಾಯಕನಹಳ್ಳಿ, ಪಟ್ಟಣದಲ್ಲಿ 150A ರಾಷ್ಟ್ರೀಯ ಹೆದ್ದಾರಿ ಜೀವರ್ಗಿಯಿಂದ ಮೈಸೂರಿಗೆ ಹಾದು ಹೋಗುವ ಈ ರಸ್ತೆಯ ಇಕ್ಕೆಲಗಳಲ್ಲಿ ನೆಡಲಾದ ಗಿಡಗಳಿಗೆ ನೀರು ಹಾಕುವ ವಿಚಾರ ಸಂಪೂರ್ಣವಾಗಿ ನಿರ್ಲಕ್ಷ್ಯಕ್ಕೆ ಒಳಪಟ್ಟಿದೆ.
ರಸ್ತೆ ಪ್ರಾಧಿಕಾರದ ಅಧಿಕಾರಿಗಳು "ಗಿಡ ನೆಡಿಸಿದ್ದೇವೆ, ನೀರು ಹಾಕುತ್ತೇವೆ" ಎಂದು ಹೇಳಿ ಲಕ್ಷಾಂತರ ರೂಪಾಯಿಗಳ ಬಿಲ್ಲುಗಳನ್ನು ಮಾಡಿಕೊಂಡು, ಬಳಿಕ ಕಣ್ಮರೆಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ರಸ್ತೆಯ ಇಕ್ಕೆಲಗಳಲ್ಲಿ ಮತ್ತು ಮಧ್ಯಭಾಗದಲ್ಲಿ ನೆಡಲಾಗಿರುವ ಸಸಿಗಳು ಎಷ್ಟು ಕಾಲದವೋ ಎಂಬಂತೆ ಒಣಗುತ್ತಿದ್ದು, ಇಲ್ಲಿವರೆಗೆ ಯಾವುದೇ ಅಧಿಕಾರಿ ಅಥವಾ ಕಾಂಟ್ರಾಕ್ಟರ್ ತಿರುಗಿ ನೋಡುವ ಮಾತೇ ಇಲ್ಲ.
ಆದರೆ, ಈ ಪರಿಸ್ಥಿತಿಯಲ್ಲಿ ಪ್ರಜ್ಞಾವಂತ ಸಂಘಟನೆಗಳು ತಾವು ಹೊಣೆ ಹೊತ್ತಂತೆ ನಡೆದುಕೊಂಡಿದ್ದು ಗಮನಾರ್ಹ. ಡಿಎಸ್ಎಸ್ (DSS) ಸಂಘಟನೆಯು, ಟ್ರ್ಯಾಕ್ಟರ್ ಮೂಲಕ ನೀರು ಹರಿಸಿ, ಗಿಡಗಳನ್ನು ಉಳಿಸಲು ಮುಂದಾಗಿದೆ. ಇದರಿಂದಾಗಿ, ಸಾಮಾಜಿಕ ಜವಾಬ್ದಾರಿ ಮತ್ತು ಪ್ರಕೃತಿಯ ಮೇಲಿನ ಪ್ರೀತಿ ವ್ಯಕ್ತವಾಗಿದೆ.
ಈ ಕಾರ್ಯಾಚರಣೆಯಲ್ಲಿ DSS ತಾಲೂಕು ಅಧ್ಯಕ್ಷ ಲಿಂಗದೇವರು, ರಂಗನಾಥ್ ಕೆಎಚ್, ಅಲೆಮಾರಿ ಸಂಘದ ಅಧ್ಯಕ್ಷ ರಂಗನಾಥ್, ಮತ್ತು ಕೃಷ್ಣಮೂರ್ತಿ ಸೇರಿದಂತೆ ಹಲವರು ಪಾಲ್ಗೊಂಡು ನೀರು ಹರಿಸುವ ಕಾರ್ಯ ನಡೆಸಿದರು.
ಜನಪ್ರತಿನಿಧಿಗಳು ಹಾಗೂ ಪ್ರಾಧಿಕಾರದ ಅಧಿಕಾರಿಗಳು ಈಗಾಗಲೇ ಎಚ್ಚೆತ್ತುಕೊಳ್ಳಬೇಕಾದ ಸಮಯ ಇದು. ಗಿಡ ನೆಡುವುದಕ್ಕಿಂತ, ಅವು ಬೆಳೆಯುವ ಪರಿಸರವನ್ನು ಒದಗಿಸುವ ಜವಾಬ್ದಾರಿ ಕೂಡ ಇದೆ ಎಂಬುದನ್ನು ಮರೆತಿದ್ದರೆ, ಪರಿಸರ ಸಂರಕ್ಷಣೆಯ ಹಾದಿ ಪೂರಕವಲ್ಲ ಎಂಬುದು ಸ್ಪಷ್ಟವಾಗುತ್ತದೆ.