logo

ಪರಿಶ್ರಮ ಇದ್ದಾಗ ಮಾತ್ರ ಆರ್ಥಿಕ ಲಾಭಗಳಿಸಲು ಸಾಧ್ಯ ಎಸ್. ಆರ್.ಗೌಡ ತುಮಕೂರು ಹಾಲು ಒಕ್ಕೂಟದಿಂದ ಶಿರಾ ನಂದಿನಿ ಕ್ಷೀರ ಭವನದಲ್ಲಿ ಕಾರ್ಯಕ್ರಮ"

ಹಾಲಿನ ಉತ್ಪಾದನೆ ಕಡಿಮೆ ಇರುವ ಸಂಘಗಳಿಗೆ, ಉತ್ಪಾದನೆ ಹೆಚ್ಚಳ ಮಾಡಿ ಕೊಂಡು, ಗುಣಮಟ್ಟದ ಹಾಲು ಡೇ ರಿಗಳಿಗೆ ನೀಡಲಿ ಎಂಬ ಸದುದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಮಿಷನ್ ಯೋಜನೆಯಡಿ ಹೈನುಗಾರಿಕೆ ಮಾಡುವಂತಹ ರೈತರಿಗೆ 40 .ಕ್ವಿಂಟಲ್ ಬಿತ್ತನೆ ಮೇವು ಬೀಜ ವಿತರಣೆ ಮಾಡಿದ್ದೇವೆ. ಎಲ್ಲಾ ಹಾಲು ಉತ್ಪಾದಕರಿಗೆ ಬಿತ್ತನೆ ಬೀಜ ವಿತರಣೆ ಮಾಡುವ ಗುರಿ ಹೊಂದಲಾಗಿದ್ದು, ಸಂಘದ ಕಾರ್ಯದರ್ಶಿಗಳ ಮೂಲಕ ಬೇಡಿಕೆ ಸಲ್ಲಿಸಬಹುದಾಗಿದೆ. ಇದಲ್ಲದೆ ತುಮಕೂರು ಹಾಲು ಒಕ್ಕೂಟ ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂಬ ದೃಢ ಸಂಕಲ್ಪ ದೊಂದಿಗೆ ಸೆಕ್ಸ್ಡ್ ಸೆವೆನ್ ಎಂಬ ಲಸಿಕೆಯನ್ನು ಸೀಮೆ ಹಸುಗಳಿಗೆ ನೀಡಿತ್ತಿದೆ, ಇಲಸಿಕಿಯಿಂದ ಹಸು ಗರ್ಭ ಧರಿಸಿ ಹೆಣ್ಣು ಕರುವಿಗೆ ಜನುಮ ನೀಡಲಿದ್ದು, ಈ ಹೆಣ್ಣು ಕರು ವನ್ನು ಉತ್ತಮವಾಗಿ ಪೋಷಣೆ ಮಾಡಿ ಬೆಳೆಸಿದರೆ ಕರು ಬೆಳೆದು ಹಸುವಾಗಿ ಉತ್ತಮ ಹಾಲು ನೀಡಲಿದ್ದು ಉತ್ಪಾದಕರು ಆರ್ಥಿಕವಾಗಿ ಸದೃಢರಾಗಬಹುದು. ಪರಿಶ್ರಮ ಇದ್ದಾಗ ಮಾತ್ರ ಆರ್ಥಿಕ ಲಾಭಗಳಿಸಲು ಸಾಧ್ಯವಾಗಲಿದೆ ಎಂದು ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಎಸ್. ಆರ್.ಗೌಡ ಹೇಳಿದರು*.
ಶಿರಾ ನಗರದ ನಂದಿನಿ ಕ್ಷೀರ ಭವನದಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ರೈತರಿಗೆ ಮೇವು ಬಿತ್ತನೆ ಬೀಜ ಮತ್ತು ನೇಪಿಯರ್ ಕಡ್ಡಿಗಳನ್ನು ವಿತರಣೆ ಮಾಡಿ ಮಾತನಾಡಿದರು.
ಈಗಾಗಲೇ ತುಮಕೂರು ಹಾಲು ಒಕ್ಕೂಟ 21. ಎಕರೆ ಪ್ರದೇಶದಲ್ಲಿ ಪ್ರೋಟೀನ್ ಹೆಚ್ಚಾಗಿರುವ ಗುಣಮಟ್ಟದ ನೇಪಿಯರ್ ಕಡ್ಡಿಗಳನ್ನು ಬೆಳೆಸಿದ್ದು ಇದನ್ನು ರೈತರ ಅಗತ್ಯಕ್ಕೆ ಅನುಗುಣವಾಗಿ ವಿತರಣೆ ಮಾಡುತ್ತಿದ್ದೇವೆ. ಹಸಿರಿನಿಂದ ಕೂಡಿದ
ನೇಪಿಯರ್ ಕಡ್ಡಿ ಮೇವು ಸೀಮೆ ಹಸುಗಳಿಗೆ ನೀಡಿದರೆ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದ್ದು ಆರ್ಥಿಕ ಲಾಭ ಕೂಡ ಹೆಚ್ಚಳವಾಗಲಿದೆ ಎಂದರು.
ತುಮಕೂರು ಹಾಲು ಒಕ್ಕೂಟದ ವ್ಯವಸ್ಥಾಪಕ ಚಂದ್ರಶೇಖರ ಕೇದನೂರ, ಉಪ ವ್ಯವಸ್ಥಾಪಕ ಗಿರೀಶ್, ವಿಸ್ತರಣಾಧಿಕಾರಿ ಚೈತ್ರ, ಡಾ. ಶೃತಿ, ಡಾ. ಶ್ರೀಕಾಂತ್, ಕೆಮಿಸ್ಟರ್ ಪಿ.ಎಂ.ಬಾಬಾ ಫಕ್ರುದ್ದೀನ್, ಸಮಾಲೋಚಕ ಹನುಮಂತರಾಯ ಸೇರಿದಂತೆ ಶಿರಾ ತಾಲೂಕಿನ ಹಲವಾರು ಹಾಲು ಉತ್ಪಾದಕರ ಸಂಘದ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

2
198 views