logo

ಯಾದವಾಡ ಹಳ್ಳಕ್ಕೆ ಕಾಲುವೆ ಮೂಲಕ ನೀರು ತಲುಪುವಂತೆ ಮಾಡಿದ ಶಾಸಕ ಬಾಲಚಂದ್ರ ಜಾರಕಿಹೊಳಿ.*

*ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆ ಸಲ್ಲಿಸಿದ ಯಾದವಾಡ ಗ್ರಾಮಸ್ಥರು*

*ಯಾದವಾಡ* – ಯಾದವಾಡ ಗ್ರಾಮದಲ್ಲಿಂದು ಘಟ್ಟಗಿ ಬಸವೇಶ್ವರ ಜಾತ್ರೆಯು ಆರಂಭಗೊಂಡಿರುವುದರಿಂದ ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಘಟಪ್ರಭಾ ಬಲದಂಡೆ ಕಾಲುವೆ ಮೂಲಕ ಯಾದವಾಡ ಬ್ಯಾರೇಜ್ ಗೆ ನೀರು ಹರಿದು ಬಂದಿದ್ದರಿಂದ ಗ್ರಾಮಸ್ಥರು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಯತ್ನದಿಂದ ನಮ್ಮ ಯಾದವಾಡ ಹಳ್ಳಕ್ಕೆ ಕಾಲುವೆ ಮೂಲಕ ಕುಡಿಯುವ ನೀರಿನ ಸಂಬಂಧ ನೀರನ್ನು ಹರಿಸಿದ್ದಾರೆ. ಇದರಿಂದ ಜಾತ್ರೆಗೆ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ. ಸಾರ್ವಜನಿಕರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ವ್ಯವಸ್ಥೆಯನ್ನು ಕಲ್ಪಿಸಿಕೊಟ್ಟಿದ್ದಾರೆ. ಇದುವರೆಗೂ ನೀರು ಬರದಿದ್ದ ಹಳ್ಳಕ್ಕೆ ಇಂದು ಬಾಲಚಂದ್ರ ಜಾರಕಿಹೊಳಿ ಅವರ ಸೂಚನೆ ಹಿನ್ನೆಲೆಯಲ್ಲಿ ನೀರಾವರಿ ಅಧಿಕಾರಿಗಳು ಆಗಮಿಸಿ ನಮ್ಮ ಹಳ್ಳಕ್ಕೆ ನೀರು ತಲುಪುವಂತೆ ಮಾಡಲು ವಿತರಣಾ ಕಾಲುವೆಗಳ ಗೇಟುಗಳನ್ನು ಬಂದ್ ಮಾಡಿ ಅನುಕೂಲ ಮಾಡಿಕೊಟ್ಟಿದ್ದಾರೆ. ಜನ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ನಮ್ಮಯಾದವಾಡ ಮತ್ತು ಸುತ್ತ ಮುತ್ತಲಿನ ಗ್ರಾಮಸ್ಥರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತೇವೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಬಸು ಭೂತಾಳಿ ತಿಳಿಸಿದರು.
ಅಧಿಕಾರಿಗಳು ಸಹ ಶಾಸಕರ ಸೂಚನೆಯ ಮೇರೆಗೆ ಆಗಮಿಸಿ ನಮಗೆ ಎಲ್ಲಾ ರೀತಿಯ ಸಹಕಾರ ನೀಡಿದ್ದಾರೆ. ಜಾತ್ರೆಯ ಸಂದರ್ಭದಲ್ಲಿ ನಮಗೆ ನೀರು ಬಂದಿರುವುದು ಅತ್ಯಂತ ಹರ್ಷವಾಗಿದೆ. ಬಾಲಚಂದ್ರ ಜಾರಕಿಹೊಳಿ ಅವರ ಸಲಹೆಯ ಮೇರೆಗೆ ನಾವುಗಳು ನೀರನ್ನು ಪೋಲು ಮಾಡದೆ ಕೇವಲ ಕುಡಿಯುವ ನೀರಿಗೆ ಮಾತ್ರ ಬಳಕೆ ಮಾಡಿಕೊಳ್ಳುತ್ತೇವೆ ಎಂದು ಅವರು ಇದೇ ಸಂದರ್ಭದಲ್ಲಿ ಹೇಳಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಗೋವಿಂದ ಕೊಪ್ಪದ,
ಕೌಜಲಗಿ ಜಿಆರಬಿಸಿ ಎಇ ರಘುರಾಮ, ಬಸು ಕಪರಟ್ಟಿ,
ದಿಲಾವರ ತಶೀಲದಾರ, ಮುರಳಿ ಇತಾಪಿ, ಹಣಮಂತ ಹಾವನ್ನವರ, ಸತೀಶ ತೊಂಡಿಕಟ್ಟಿ, ನೀರಾವರಿ ಇಲಾಖೆಯ ಅಧಿಕಾರಿಗಳು, ಗ್ರಾಮದ ಪ್ರಮುಖರು, ರೈತರು ಉಪಸ್ಥಿತರಿದ್ದರು.

1
112 views