logo

ಸೀನರ್ ಛೇಂಬರ್ ಇಂಟರ್‌ನ್ಯಾಷನಲ್‌ಗೆ ನೂತನ ಅಧ್ಯಕ್ಷರಾಗಿ ಎ.ಚಿನ್ನಪ್ಪ ಅವಿರೋಧ ಆಯ್ಕೆ

ಸೀನರ್ ಛೇಂಬರ್ ಇಂಟರ್‌ನ್ಯಾಷನಲ್‌ಗೆ ನೂತನ ಅಧ್ಯಕ್ಷರಾಗಿ ಎ.ಚಿನ್ನಪ್ಪ ಅವಿರೋಧ ಆಯ್ಕೆ
ಸಂಸ್ಥೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದು : ಎ.ಚಿನ್ನಪ್ಪ

ದೇವನಹಳ್ಳಿ: ದೇವನಹಳ್ಳಿ ಸೀನರ್ ಛೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಗೆ ನೂತನ ಅಧ್ಯಕ್ಷರಾಗಿ ಎ.ಚಿನ್ನಪ್ಪ, ಕಾರ್‍ಯದರ್ಶಿಯಾಗಿ ಎರಡನೇ ಬಾರಿಗೆ ಅರುಣ್‌ಕುಮಾರ್ ಮತ್ತು ಖಜಾಂಚಿಯಾಗಿ ಡೇವಿಡ್ ನಾರಾಯಣಸ್ವಾಮಿ ಅವರನ್ನು ಅವಿರೋಧ ಆಯ್ಕೆ ಮಾಡಲಾಗಿದೆ.

ನೂತನ ಅಧ್ಯಕ್ಷ ಎ.ಚಿನ್ನಪ್ಪ ಮಾತನಾಡಿ, ಸೀನರ್ ಛೇಂಬರ್ ಇಂಟರ್‌ನ್ಯಾಷನಲ್ ಸಾಮಾಜಿಕ ಸಂಸ್ಥೆಯಾಗಿದ್ದು, ಸಂಸ್ಥೆಗೆ ಅತೀ ಜರೂರಾಗಿ ೫ ಗುಂಟೆ ನಿವೇಶನವನ್ನು ಕಲ್ಪಿಸಿಕೊಡಲಾಗುತ್ತದೆ. ಬಡವರಿಗೆ ಸಹಾಯ, ರಕ್ತದಾನ ಶಿಬಿರ, ಶಾಲೆಗಳಲ್ಲಿ ಕಾರ್‍ಯಕ್ರಮ ಆಯೋಜನೆ, ಕುಡಿಯುವ ನೀರಿನ ಸೌಲಭ್ಯ, ಇತರೆ ಸಾಮಾಜಿಕವಾಗಿ ಎಲ್ಲರನ್ನು ಒಳಗೊಂಡಂತೆ ಕಾರ್‍ಯಕ್ರಮಗಳನ್ನು ರೂಪಿಸಿ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಗೊಳಿಸಲು ಶ್ರಮವಹಿಸಲಾಗುವುದು. ತಮ್ಮನ್ನು ಗುರ್ತಿಸಿ ಅಧ್ಯಕ್ಷ ಸ್ಥಾನವನ್ನು ನೀಡಿರುವ ಪ್ರತಿಯೊಬ್ಬರಿಗೂ ಅಭಿನಂದಿಸುತ್ತೇನೆ ಎಂದರು.

ಕಾರ್‍ಯದರ್ಶಿ ಅರುಣ್‌ಕುಮಾರ್ ಮಾತನಾಡಿ, ಈ ಹಿಂದಿನ ವರ್ಷವೂ ಸಹ ಸಂಸ್ಥೆಯಲ್ಲಿ ಕಾರ್‍ಯದರ್ಶಿಯಾಗಿ ಸೇವೆ ಸಲ್ಲಿಸಿದ್ದೇನೆ. ಈ ಬಾರಿಯೂ ಸಹ ಕಾರ್‍ಯದರ್ಶಿಯಾಗಿ ಮುಂದುವರೆಯಲು ಅವಕಾಶ ಮಾಡಿಕೊಟ್ಟಿರುವ ಸೀನಿಯರ್ ಛೇಂಬರ್ ಸಂಸ್ಥೆಯ ಎಲ್ಲಾ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಅವಕಾಶಗಳು ಹೆಚ್ಚು ಇದೆ. ಹೆಚ್ಚು ಕಾರ್‍ಯಕ್ರಮಗಳನ್ನು ರೂಪಿಸಿಕೊಂಡು ಒಂದು ಉತ್ತಮ ಸೇವೆಯನ್ನು ಸಮಾಜಕ್ಕೆ ನೀಡಬೇಕೆಂಬ ಆಶಯದೊಂದಿಗೆ ಎಲ್ಲರೂ ಕೈಜೋಡಿಸುತ್ತಾರೆಂಬ ವಿಶ್ವಾಸದಲ್ಲಿ ಸದಾ ಸೇವೆ ಮಾಡಲು ಸಿದ್ಧನಿದ್ದೇನೆ. ಕಾರ್‍ಯದರ್ಶಿ ಸ್ಥಾನವನ್ನು ನೀಡಿರುವ ಪ್ರತಿಯೊಬ್ಬರಗೂ ಕೃಜತ್ಞತೆ ಸಲ್ಲಿಸುತ್ತೇನೆ ಎಂದರು.

ಇದೇ ಸಂದರ್ಭದಲ್ಲಿ ಖಜಾಂಚಿ ಡೇವಿಡ್ ನಾರಾಯಣಸ್ವಾಮಿ, ಉಪಾಧ್ಯಕ್ಷ ಮುನಿರಾಜು(ಬರ್ಮ), ಬೊಮ್ಮವಾರ ದಿನಾಕರ್, ಮಂಜುನಾಥ್ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ವೇಳೆ ಸೀನರ್ ಛೇಂಬರ್ ಇಂಟರ್‌ನ್ಯಾಷನಲ್ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ಸತೀಶ್‌ಕುಮಾರ್, ಹಿರಿಯ ಉಪಾಧ್ಯಕ್ಷ ಮಾರಪ್ಪ ಮರಳುಬಾಗಿಲು ರಾಜಣ್ಣ(ಮಂಜುನಾಥ್), ಉಪಾಧ್ಯಕ್ಷ ಡಿ.ಎನ್.ವೆಂಕಟೇಶ್, ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್, ಪದಾಧಿಕಾರಿ ಮರಳುಬಾಗಿಲು ಗೋಪಿ(ಪಿಎನ್‌ಎಸ್), ಸೇಂದಿ ಕೃಷ್ಣಪ್ಪನವರ ರಾಜು, ಬೆಸ್ಕಾಂನ ನೌಕರರಾದ ನಾಗೇಶ್, ಸತೀಶ್, ಬಿಎಂಟಿಸಿ ಕೃಷ್ಣಪ್ಪ, ಕೆಎಸ್‌ಆರ್‌ಟಿಸಿ ಮಂಜುನಾಥ್, ಶಿಕ್ಷಕ ಗೋಪಾಲ್, ಕೋಟೆ ಸೀನಪ್ಪ, ಸೌಮ್ಯ ಎಲೆಕ್ಟ್ರಾನಿಕ್ಸ್ ಅಪ್ಪು, ಮಂಜುನಾಥ್, ಶಂಭು, ವಕೀಲ ಶಿವಕುಮಾರ್, ನಿಲೇರಿ ಮಂಜುನಾಥ್ ವಿಕ್ಟರ್, ಕೋಟೆ ಜಿ.ನಾಗರಾಜ್, ವಿ.ಜಿ.ಕೋದಂಡರಾಮ, ಶಂಕರೇ ಗೌಡ, ಹೊರಕೆರೆ ಅಪ್ಪ ಲಾಯರ್ ವೆಂಕಟೇಶ್, ಮರಳುಬಾಗಿಲು ಚಲಪತಿ, ಇನ್ನಿತರರು ಇದ್ದರು.

1
740 views