logo

ಬಂದ್, ಬಂದ್, ಬಂದ್ ಕರ್ನಾಟಕ ಬಂದ್.

ಬೆಳಗಾವಿಯಲ್ಲಿ ಮರಾಠ ಪುಂಡರ ಅಟ್ಟಹಾಸಕ್ಕೆ, ಅವರಿಗೆ ಕನ್ನಡಿಗರ ಶಕ್ತಿ ತೋರಿಸಲು ಮತ್ತು ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ ಮತ್ತು ಇಲ್ಲಿಯ ಉದ್ಯೋಗಗಳು ಸ್ಥಳೀಯರಿಗೆ ದಕ್ಕಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಸುಮಾರು ಎರಡು ಸಾವಿರ ಕನ್ನಡ ಸಂಘಗಳು ಒಟ್ಟುಗುಡಿ ಕರ್ನಾಟಕ ಬಂದ್ ಮಾಡುತ್ತಿದ್ದಾರೆ. ಆದರೆ ಈ ಬಂದ್ ಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಗಾವಿ ಭಾಗದ ಜನಪ್ರಿತಿನಿದಿಗಳು ತಮ್ಮ ಮತ ಬ್ಯಾಂಕ್ ಭದ್ರ ಮಾಡಿಕೊಳ್ಳಲು ಅವರ ಕನ್ನಡ ವಿರೋಧಿ ಕೆಲಸಕ್ಕೆ ಪರೋಕ್ಷವಾಗಿ ಸಹಾಯ ಮಾಡುತ್ತಿದ್ದಾರೆ. ಇದರಿಂದಾಗಿ ಅಲ್ಲಿ ಪದೇಪದೇ ಕನ್ನಡ ವಿರೋಧಿ ನಡೆ ಪ್ರದರ್ಶನವಾಗುತ್ತಲೇ ಇರುತ್ತವೆ.
ಭಾಷವಾರು ಪ್ರಾಂತ್ಯ ವಿಂಗಡಣೆಯಾದಾಗ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದಾಗಿದೆ ಇದನ್ನು ಸುಪ್ರೀಂ ಕೋರ್ಟ್ ಕೂಡ ಹೇಳಿದೆ ಆದರೂ ಈ MES ಪುಂಡರು ಪದೇಪದೇ ಖ್ಯಾತೆ ತೆಗೆಯುತ್ತಿದ್ದಾರೆ. ಇದಕ್ಕೆ ಆಳುವ ಕರ್ನಾಟಕ ಸರ್ಕಾರ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಹೊರತು ಬಂದ್ ಮಾಡುವದರಿಂದ ಕರ್ನಾಟಕಕ್ಕೆ ನಷ್ಟ ಎಂದು ಸಾರ್ವಜನಿಕರೂ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

0
46 views