logo

ಚಿತ್ತಾಪೂರ: ಹೋಳಿ ಸಂಭ್ರಮ: ಬಣ್ಣ ಎರಚುತ್ತ ಕುಣಿದಾಡಿದ ಯುವಜನತೆ

ಚಿತ್ತಾಪೂರ: ಪಟ್ಟಣದಾದ್ಯಂತ ಹೋಳಿ ಹಬ್ಬದ ಪ್ರಯುಕ್ತ ಸಾಂಪ್ರದಾಯಿಕ ಹೋಳಿ ಹಬ್ಬದ ಅಂಗವಾಗಿ ಗುರುವಾರ ರಾತ್ರಿ 11ಗಂಟೆಗೆ ಕಾಮದಾಹನದ ಅಂಗವಾಗಿ ಓಣಿಯಲ್ಲಿ ಕಾಮದಹನದ ಸ್ಥಳವನ್ನು ರಂಗೋಲಿಯ ಮೂಲಕ ಚಿತ್ತಾರ ಮೂಡಿಸಿ ಅಲಂಕರಣಗೊಳಿಸಿ ರಾತ್ರಿಯಾಗುತ್ತಿದ್ದಂತೆಯೇ ಪೂಜೆ ಸಲ್ಲಿಸಿ ನಂತರ ದಹನ ಮಾಡಲಾಯಿತು. ಮತ್ತು  ಹೋಳಿ ಹಬ್ಬವನ್ನು “ಕಾಮದಹನ” ಮಾಡುವ ಮೂಲಕ ಬಣ್ಣಗಳ ಜೊತೆಯಲ್ಲಿ ಡಿಜೆಯಲ್ಲಿ  ಆಟವನ್ನು ಆಡುತ್ತಾ ಕುಣಿದು ಕುಪ್ಪಳಿಸಿ ಪರಸ್ಪರ ಪ್ರೀತಿ ಹಂಚಿ ಸಂಭ್ರಮಿಸಿದರು ಮತ್ತು ಮಹಿಳೆಯರು ಕಾಮದಹನದ ಬೆಂಕಿಯನ್ನು ಮನೆಮನೆಗೆ ಕೊಂಡೊಯ್ದು ಸಂಪ್ರದಾಯ ಪಾಲನೆ ಮಾಡಿದರು. ಇನ್ನೂ ಕೆಲವರು ಕಡಲೆ ಹಾಗೂ ಗೆಣಸುಗಳನ್ನು ತಂದು ಕಾಮದಹನದ ಬೆಂಕಿಯಲ್ಲಿ ಸುಟ್ಟು ಮಕ್ಕಳಿಗೆ ಹಂಚಿದರು.

ಮತ್ತು ಶುಕ್ರವಾರ ಬೆಳಿಗ್ಗೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರಗೆ ಯಾವುದೇ ವಯಸ್ಸಿ ಭೇದಭಾವ ಇಲ್ಲದೆ ಖುಷಿ ಖುಷಿಯಾಗಿ ಡಿಜೆ ಮುಖಾಂತರ ಬಣ್ಣಗಳ ಜೊತೆಯಲ್ಲಿ ಆಟವನ್ನು ಆಡುತ್ತಾ ಕುಣಿದು ಕುಪ್ಪಳಿಸಿ ಪರಸ್ಪರ ಪ್ರೀತಿ ಹಂಚಿ ಸಂಭ್ರಮಿಸಿ ಹುಣ್ಣಿಮೆಯಂದು ಹೋಳಿ ಹಬ್ಬವನ್ನು ಅದ್ಧೂರಿಯಾಗಿ ವಿಭಿನ್ನ ರೀತಿಯಲ್ಲಿ ಸಂತೋಷ ಮತ್ತು ಉತ್ಸಾಹದಿಂದ ನಾಸರ್ ಜಂಗ್ ಬಡಾವಣೆ ಹನುಮಾನ್ ಮಂದಿರ ಎದುರುಗಡೆ ವಾರ್ಡ್ ಸಂಖ್ಯೆ -8 ರಲ್ಲಿ ಹಣಮಂತ ಕಟ್ಟಿಮನಿ ಚೌಧರಿ ಭೋವಿ ವಡ್ಡರ ಸಮಾಜದ ಅಧ್ಯಕ್ಷರ ನೇತೃತ್ವದಲ್ಲಿ ಹೋಳಿ ಹಬ್ಬ ಆಚರಣೆಗೆ ವ್ಯವಸ್ಥೆ ಮಾಡಿದ್ದರು. ಬಹುತೇಕ ಯುವಕರು ಹಾಗೂ ಯುವತಿಯರೇ ತುಂಬಿದ್ದ ಮೈದಾನದಲ್ಲಿ ಹಾಡು, ಕುಣಿತಕ್ಕೆ ಮಿತಿ ಇರಲಿಲ್ಲ. ಬಣ್ಣದ ಓಕುಳಿಯಲ್ಲಿ ಮಿಂದೆದ್ದ ಅವರೆಲ್ಲ ಮೂರು ಗಂಟೆಗಳ ಕಾಲ ರಂಗಿನಾಟದಲ್ಲಿ ನಿರತರಾಗಿದ್ದರು.

ಹಣಮಂತ ಕಟ್ಟಿಮನಿ ಚೌಧರಿ ಭೋವಿ ವಡ್ಡರ ಸಮಾಜದ ಅಧ್ಯಕ್ಷರು, ಸಂತೋಷ್ ಟಿ ಪುರಸಭೆ ಸದಸ್ಯರು, ಐಶು ಈರಣ್ಣ ಚೌಧರಿ ಆಂದೋನಿ, ಲಕ್ಷ್ಮಣ ಕರೆಪ್ಪ ಚೌಧರಿ, ಶರಣಪ್ಪ ರಾವೂರ್ ಚೌಧರಿ, ಸ್ವಾಮಿ ತುಲಾಜಪ್ಪ ಚೌಧರಿ, ಯಲ್ಲಪ್ಪ ಬಿದನೂರು ಚೌಧರಿ, ಯಂಕಣ್ಣ ದುರ್ಗಪ್ಪ ಕಟ್ಟಿಮನಿ ಮುಖಂಡರು, ಹಣಮಂತ ತಿಪ್ಪಯ್ಯ ಚೌಧರಿ, ರವಿ ಭೀಮು ರಾವೂರ್, ರಾಜು ಸಾಬಣ್ಣ ಕರದಳ್ಳಿ, ಸುನಿಲ್ ಚೌಧರಿ, ರಾಜು ಗುಂಡಪ್ಪ ಕಟ್ಟಿಮನಿ, ಭಿಮು ರಾಮಯ್ಯ ಶಹಾಬಾದ್, ಯಂಕಟ್ಟಿ ಬಾಬು ಇಂಗಳಗಿ, ಸುನೀಲ್ ಟಿ ಚೌಧರಿ, ಸದಾನಂದ್ ನಾಯಕ್, ಅನಿಲ್ ಪೊಲೀಸ್ ಪಾಟೀಲ್ ಮೊಗಲಾ, ತಿಮ್ಮಯ್ಯ ಪವಾರ್, ಅನಿಲ್ ಸೆಂಟ್ರಿಂಗ್, ಬಾಬು ಸಾಬಣ್ಣ ಜೆಸಿಪಿ, ಇನ್ನಿತರರು ಉಪಸ್ಥಿತರಿದ್ದರು.

0
127 views