
ಉಚಿತ ನೇತ್ರ ತಪಾಸಣಾ ಶಿಬಿರ ಬಡವರಿಗೆ ಬೆಳಕಿನ ದಾರಿ ಡಾ.ಪ್ರೀತಿ
ಬ್ಯಾಡಗಿ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ರೋಟರಿ ಕ್ಲಬ್ ಬ್ಯಾಡಗಿ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ ಮತ್ತು ಜಿಲ್ಲಾ ಅಂದತ್ವ ನಿವಾರಣ ಕಾರ್ಯಕ್ರಮದ ಅಡಿಯಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸಾ ಶಿಬಿರ ನಡೆಯಿತು. ಮಾಜೀ ಸೈನಿಕ ಎಂ ಡಿ ಚಿಕ್ಕಣ್ಣವರ ಶಿಬಿರದ ಉದ್ಘಾಟನೆ ನೆರವೇರಿಸಿ ಮಾತನಾಡಿ ಕಳೆದ ಹಲವು ವರ್ಷಗಳಿಂದ ನಾವು ಶಂಕರ ಕಣ್ಣಿನ ಆಸ್ಪತ್ರೆಯವರ ಸಹಾಯ ಸಹಕಾರದಿಂದ ಬ್ಯಾಡಗಿ ತಾಲೂಕಿನಲ್ಲಿ ರೋಟರಿ ಕ್ಲಬ್ ಬ್ಯಾಡಗಿಯ ಸಹಯೋಗದಲ್ಲಿ ಶಿಬಿರ ನಡೆಸುತ್ತಾ ಬಂದಿದ್ದು ಸಹಸ್ರಾರು ಬಡ ಸಾರ್ವಜನಿಕರು ಮತ್ತು ಹಿರಿಯ ನಾಗರಿಕರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ ಇನ್ನೂ ಮುಂದಿನ ದಿನಗಳಲ್ಲಿ ಕಣ್ಣಿನ ತೊಂದರೆ ಇರುವ ಎಲ್ಲ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲಿ ಹಾಗೂ ಚಿಕಿತ್ಸೆ ಪಡೆದವರು ತಾವೂ ಸಹ ತಮ್ಮ ಊರಿನ ತಮಗೆ ಪರಿಚಯ ಇರುವ ಬಡವರಿಗೆ ಶಿಬಿರದ ಮಾಹಿತಿ ತಲುಪಿಸಿ ನೀವೂ ಸಹ ಸಹಾಯಕರಾಗಬಹುದು ಎಂದರು. ಡಾ. ಪ್ರೀತಿ ಮಾತನಾಡಿ ಶಿಬಿರಾರ್ಥಿಗಳು ಎಲ್ಲರೂ ಗುಣಮುಖರಾಗುತ್ತಿರುವುದು ಸಂತೋಷದ ವಿಷಯ ಜೊತೆಗೆ ತಾವು ತಮ್ಮ ಮರಣಾನಂತರ ನೇತ್ರ ದಾನ ಮಾಡಿ ತಮ್ಮ ಮನೆಯವರಿಗೆ ಮೊದಲೇ ತಿಳಿಸಿಡಿ ಅವರು ಫೋನ್ ಮಾಡಿದ ಕೂಡಲೇ ನಮ್ಮ ಆಸ್ಪತ್ರೆಯಿಂದ ನಾವು ಬಂದು ಕಣ್ಣು ದಾನ ಪಡೆಯುವ ಕೆಲಸ ಮಾಡುತ್ತೇವೆ ಇದರಿಂದ ಇಬ್ಬರಿಗೆ ಸಹಾಯವಾಗಲಿದೆ ಎಂದು ತಿಳಿಸಿದರು. ಇಂದಿನ ಶಿಬಿರದಲ್ಲಿ ಒಟ್ಟು 70 ಸಾರ್ವಜನಿಕರು ತಪಾಸಣೆ ಮಾಡಿಸಿಕೊಂಡರು, ಜೊತೆಗೆ 44 ಶಿಬಿರಾರ್ಥಿಗಳನ್ನು ಶಸ್ತ್ರ ಚಿಕಿತ್ಸೆಗೆ ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆಗೆ ಕಳಿಸಿಕೊಡಲಾಯಿತು ಎಂದು ಬ್ಯಾಡಗಿ ರೋಟರಿ ಸಂಸ್ಥೆಯ ಮಾಜೀ ಅಧ್ಯಕ್ಷ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಅವರು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮತ್ತು ಸಿಬ್ಬಂದಿ ವರ್ಗದವರು, ರೋಟರಿ ಸಂಸ್ಥೆಯ ಅಧ್ಯಕ್ಷ ಮಾಜಿ ಅಧ್ಯಕ್ಷರು ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ, ಮತ್ತು ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆಯ ವೈದ್ಯರು ಡಾ.ಪ್ರೀತಿ, ಹಾಗೂ ಸಿಬ್ಬಂದಿ ವರ್ಗದವರು, ಮಾಜಿ ಸೈನಿಕ ಎಂ ಡಿ ಚಿಕ್ಕಣ್ಣವರ, ಸಾರ್ವಜನಿಕರು ಉಪಸ್ಥಿತರಿದ್ದರು