logo

ವಿಶ್ವ ಮಹಿಳಾ ದಿನಾಚರಣೆ, ಉಪ್ಪಾರ ಸಮಾಜದ ಅಧ್ಯಕ್ಷ ಮಂಜುನಾಥ ಉಪ್ಪಾರ ಸ್ಯಾನಿಟರಿ ಪ್ಯಾಡ್ ಕೊಡುಗೆ

ಬ್ಯಾಡಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಬ್ಯಾಡಗಿಯ ಸಮುದಾಯ ಭವನದಲ್ಲಿ ಶ್ರೀ ಭಗೀರಥ ಉಪ್ಪಾರ ಸಮಾಜ ಸಂಘದ ವತಿಯಿಂದ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಸಮಾರಂಭದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳೆಯರಿಗೆ ವಯಕ್ತಿಕ ಆರೋಗ್ಯ ನಿರ್ವಹಣೆ ಬಗ್ಗೆ ಅರಿವು ಕಾರ್ಯಕ್ರಮ ಮತ್ತು ಆನ್ಲೈನ್ ವಂಚನೆ ಜಾಗೃತಿ ಕಾರ್ಯಕ್ರಮ ಮತ್ತು ಪಟ್ಟಣದ ಪೌರಕಾರ್ಮಿಕರಿಗೆ ಹಾಗೂ ಸ್ಥಳೀಯ ಶಿವಪುರ ಬಡಾವಣೆಯ ಮತ್ತು ಸಮಾಜದ ಮಹಿಳೆಯರಿಗೆ ಉಚಿತವಾಗಿ 5000 ಸ್ಯಾನಿಟರಿ ಪ್ಯಾಡ್ ವಿತರಿಸಲಾಯಿತು. ಆನ್ಲೈನ್ ವಂಚನೆ ಬಗ್ಗೆ ಜಾಗೃತಿಯನ್ನು ಅಮೂಲ್ಯ ಆರ್ಥಿಕ ಸಾಕ್ಷರತಾ ಕೇಂದ್ರದ ಕೌನ್ಸಲರ್ ಶಂಕರ ಉಪ್ಪಾರ ಆನ್ಲೈನ್ ವಂಚನೆಗಳಿಂದ ಹೇಗೆ ತಪ್ಪಿಸಿಕೊಳ್ಳಬೇಕು ಎಂದು ಜಾಗೃತಿ ಕಾರ್ಯಾಗಾರ ನಡೆಸಿದರು. ಮಹಿಳೆಯರ ವೈಯಕ್ತಿಕ ಆರೋಗ್ಯ ನಿರ್ವಹಣೆ ಬಗ್ಗೆ ಡಾ.ಪವಿತ್ರ ಹಿರೇಮಠ ಕುಟುಂಬ ವೈದ್ಯರು ಬ್ಯಾಡಗಿ ಇವರು ಮಹಿಳೆಯರು ತಮ್ಮ ವೈಯಕ್ತಿಕ ಆರೋಗ್ಯವನ್ನು ಹೇಗೆ ಕಾಪಾಡಿಕೊಳ್ಳಬೇಕು ತಿಂಗಳ ಋತು ಸಂದರ್ಭದಲ್ಲಿ, ಸಂತಾನ ಪೂರ್ವ ಮತ್ತು ನಂತರದ ದಿನಗಳಲ್ಲಿ ಹೇಗೆ ಜಾಗರೂಕತೆಯಿಂದ ಇರಬೇಕು, ಯಾವ ಆಹಾರ ಪದ್ಧತಿ ಪಾಲಿಸಬೇಕು, ಮತ್ತು ಸ್ವಚ್ಛತೆ ಬಗ್ಗೆ ಮಾಹಿತಿ ಒದಗಿಸಿ ಅರಿವು ಮೂಡಿಸಿದರು.
ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅಧ್ಯಕ್ಷ ಶ್ರೀ ಮಂಜುನಾಥ ಉಪ್ಪಾರ ಮಾತನಾಡಿ ಬ್ಯಾಡಗಿ ಪಟ್ಟಣದಲ್ಲಿ ಪ್ರಥಮ ಬಾರಿಗೆ ಶ್ರೀ ಭಗೀರಥ ಉಪ್ಪಾರ ಸಮಾಜ ಸಂಘದ ವತಿಯಿಂದ ಸಮಾಜ ಸೇವಾ ಕಾರ್ಯಕ್ರಮ ಹಮ್ಮಿಕೊಂಡಿದ್ದು ಇದು ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವುದು ವಿಶೇಷವಾಗಿದೆ. ನಮ್ಮ ಮಹಿಳೆಯರ ಹಾಗೂ ಪಟ್ಟಣದ ಪೌರಕಾರ್ಮಿಕರ ಹಿತ ದೃಷ್ಟಿಯಿಂದ 5000 ಸ್ಯಾನಿಟರಿ ಪ್ಯಾಡ್ ಕೊಡುಗೆ ನೀಡಿದ್ದು ಪುಟ್ಟಿ ತಂದಿದೆ. ಇದರಿಂದ ಹೆಣ್ಣು ಮಕ್ಕಳು ಹೆಚ್ಚು ಆರೋಗ್ಯವಾಗಿ ಇರಲು ಅನುಕೂಲಕರವಾಗುತ್ತದೆ. ಹಾಗೂ ನಮ್ಮ ಸಮಾಜದ ಮಹಿಳೆಯರು ಇಂತಹ ಜಾಗೃತಿ ಕಾರ್ಯಕ್ರಮಗಳಿಂದ ಹೆಚ್ಚು ಸಾಕ್ಷರರಾಗಿ ಸುಖವಾಗಿರಲು ಸಾಧ್ಯ, ಅವರು ಸಮಾಜಮುಖಿಯಾಗಿ ಮುಂದೆ ಬರಬೇಕು ತಮ್ಮ ವೈಯಕ್ತಿಕ ಆರೋಗ್ಯ ಹಾಗೂ ಕುಟುಂಬದ ಆರೋಗ್ಯ ಕಾಪಾಡುವಲ್ಲಿ ಹೆಚ್ಚು ಸುಶಿಕ್ಷಿತರಾಗಬೇಕು ಎಂದು ಈ ಕಾರ್ಯಕ್ರಮದ ಮುಖ್ಯ ಉದ್ದೇಶ, ಮುಂದಿನ ದಿನಗಳಲ್ಲಿ ಅವಕಾಶ ಸಿಕ್ಕರೆ ಇನ್ನು ಹೆಚ್ಚು ಸಮಾಜಮುಖಿ ಸೇವಾ ಕಾರ್ಯಗಳನ್ನು ನಡೆಸಲು ಶ್ರೀ ಭಗೀರಥ ಶಕ್ತಿ ನೀಡಲಿ ಎಂದು ಎಲ್ಲ ಪೌರಕಾರ್ಮಿಕರಿಗೆ ಮಹಿಳೆಯರಿಗೆ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಸ್ಯಾನಿಟರಿ ಪ್ಯಾಡ್ ಕೊಡುಗೆ ನೀಡಿದರು.
ಈ ಸಂದರ್ಭದಲ್ಲಿ ಮಹಿಳಾ ಸಮಾಜ ಸೇವಕರಾದ ಶ್ರೀಮತಿ ಕವಿತಾ ಸೊಪ್ಪಿನಮಠ ಅಧ್ಯಕ್ಷರು 2024.25 ಇನ್ನರ್ ವ್ಹೀಲ್ ಕ್ಲಬ್, ಶ್ರೀಮತಿ ಸಂಧ್ಯಾರಾಣಿ ದೇಶಪಾಂಡೆ ಸಂಸ್ಥಾಪಕ ಅಧ್ಯಕ್ಷರು ಇನ್ನರ್ ವ್ಹೀಲ್ ಕ್ಲಬ್ ಹಾಗು ಹೆಮ್ಮೆಯ ಕನ್ನಡತಿ ಪ್ರಶಸ್ತಿ ಪುರಸ್ಕೃತರು, ಶ್ರೀಮತಿ ಲಕ್ಷ್ಮೀ ಉಪ್ಪಾರ ಕ್ಲಬ್ ಎಡಿಟರ್ ಸಂಸ್ಥಾಪಕ ಸದಸ್ಯರು ಇನ್ನರ್ ವ್ಹೀಲ್ ಕ್ಲಬ್ ಮತ್ತು ಶ್ರೀಮತಿ ಶೋಭಾ ನೋಟದ ಖಜಾಂಚಿ ಮತ್ತು ಡಾ. ಪವಿತ್ರ ಹಿರೇಮಠ ಕುಟುಂಬ ಸದಸ್ಯರು ಬ್ಯಾಡಗಿ ಇವರನ್ನು ವಿಶೇಷವಾಗಿ ಸಂಘದ ವತಿಯಿಂದ ಮಹಿಳಾ ಸಮಾಜ ಸೇವಕರೆಂದು ಗುರುತಿಸಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಸಂಜಾರಾಣಿ ದೇಶಪಾಂಡೆ ಮಾತನಾಡಿ ಪಟ್ಟಣದಲ್ಲಿ ಅನೇಕ ಸಮಾಜ ಸಂಘಗಳಿವೆ ಅವು ಸಭೆಗಳಿಗೆ ಪ್ರತಿಭಾ ಪುರಸ್ಕಾರಗಳಿಗೆ ಸೀಮಿತವಾಗಿರುತ್ತವೆ. ಆದರೆ ಇಂದು ಶ್ರೀ ಭಗೀರಥ ಉಪ್ಪಾರ ಸಮಾಜ ಸಂಘದ ಅಧ್ಯಕ್ಷರು ಸಂಘದ ಕೆಲಸದ ಹೊರತಾಗಿ ಸಮಾಜಮುಖಿಯಾಗಿ ಸಮಾಜ ಸೇವೆ ನಡೆಸುತ್ತಿದ್ದಾರೆ ಇವರು ಸಮಾಜದ ಮಹಿಳೆಯರಿಗೆ ಅಷ್ಟೇ ಅಲ್ಲದೆ ಪಟ್ಟಣದ ಮಹಿಳಾ ಪೌರಕಾರ್ಮಿಕರಿಗೆ ಸ್ಥಳೀಯ ಮಹಿಳೆಯರಿಗೆ 5000 ಸಾನಿಟರಿ ಪ್ಯಾಡ್ ಗಳನ್ನು ಹಾಗೂ ಉತ್ತಮ ಆರೋಗ್ಯದ ಬಗ್ಗೆ ಮತ್ತು ಆನ್ಲೈನ್ ವಂಚನೆ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಇಂದು ನೀಡಿ ಒಳ್ಳೆಯ ಕೆಲಸ ಮಾಡಿರುವುದು ಹೆಮ್ಮೆಯ ಕೆಲಸ ಹಾಗೂ ತಮ್ಮ ಸಂಘದ ಕಾರ್ಯಕ್ರಮದಲ್ಲಿ ನಮ್ಮೆಲ್ಲರನ್ನು ಸಮಾಜ ಸೇವಕರೆಂದು ಗುರುತಿಸಿ ಸನ್ಮಾನಿಸಿರುವುದು ಅತಿವ ಸಂತೋಷ ತಂದಿದೆ ಹಾಗೂ ವಿಶ್ವ ಮಹಿಳಾ ದಿನಕ್ಕೆ ನಿಜವಾದ ಅರ್ಥ ತಂದಿದ್ದಾರೆ ಭಗವಂತನು ಅವರಿಗೆ ಇನ್ನೂ ಹೆಚ್ಚು ದೊಡ್ಡ ದೊಡ್ಡ ಕಾರ್ಯಕ್ರಮಗಳನ್ನು ನಡೆಸಲು ಶಕ್ತಿ ಕರುಣಿಸಲಿ ಎಂದು ಹರಸಿ ಅಭಿನಂದಿಸಿದರು. ಕಾರ್ಯಕ್ರಮದಲ್ಲಿ
ಸರಸ್ವತಿ ಉಪ್ಪಾರ ನಿರೂಪಿಸಿದರು, ಶಿವಬಸಪ್ಪ ಉಪ್ಪಾರ ಸ್ವಾಗತಿಸಿದರು, ಕಾರ್ಯದರ್ಶಿ ಲಿಂಗರಾಜ ಹಾರ್ಲಾಪುರ ವಂದಿಸಿದರು. ಈ ಸಂದರ್ಭದಲ್ಲಿ ಗೀತಾ ಕಬ್ಬೂರ, ಚಂದ್ರು ರೋಣದ, ಬಸವರಾಜ ಬಡಗಡ್ಡಿ, ಭರತ ಉಪ್ಪಾರ, ಸಂತೋಷ ಸಿಂಧೋಗಿ, ಮಂಜು ಸಾಗರಿ ಡಿಜಿಟಲ್, ಶೈಲಜಾ ರೋಣದ, ನಾಗಮ್ಮ ಕೋರಿ, ದೀಪಾ ಉಪ್ಪಾರ, ಪ್ರೀತಿ ರೋಣದ ಉಪ್ಪರ ಸಮಾಜದ ಹಿರಿಯರು ಮತ್ತು ಮಹಿಳೆಯರು ಪುರಸಭೆಯ ಎಲ್ಲ ಮಹಿಳಾ ಪೌರಕಾರ್ಮಿಕರು ಹಾಗೂ ಸ್ಥಳೀಯ ಮಹಿಳೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು

14
1846 views