logo

Telugu Compulsory in Schools: ತೆಲಂಗಾಣದ ಎಲ್ಲಾ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಲಿಸುವುದು ಕಡ್ಡಾಯ ! – ಕಾಂಗ್ರೆಸ್ ಸರಕಾರದ ಆದೇಶ

ಭಾಗ್ಯನಗರ (ತೆಲಂಗಾಣ) – ತೆಲಂಗಾಣದ ಕಾಂಗ್ರೆಸ್ ಸರಕಾರವು ಎಲ್ಲಾ ಶಾಲೆಗಳಲ್ಲಿ ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಿದೆ. ಈ ಸಂದರ್ಭದಲ್ಲಿ ರಾಜ್ಯ ಶಾಲಾ ಶಿಕ್ಷಣ ಇಲಾಖೆಯು ಈ ನಿಟ್ಟಿನಲ್ಲಿ ಸರಕಾರಿ ಆದೇಶವನ್ನು ಹೊರಡಿಸಿದೆ. ಈ ಆದೇಶವನ್ನು ಸಿಬಿಎಸ್ಇ (ಸೆಂಟ್ರಲ್ ಬೋರ್ಡ ಆಫ್ ಸೆಕೆಂಡರಿ ಎಜ್ಯುಕೇಶನ- ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ), ಐಸಿಎಸ್ಇ. (ಇಂಡಿಯನ ಸರ್ಟಿಫಿಕೇಟ ಆಫ್ ಸೆಕೆಂಡರಿ ಎಜ್ಯುಕೇಶನ- ಭಾರತೀಯ ಮಾಧ್ಯಮಿಕ ಶಿಕ್ಷಣ ಪ್ರಮಾಣಪತ್ರ) ಮತ್ತು ಇಂಟರನ್ಯಾಶನಲ್ ಬ್ಯಾಕಲೌರಿಯೇಟ್ (ಐಬಿ) ಸೇರಿದಂತೆ ಎಲ್ಲಾ ಮಂಡಳಿಗಳೊಂದಿಗೆ ಸಂಯೋಜಿತವಾಗಿರುವ ಶಾಲೆಗಳಿಗೆ ಅನ್ವಯಿಸುತ್ತದೆ. ಹೊಸ ಆದೇಶವು 2025-26ನೇ ಶೈಕ್ಷಣಿಕ ವರ್ಷದಿಂದ ಒಂಬತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಜಾರಿಗೆ ಬರಲಿದ್ದು, ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ಈ ಆದೇಶವು 2026-27ನೇ ಶೈಕ್ಷಣಿಕ ವರ್ಷದಿಂದ ಜಾರಿಗೆ ಬರಲಿದೆ. ತೆಲಂಗಾಣದಲ್ಲಿ ಹೆಚ್ಚಿನ ಶಾಲೆಗಳು ಸರಕಾರಿ ಶಾಲೆಗಳಾಗಿವೆ. ಅಲ್ಲಿ ತೆಲುಗು ಶಿಕ್ಷಣ ಸಾಮಾನ್ಯವಾಗಿದೆ; ಆದರೆ ರಾಜ್ಯದ ಹೊರಗಿನ ಮಂಡಳಿಗಳ ಅಡಿಯಲ್ಲಿ ಬರುವ ಶಾಲೆಗಳು ತೆಲುಗು ಭಾಷೆಯನ್ನು ಹೆಚ್ಚಿನ ಪ್ರಮಾಣದಲ್ಲಿ ಕಲಿಸುವುದಿಲ್ಲ.

1. ನೆರೆಯ ರಾಜ್ಯವಾದ ತಮಿಳುನಾಡು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ವಿರೋಧಿಸುತ್ತಿರುವ ಸಮಯದಲ್ಲಿ ತೆಲಂಗಾಣ ಸರಕಾರ ತೆಲುಗು ಭಾಷೆಯನ್ನು ಕಡ್ಡಾಯಗೊಳಿಸಲು ನಿರ್ಧರಿಸಿದೆ; ಏಕೆಂದರೆ ಈ ನೀತಿಯು ವಿದ್ಯಾರ್ಥಿಗಳ ಮೇಲೆ ಹಿಂದಿ ಭಾಷೆಯನ್ನು ಹೇರುವುದಾಗಿ ಹೇಳಿಕೊಳ್ಳುತ್ತಿದೆ.

2. ಶಿಕ್ಷಣ ತಜ್ಞರೊಬ್ಬರು ತೆಲಂಗಾಣದಲ್ಲಿ ಮೂರನೇ ಒಂದು ಭಾಗಕ್ಕಿಂತ ಹೆಚ್ಚು ಶಾಲೆಗಳು ಇಂಗ್ಲಿಷ್ ಮಾಧ್ಯಮದಲ್ಲಿವೆ ಎಂದು ಹೇಳಿದ್ದಾರೆ. ಈ ನಿರ್ಧಾರವನ್ನು ಜಾರಿಗೆ ತರುವುದು ವಿದ್ಯಾರ್ಥಿಗಳನ್ನು ಇಂಗ್ಲಿಷ್‌ನಿಂದ ದೂರವಿಡುವ ಪ್ರಯತ್ನವಲ್ಲ, ಬದಲಾಗಿ ವಿದ್ಯಾರ್ಥಿಗಳಿಗೆ ಅವರ ಮಾತೃಭಾಷೆಯನ್ನು ಪರಿಚಯಿಸುವ ಪ್ರಯತ್ನವಾಗಿದೆ. ರಾಜ್ಯದ ವಿದ್ಯಾರ್ಥಿಗಳು ಸ್ಥಳೀಯ ಭಾಷೆಯನ್ನು ಓದಲು ಮತ್ತು ಬರೆಯಲು ಬರಬೇಕು, ಎಂದು ಹೇಳಿದ್ದಾರೆ.

0
154 views