logo

ಹೊಸದುರ್ಗ-ಕನಕಪ್ರಿಯ ನಾಟ್ಯಕಲಾ ಕೇಂದ್ರ- ನಾಟ್ಯೋಲ್ಲಾಸ ಕಾರ್ಯಕ್ರಮ.ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ದಿವ್ಯಸಾನಿಧ್ಯ

ಹೊಸದುರ್ಗ : ನಿಮ್ಮ ಮಕ್ಕಳು ಭರತನಾಟ್ಯ ಕಲೆಯನ್ನ ಕಲಿಯುವ ಹಾಗೆ ಮಕ್ಕಳನ್ನ ಪ್ರೋತ್ಸಹಿಸಿ ಚಿಕ್ಕಂದಿನಿಂದಲೆ ಮಕ್ಕಳಿಗೆ ಕಲೆಯ ಬಗ್ಗೆ ಅಭಿರುಚಿ ಬೆಳಸಬೇಕು ಸಾಹಿತ್ಯ ಸಂಸ್ಕೃತಿಯ ಬಗ್ಗೆ ಪರಿಚಯ ಮಾಡಿಕೊಡುವ ಕೆಲಸವಾಗಬೇಕು ಎಂದು ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಕರೆ ನೀಡಿದರು.
ಪಟ್ಟಣದ ಅಶೋಕ ರಂಗ ಮಂದಿರದಲ್ಲಿ ವಿದ್ವಾನ್ ನಾಗರಾಜ್ ಕೆ. ಅವರ ನೇತೃತ್ವದಲ್ಲಿ ಆಯೋಜಿಸಲಾಗಿದ್ದ ನಾಟ್ಟೋಲ್ಲಾಸ ಭರತನಾಟ್ಯ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಸಾಹಿತ್ಯ, ಸಂಗೀತ ಮತ್ತು ಕಲೆ ಇವುಗಳ ಒಲವು ಇಲ್ಲದಂತಹ ವ್ಯಕ್ತಿ ಬಾಲ ಮತ್ತು ಕೊಂಬು ಇಲ್ಲದಂತಹ ಪಶು ಇದ್ದ ಹಾಗೆ. ಈ ಒಂದು ನೆಲೆಯಲ್ಲಿ ನಾಗರಾಜ್ ಅವರು ಗ್ರಾಮೀಣ ಪ್ರದೇಶಕ್ಕೆ ಬಂದು ಗ್ರಾಮೀಣ ಪ್ರದೇಶದ ಮಕ್ಕಳಿಗೆ ಭರತ ನಾಟ್ಯವನ್ನ ಅತ್ಯಂತ ಕಡಿಮೆ ಖರ್ಚಿನಲ್ಲಿ ಕಲಿಸಿಕೊಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದ ಶ್ರೀಗಳು ಇವರು ಸಾಣೇಹಳ್ಳಿಯಲ್ಲೂ ಕೂಡ ಮಕ್ಕಳಿಗೆ ಭರತ ನಾಟ್ಯವನ್ನ ಕಲಿಸಿಕೊಡುತ್ತಿದ್ದಾರೆ.ಇಂಥವರು ಬೆಂಗಳೂರಿನಲ್ಲಿ ಇದ್ದಿದ್ದರೆ ಸಾಕಷ್ಟು ಹಣ ಗಳಿಸಬಹುದಿತ್ತು ಆದರೆ ನಾಗರಾಜ್ ಅವರಿಗೆ ದುಡಿಮೆಗಿಂತ ಹೆಚ್ಚಾಗಿ ಗ್ರಾಮೀಣ ಪ್ರದೇಶದ ನಮ್ಮ ಮಕ್ಕಳು ಕಲೆಯನ್ನ ಕಲಿಯಬೇಕು ಯಾರಿಗಿಂತ ಕಡಿಮೆ ಇಲ್ಲ ಎಂಬ ಭಾವನೆ ಮಕ್ಕಳಲ್ಲಿ ಬರಬೇಕು ಎಂಬ ಇಚ್ಚಾ ಶಕ್ತಿಯನ್ನು ಇಟ್ಟುಕೊಂಡು ಭರತ ನಾಟ್ಯವನ್ನ ಹೇಳಿಕೊಡುತ್ತಿರುವುದು ಅತ್ಯಂತ ಶ್ಲಾಘನೀಯ ಪೋಷಕರು ಕೂಡ ಇಂತಹ ಕಲೆಗೆ ಪ್ರೋತ್ಸಹವನ್ನ ನೀಡಿಬೇಕು ಎಂದ ಶ್ರೀಗಳು ಇಂತಹ ಕಲೆಗಳಿಗೆ ಸಾರ್ವಜನಿಕರು ಆರ್ಥಿಕವಾಗಿ ಸುಸ್ಥಿತಿಯಲ್ಲಿ ಇರುವಂತಹವರು ಇಂತಹ ಕಲೆಗೆ ಪ್ರೋತ್ಸಹ ನೀಡಿದರೆ ಗ್ರಾಮೀಣ ಪದೇಶಗಳಲ್ಲಿ ಇಂತಹ ಕಲೆಯನ್ನ ಇನ್ನು ಬೆಳೆಸಲು ಸಾಧ್ಯ ಎಂದರು.

ಉಚ್ಚ ನ್ಯಾಯಲಯದ ವಿಶ್ರಾಂತ ನ್ಯಾಯಮೂರ್ತಿ ಹೆಚ್.ಬಿಲ್ಲಪ್ಪ ಕಾರ್ಯಕ್ರಮವನ್ನ ಉದ್ಘಾಟಿಸಿ ಮಾತನಾಡಿದರು.

ಬಹ್ಮವಿದ್ಯಾನಗರದ ಭಗೀರಥ ಪೀಠದ ಶ್ರೀ ಪುರುಷೋತ್ತಮನಮದಪುರಿ ಸ್ವಾಮೀಜಿ, ಕುಂಚಿಟಿಗ ಮಹಾಸಂಸ್ಥಾನದ ಶ್ರೀ ಶಾಂತವೀರ ಸ್ವಾಮೀಜಿ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ ಆಶೀರ್ವಚನ ನೀಡಿದರು.

ಕಾರ್ಯಕ್ರಮದಲ್ಲಿ ಎಸ್.ಎನ್.ಇ ಆರ್.ಡಿ.ಟ್ರಸ್ಟ್ ಅಧ್ಯಕ್ಷ ಕೆ.ಎಸ್, ಕಲ್ಮರ್, ಹಿರಿಯ ವೈದ್ಯ ಡಾ:ಹೆಚ್.ಹನುಮಂತಪ್ಪ, ಕನಕ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ: ಎಂ.ಹೆಚ್.ಕೃಷ್ಣಮೂರ್ತಿ, ನಿವೃತ್ತ ಮುಖ್ಯ ಶಿಕ್ಷಕಿ ಶ್ರೀಮತಿ ಡಿ.ವಿ.ನಾಗಮಣಿಲಕ್ಷ್ಮಣ್, ಕನಕಪ್ರಿಯಾ ಪ್ರಶಸ್ತಿ ಪುರಸ್ಕೃತರು ಹಾಗೂ ಶ್ರೀ ಕೃಷ್ಣ ಕಲಾಕುಂಜ ನಿರ್ದೇಶಕರಾದ ವಿದ್ವಾನ್ ಜಿ.ಪವನಕುಮಾರ್ ಮತ್ತು ಶ್ರೀಮತಿ ಮಾನಸಪವನಕುಮಾರ್, ಚಿತ್ರದುರ್ಗ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಆರ್.ಮಂಜುಳ, ನಟ್ಟುವಾಂಗ ವಿದ್ವಾನ್ ನಾಗರಾಜ್ ಕೆ. ಭರತನಾಟ್ಯ ಕಲಾವಿದೆ ಶ್ರೀಮತಿ ನಿಸರ್ಗ ಡಾ:ಸಂಜಯ್, ತಾಲೂಕು ಕಾ.ಸ.ಪ ಅಧ್ಯಕ್ಷ ಬಿ.ಪಿ.ಓಂಕಾರಪ್ಪ, ಮಾಜಿ ಅಧ್ಯಕ್ಷ ಬಾ.ಮೈಲಾರಪ್ಪ, ಪುರಸಭಾ ಸದಸ್ಯೆ ಶ್ರೀಮತಿ ಡಾ:ಸ್ವಾತಿಪ್ರದೀಫ್.ರಂಗನಟ ಎಸ್.ರಾಜಗೋಪಲ್, ಶಿಕ್ಷಕಿ ಶಭೀನಾಭಾನು,ವೈದ್ಯಾಧಿಕಾರಿ ಡಾ: ಸುನೀಲ್‌ಮನೋಹ‌ರ್ ಸೇರಿದಂತೆ ಕನಕ ಪ್ರಿಯ ನಾಟ್ಯ ಕಲಾ ಕೇಂದ್ರ ಹಾಗೂ ಪೋಷಕ ವೃಂದ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಭರತನಾಟ್ಯ ನೃತ್ಯ ಬಂದಗಳು ಹಾಗು ಶ್ರೀ ಕೃಷ್ಣ ಲೀಲಾಮೃತ ನೃತ್ಯ. ರೂಪಕಗಳು ಹಾಗೂ ಕಲಾವಿದಿಂದ ಆಕರ್ಷಣೀಯ ನೃತ್ಯಗಳು ಜರುಗಿದವು.

3
13 views