
ರಾಷ್ಟ್ರದ ಅಭಿವೃದ್ದಿಗೆ ಸಾಮಾಜಿಕ ನ್ಯಾಯ ಅವಶ್ಯಕ- ಪ್ರಸನ್ನಕುಮಾರ್ JMFC ನ್ಯಾಯಧೀಶರು
ಹೊಸದುರ್ಗ: ತಾಲ್ಲೂಕು ಆರೋಗ್ಯಾಧಿಕಾರಿಗಳ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಮುದಾಯ ಸಂಘಟನೆಗಳ ಕಾರ್ಯಕ್ರಮ ಮತ್ತು ವಿಶ್ವ ಸಾಮಾಜಿಕ ನ್ಯಾಯ ದಿನದ ಅಂಗವಾಗಿ ಕಾನೂನು ಅರಿವು ನೆರವು ಕಾರ್ಯಕ್ರಮವನ್ನ ಹೊಸದುರ್ಗ ಜೆ.ಎಂ.ಎಫ್.ಸಿ ಪ್ರಧಾನ ಸಿವಿಲ್ ನ್ಯಾಯಧೀಶರಾದ ಪ್ರಸನ್ನಕುಮಾರ್ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ ಸಮಾಜದಲ್ಲಿನ ಅಸಮಾನತೆಯನ್ನ ಸಂಪೂರ್ಣವಾಗಿ ಕಿತ್ತು ಹಾಕಲು ಪ್ರತಿ ವರ್ಷ ಫೆಬ್ರವರಿ 20 ರಂದು ವಿಶ್ವ ಸಾಮಾಜಿಕ ನ್ಯಾಯ ದಿನವನ್ನಾಗಿ ಆಚರಿಸಲಾಗುತ್ತಿದೆ.ರಾಷ್ಟ್ರದ ಅಭಿವೃದ್ದಿಗೆ ಸಾಮಾಜಿಕ ನ್ಯಾಯ ಅವಶ್ಯಕ ಎಂದು ನ್ಯಾಯಧೀಶರಾದ ಪ್ರಸನ್ನಕುಮಾರ್ ಅಭಿಪ್ರಾಯಿಸಿದರು. ಸಾಮಾಜಿಕ ನ್ಯಾಯವು ರಾಷ್ಟ್ರಗಳ ಒಳಗೆ ಶಾಂತಿಯುತ ಮತ್ತು ಸಮೃದ್ದ ಸಹಬಾಳ್ವೆಗೆ ಆಧಾರವಗಿರುವ ತತ್ವವಾಗಿದೆ, ವಿಶ್ವದಾಧ್ಯಂತ ಲಿಂಗ, ವಯಸ್ಸು, ಜನಾಂಗೀಯ, ಧರ್ಮ, ಸಂಸ್ಕೃತಿ,ಬಡತನ ನಿರುದ್ಯೋಗ, ಶಿಕ್ಷಣ ವಲಸೆ ಆರ್ಥಿಕ ಮುಂತಾದ ಸಮಾಜಿಕ ಸಮಸ್ಯೆಗಳು ಗಂಭೀರವಾಗಿವೆ ಇಂತಹ ಸಮಸ್ಯೆಗಳನ್ನ ತೊಡೆದು ಹಾಕುವ ಪ್ರಯತ್ನಗಳಿಗೆ ಪ್ರೋತ್ಸಹಿಸಲು ಸಾಮಾಜಿಕ ಅಸಮಾನತೆಯ ಬಗ್ಗೆ ಸಾರ್ವಜನಿಕರಲ್ಲಿ ಅರಿವು
ಮೂಡಿಸಬೇಕಿದೆ ಎಂದರು. ಆಧುನೀಕತೆ ಬೆಳೆದಂತೆ ಹೆಣ್ಣು ಸಹಾ ಗಂಡಸಿನ ಸರಿ ಸಮಾನವಾಗಿ ದುಡಿಯುತ್ತಿದ್ದಾಳೆ, ಹೆಣ್ಣು ಗಂಡಸಿಗೆ ಸರಿಸಮಾನವಾಗಿ ಬದುಕುತ್ತಿದ್ದಾಳೆ,ಇಂದಿಗೂ ಸಹಾ ಸಂವಿಧಾನ ಪೀಠಿಕೆಯಂತೆ ಸರ್ವರಿಗೂ ಸಮಾನವಾದ ನ್ಯಾಯ ಸಿಗುತ್ತಿಲ್ಲ ಸಾಮಾಜಿಕ ನ್ಯಾಯ ಎಲ್ಲರಿಗೂ ಸಹಾ ಸಿಗಬೇಕು ಎಂದು ಅಭಿಪ್ರಾಯಿಸಿದರು.ಸೌಖ್ಯ ಸಮುದಾಯ ಸಂಸ್ಧೆಯ ಅಧ್ಯಕ್ಷೆ ಶ್ರೀಮತಿಭಾಗ್ಯಮ್ಮ ಅಧ್ಯಕ್ಷತೆ ವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಜಿ.ಎಸ್.ರಾಘವೇಂದ್ರ ಪ್ರಸಾದ್, ಆಡಳಿತ ವೈಧ್ಯಾಧಿಕಾರಿ ಡಾ.ರಾಕೇಶ್, ಬಿ.ಹೆಚ್.ಇ.ಓ ವೀರೇಂದ್ರಪಾಟೀಲ್, ವಕೀಲರ ಸಂಘದ ಅಧ್ಯಕ್ಷ ಹೆಚ್.ಬಿ.ರವಿಕುಮಾರ್, ಕಾರ್ಯದರ್ಶಿ ಇ.ಟಿ.ರಮೇಶ್, ವಕೀಲರುಗಳಾದ ಈರಬಸಪ್ಪ, ಬಿ.ಎಲ್.ಜ್ಯೋತಿ ಉಪಸ್ಧಿತರಿದ್ದರು.