ಜಮಖಂಡಿ: ರನ್ನ ರಥಯಾತ್ರೆಗೆ ಎಲ್ಲೆಡೆ
ಅದ್ದೂರಿ ಸ್ವಾಗತ
ಬಾಗಲಕೋಟೆ ಜಿಲ್ಲೆಯ ಮುಧೋಳನಲ್ಲಿ ಫೆಬ್ರವರಿ 22 ರಿಂದ 24 ವರೆಗೆ ಮೂರು ದಿನಗಳ ಕಾಲ ಹಮ್ಮಿಕೊಂಡ ರನ್ನವೈಭವ ಹಿನ್ನಲೆಯಲ್ಲಿ ಜಿಲ್ಲೆಯಾದ್ಯಂತ ಸಂಚರಿಸುತ್ತಿರುವ ರನ್ನರಥಯಾತ್ರೆ ವಿವಿದೆಡೆ ಅದ್ದೂರಿ ಸ್ವಾಗತ ದೊರೆಯುತ್ತಿದೆ. ಈಗಾಗಲೇ ತಾಲೂಕಾ ಮಟ್ಟದ ಒಂದು ರಥ ಫೆ. 13 ರಂದು ರನ್ನ ಬೆಳಗಲಿಯಿಂದ ಚಾಲನೆಗೊಂಡಿದೆ. ಇನ್ನೊಂದು ರಥ ಫೆ. 17 ರಂದು ಬಾಗಲಕೋಟೆ ಜಿಲ್ಲಾಡಳಿತದ ಮುಖ್ಯ ಆವರಣದಿಂದ ಹೊರಟು ಜಿಲ್ಲೆಯಾದ್ಯಂತ ಪ್ರತಿಯೊಂದು ತಾಲೂಕುಗಳಿಗೆ ಸಂಚರಿಸಲಿದೆ. ಮತ್ತೊಂದು ರಥ ಫೆ. 19 ರಂದು ಬೆಂಗಳೂರಿನಿಂದ ಚಾಲನೆ ದೊರೆತಿದೆ.