logo

ಕೊನೆಗೂ ಸ್ವಗ್ರಾಮಕ್ಕೆ ತಲುಪಿದ ಪ್ರವೀಣ್ ಮೃತದೇಹ. 4 ದಿನಗಳ ಬಳಿಕ ಮಗನನ್ನು ಕಂಡ ತಾಯಿ ಮತ್ತು ಕುಟುಂಬಸ್ಥರು. ಕೊನೆಗೂ ಸ್ವಗ್ರಾಮಕ್ಕೆ ತಲುಪಿದ ಪ್ರವೀಣ್ ಮೃತದೇಹ. 4 ದಿನಗಳ ಬಳಿಕ ಮಗನನ್ನು ಕಂಡ ತಾಯಿ ಮತ್ತು ಕುಟುಂಬಸ್ಥರು. ಸಾರ್ವಜನಿಕ ದರ್ಶನಕ್ಕೆ ಅವಕಾಶ ಬಳಿಕ ಅಂತ್ಯಕ್ರಿಯೆ.

ಕೊಪ್ಪಳ: ಪ್ರಯಾಗ್ ರಾಜ್ ನಲ್ಲಿ ನೆಡೆಯಿತ್ತಿರುವ ಮಹಾಕುಂಭ ಮೇಳಕ್ಕೆ ಹೋಗಿ ಮೃತಪಟ್ಟಿದ್ದ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ಧಾಪುರ ಗ್ರಾಮದ ಪ್ರವೀಣ ಕುಮಾರ್ ಹೊಸಮನಿ ಮೃತದೇಹ
ಕೊನೆಗೂ ನಾಲ್ಕು ದಿನಗಳ ಬಳಿಕ ಸ್ವಗ್ರಾಮಕ್ಕೆ ತಲುಪಿದೆ.

ಮೃತದೇಹವನ್ನು ಅಂಬ್ಯುಲೆನ್ಸ್ ಮೂಲಕ ಗೋರಖ್ ಪುರದಿಂದ ಸ್ವಗ್ರಾಮ ಸಿದ್ಧಾಪುರಕ್ಕೆ ತರಲಾಗಿದ್ದು, 4 ದಿನಗಳ ಬಳಿಕ ಮಗನನ್ನು ಕಂಡ ತಾಯಿ ಮತ್ತು ಕುಟುಂಬಸ್ಥರ ಆಕ್ರಂದನ‌ ಮುಗಿಲ ಮುಟ್ಟಿತ್ತು.

ಒಂದೆರೆಡು ಗಂಟೆಗಳ ಕಾಲ ಬಂಧು-ಬಳಗ ಹಾಗೂ ಸಾರ್ವಜನಿಕರ ದರ್ಶನಕ್ಕೆ ಇಟ್ಟು, ನಂತರ ಸಿದ್ಧಾಪುರ ಗ್ರಾಮದ ರುದ್ರಭೂಮಿಯಲ್ಲಿ ವೀರಶೈವ-ಲಿಂಗಾಯತ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ನೆರವೇರಿಸಲಾಯಿತು.
ಅಂತ್ಯಕ್ರಿಯೆಯಲ್ಲಿ ಗುರು-ಹಿರಿಯರು, ಬಂಧು-ಬಳಗ ಹಾಗೂ ಗ್ರಾಮದ ಹಾಗೂ ಸುತ್ತಮುತ್ತಲಿನ ಅನೇಕ‌ ಮುಖಂಡರು ಮತ್ತು ಸಾರ್ವಜನಿಕರು ಭಾಗವಹಿಸಿ, ಮೃತನ ಆತ್ಮಕ್ಕೆ ಶಾಂತಿ ಕೋರಿದರು.

"ತಹಶೀಲ್ದಾರರ ಅಸಹಕಾರ ಹಾಗೂ ನಿರ್ಲಕ್ಷ್ಯತನವನ್ನು ಶಪಿಸಿದ ಸಾರ್ವಜನಿಕರು".

ಈ ಸಂದರ್ಭದಲ್ಲಿ ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ ಅವರ ಅಸಹಕಾರ ಹಾಗೂ ನಿರ್ಲಕ್ಷ್ಯತನವನ್ನು, ಮುಖಂಡರು, ಹಿರಿಯರು ಹಾಗೂ ಸಾರ್ವಜನಿಕರು ಶಪಿಸಿದರು.

ಕುಂಭಮೇಳಕ್ಕೆ ಹೋಗಿದ್ದ ಪ್ರವೀಣ ಮೃತಪಟ್ಟಿರುವ ವಿಷಯ ಫೆಬ್ರುವರಿ 4ರಂದು ಸುದ್ದಿ ಹರಡುತ್ತಿದಂತೆ ಮೃತನ‌ಮನೆಗೆ ಭೇಟಿಕೊಟ್ಟ ಕಾರಟಗಿ ತಹಶೀಲ್ದಾರ ಕುಮಾರಸ್ವಾಮಿ, ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ, ಮೃತದೇಹವನ್ನು ತರವು ಕೆಲಸವನ್ನು ಸರಕಾರ ನನಗೆ ಒಪ್ಪಿಸಿದೆ, ಒಂದೆರೆಡು ದಿನದಲ್ಲಿ ಸ್ವಗ್ರಾಮಕ್ಕೆ ಮೃತದೇಹವನ್ನು ತರುತ್ತೇವೆ ಎಂದು ಕುಟುಂಬಸ್ಥರಿಗೆ ಮಾತು ಕೊಟ್ಟು, ಮೃತದೇಹ ಇರುವ ದೂರದ ಗೋತಖ್ ಪುರದ ಆಸ್ಪತ್ರೆಗೆ ವಿಮಾನದ ಮೂಲಕ ತೆರಳಿದ್ದರು. ಆದರೆ ಅಲ್ಲಿಗೆ ಹೋಗುತಿದಂತೆ ತಮ್ಮ‌ವರಸೆ ಬದಲಾಯಿಸಿ, ಮೃತದೇಹವನ್ನು ಸಾಗಿಸಲು ನಿರ್ಲಕ್ಷಿಸಿದ್ದಲ್ಲದೇ, ಜಿಲ್ಲೆಯ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೀಖರ ಹಿಟ್ನಾಳ್, ಜಿಲ್ಲಾಧಿಕಾರಿ ನಳಿನ್ ಅತುಲ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಅಮರೇಗೌಡ ಭಯ್ಯಾಪೂರ್ ಹಾಗೂ ಮಾಜಿ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷ ಬಿ.ಬಸವರಾಜಪ್ಪ, ಮಾಜಿ ತಾಲೂಕ ಪಂಚಾಯತಿ ಸದಸ್ಯ ನೀರಗಂಟಿ ಬಸವರಾಜ್ ಮತ್ತು ಮಾಜಿ ಅಧ್ಯಕ್ಷ ಪ್ರಕಾಶ ಭಾವಿ ಅವರಿಗೆ ತಪ್ಪು ಮಾಹಿತಿ ನೀಡುವ ಮೂಲಕ ದಾರಿತಪ್ಪಿಸಿದ್ದಲ್ಲದೇ, ಅಲ್ಲಿಯೇ ಮೃತದೇಹವನ್ನು ಸುಡಲು ಪ್ರಯತ್ನಿಸಿದ್ದಾರೆ. ತದನಂತರ ರಾಷ್ಟ್ರೀಯ ನಾಯಕರೊಬ್ಬರು, ಗೋರಖ್ ಪುರದ ಸ್ಥಳೀಯ ಶಾಸಕರನ್ನು ಮತ್ತು ಸ್ಥಳಿಯ ನಗರಸಭೆಯ ಸದಸ್ಯರನ್ನು ಆಸ್ಪತ್ರೆಗೆ ಕಳುಹಿಸಿ, ಮರಣೋತ್ತರ ಪರೀಕ್ಷೆ ಮಾಡಿಸಿ, ವೈದ್ಯಕೀಯ ದಾಖಲೆಗಳನ್ನು ಕೊಡಿಸಿ, ಮೃತದೇಹವನ್ನು ಸ್ವಗ್ರಮಕ್ಕೆ ಸಾಗಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕಳುಹಿಸಿದ್ದರು. ಆದರೆ ಮೃತ ನ ಸಹೋದರ ಶರಣಪ್ಪನನ್ನು ಒಬ್ಬಂಟಿಯಾಗಿ ಬಿಟ್ಟು, ತಹಶೀಲ್ದಾರ ಕುಮಾರಸ್ವಾಮಿ ತನ್ನೊಂದಿಗೆ ಇದ್ದ ಪೋಲಿಸ್ ಅಧಿಕಾರಿಯನ್ನು ಕರೆದುಕೊಂಡು ಅಲ್ಲಿಂದ ಕಾಲ್ ಕಿತ್ತಿದ್ದನು.

ಹೀಗಾಗಿ ಸಾರ್ವಜನಿಕ ತಹಶೀಲ್ದರನ ಈ ನಡೆಯನ್ನು ಖಂಡಿಸಿ ಶಪಿಸಿದ್ದಾರೆ.

0
10 views