
ಗಂಗಾವತಿಯ ಸಮಾಜ ಸೇವಕ, ವಾಣಿಜ್ಯೋದ್ಯಮಿ ಮಹಮ್ಮದ್ ಆಸಿಫ್ ಹುಸೇನ್ (ಆಸಿಫ್ ಕೌನ್ ಹೈ) ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ.
ಗಂಗಾವತಿ: ಗಂಗಾವತಿಯ ಸಮಾಜ ಸೇವಕ, ವಾಣಿಜ್ಯೋದ್ಯಮಿ ಮೋಹ್ಮದ್ ಆಸಿಫ್ ಹುಸೇನ್ (ಆಸಿಫ್ ಕೌನ್ ಹೈ) ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.
ಫೇಸ್ ಬುಕ್, ಯುಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ "ಆಸಿಫ್ ಕೌನ್ ಹೈ" ಎಂಬ ಅಕೌಂಟ್ ಗಳ ಮೂಲಕ ವಿಶಿಷ್ಟವಾಗಿ ಜನಗಳಿಗೆ ಚಿರಪರಿಚಿತವಾಗಿ ಆಶ್ಚರ್ಯ ಮೂಡಿಸಿದ್ಧ ಹಾಗೂ ತನ್ನ ಸಾಮಾಜಿಕ ಸೇವಾ ಚಟುವಟಿಕೆಗಳಿಂದ ಬಹಳಷ್ಟು ಪ್ರಸಿದ್ಧಿ ಪಡೆದಿರುವ ಯುವ ವಾಣಿಜ್ಯೋದ್ಯಮಿ ಮೊಹ್ಮದ್ ಆಸಿಫ್ ಹುಸೇನ್ ಇವರು ಕರ್ನಾಟಕ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವುದು ಗಂಗಾವತಿ ನಗರ ಹಾಗೂ ತಾಲೂಕ ಸೇರಿದಂತೆ ಇಡೀ ಕೊಪ್ಪಳ ಜಿಲ್ಲೆಯ ಜನತೆಗೆ ಸಂತೋಷವನ್ನು ಉಂಟು ಮಾಡಿದೆ.
ಅನೇಕ ಉದ್ಯಮಗಳನ್ನು ನೆಡೆಸುತ್ತಿರುವ ಮೊಹ್ಮದ್ ಆಸಿಫ್ ಅವರು ಆರ್ಥಿಕವಾಗಿ ಸಬಲರಾಗಿದ್ದು, ಜೊತೆಯಲ್ಲಿ ಪ್ರಜ್ಞಾವಂತರಾಗಿದ್ದಲ್ಲದೇ, ಸರಳ ಹಾಗೂ ಸಂಪನ್ನ ಗುಣ ಉಳ್ಳವರಾಗಿದ್ದಾರೆ. ಜಾತಿ ಧರ್ಮ ಮೀರಿ ಸ್ನೇಹಿತರನ್ನು ಹೋಂದಿರುವ ಇವರು "ಗಂಗಾವತಿ ಕೇರ್ (GVT Care)" ಎಂಬ ಸಂಸ್ಥೆ ಕಟ್ಟಿಕೊಂಡು, ಅದರ ಮೂಲಕ ಜನಗಳಿಗೆ ಉಚಿತ ಅಂಬ್ಯುಲೆನ್ಸ್ ಸೇವೆ, ರಕ್ತದಾನಿಗಳ ಸೇವೆ, ಬಡ ವಿದ್ಯಾರ್ಥಿಗಳಿಗೆ ಸಹಾಯ, ರೋಗಿಗಳಿಗೆ ಸಹಾಯ, ಮಸೀದಿ, ಮಂದಿರ ಹಾಗೂ ಚೆಚ್೯ ಗಳಿಗೆ ವಾಟರ್ ಫಿಲ್ಟರ್ ದಾನ ಮಾಡುವುದರ ಜೊತೆಯಲ್ಲಿ ಅನೇಕ ವಸ್ತುಗಳನ್ನು ಕಾಣಿಕೆಯಾಗಿ ನೀಡಿ ಔದಾರ್ಯತೆ ಮೆರೆದಿದ್ದಾರೆ.
ಇಷ್ಟೆಲ್ಲ ಸಮಾಜ ಸೇವೆ ಮಾಡಿರುವ ಇವರು,ಗಂಗಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಸದಸ್ಯರಾಗಿ, ಯುತ್ ಕಾಂಗ್ರೆಸ್ ಅಧ್ಯಕ್ಷರಾಗಿಯೂ ಸಹ ಜನಸೇವೆ ಮಾಡಿದ್ದಾರೆ.
ಈಗ ಕರ್ನಾಟಕ ಪ್ರದೇಶ ಕಾಂಗ್ರೆಸ್ ನ ಯುವ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾಗಿ ಚುನಾಯಿತರಾಗಿ, ಆಯ್ಕೆಯಾಗಿರುವುದು ಇವರ ಸಾಧನೆಗೆ ಮೊತ್ತೊಂದು ಗರಿ ಸೇರಿದಂತಾಗಿದೆ.
ಇವರಿಗೆ ಬರುವ ದಿನಗಳಲ್ಲಿ "ಇನ್ನೂ ಹೆಚ್ಚಿನ ರೀತಿಯಲ್ಲಿ ಇನ್ನೂ ಉನ್ನತ ಮಟ್ಟದ ಸ್ಥಾನ-ಮಾನಗಳು ದೊರಕಿ, ಜನಸೇವೆ ಮಾಡುಂತಾಗಲಿ ಎಂದು ಆ ಸೃಷ್ಟಿಕರ್ತನಲ್ಲಿ ಕಲ್ಯಾಣ ರಾಜ್ಯ ಪತ್ರಿಕಾ ಬಳಗ ಬಯಸುತ್ತದೆ".