ಸಿರಾ ವಿಧಾನ ಪರಿಷತ್ ಶಾಸಕರಾದ ಎಂ ಚಿದಾನಂದ ಗೌಡರು ಮೇಲುಕುಂಟೆ ಗ್ರಾಮದಲ್ಲಿರುವ ದೇಗುಲಕ್ಕೆ 15ಲಕ್ಷ ರೂ ಬಿಡುಗಡೆ
ತುಮಕೂರು ಜಿಲ್ಲಾ ಶಿರಾ ತಾಲೂಕಿನ ಮೇಲ್ಕುಂಟೆ ಗ್ರಾಮದಲ್ಲಿರುವ ಅತ್ಯಂತ ಪುರಾತನವಾದ ಶ್ರೀ ವೇಣುಗೋಪಾಲ ( ನವನೀತ ಬಾಲಕೃಷ್ಣ ) ದೇವಾಲಯಕ್ಕೆ ಪ್ರವೇಶ ದ್ವಾರ ( ಹೆಬ್ಬಾಗಿಲು) ನಿರ್ಮಾಣಕ್ಕಾಗಿ 15 ಲಕ್ಷ ರೂಗಳನ್ನು ಶಿರಾ ವಿಧಾನ ಪರಿಷತ್ ಶಾಸಕರಾದ ಎಂ ಚಿದಾನಂದ ಗೌಡರವರು ತಮ್ಮ ಪ್ರದೇಶಾಭಿವೃದ್ಧಿ ಯೋಜನೆ ಯಡಿಯಲ್ಲಿ ಅನುದಾನ ನೀಡಿ ಶಂಕು ಸ್ಥಾಪನೆ ನೆರವೇರಿಸಿದ್ದರು ಹಾಗೂ ಬಸ್ಸಿಗಾಗಿ ಕಾಯುವ, ಮತ್ತು ಜಾತ್ರೆಗಾಗಿ ಬರುವ ಜನರಿಗಾಗಿ ದೇವಸ್ಥಾನಕ್ಕಾಗಿ ಬರುವ ಭಕ್ತಾದಿಗಳಿಗೆ ವಿಶ್ರಾಂತಿ ತೆಗೆದುಕೊಳ್ಳಲು ಅನುಕೂಲವಾಗಲೆಂದು ಒಂದು ತಂದುದಾಣವನ್ನು ನಿರ್ಮಿಸಿ ಕೊಡುವುದಾಗಿ ಬರವಸೆ ನೀಡಿದರು ನಂತರ ಶ್ರೀ ವೇಣುಗೋಪಾಲ ದೇವರ ದರ್ಶನ ಪಡೆದರು ಈ ಕಾರ್ಯಕ್ರಮದಲ್ಲಿ ಮಾತನಾಡಿ , ಜೆ ಹೊಸಳ್ಳಿ ಗ್ರಾಮದಲ್ಲಿರುವ ಶ್ರೀ ಜುಂಜಪ್ಪ ದೇವಸ್ಥಾನಕ್ಕೂ ಒಂದು ಮಹಾ ದ್ವಾರವನ್ನು ನಿರ್ಮಿಸಿ ಕೊಡುವುದಾಗಿ ಹೇಳಿದರು,ದೇವಸ್ಥಾನ ಕಟ್ಟುವುದರಿಂದ ನಮ್ಮ ಇಂದಿನ ಆಚಾರ ವಿಚಾರಗಳನ್ನು ಉಳಿಸಿಕೊಂಡು ಹೋಗಬಹುದು ಅಂತ ಹೇಳಿದರು ನಂತರ ದೇವರ ಅರ್ಚಕರು ಮಾತನಾಡಿ ಧರ್ಮಸ್ಥಳದಂತೆ ಪ್ರತಿ ಶನಿವಾರ ಅನ್ನದಾನವನ್ನು ಮಾಡಲಾಗುತ್ತದೆ ಹಾಗೆಯೇ ಅರ್ಚಕರು ಏನೇ ಕೇಳಿದರು ಎಲ್ಲಾ ಕೋಮಿನ ಭಕ್ತಾದಿಗಳು ಸಹಕಾರವನ್ನು ನೀಡುತ್ತಾರೆ ಮನುಷ್ಯ ಇದು ಸಾಯಬಾರದು ಸತ್ತು ಬದುಕಬೇಕು ಈಗ ಪುನೀತ್ ರಾಜಕುಮಾರ್ ಸರ್ ತರ ಬದುಕಬೇಕು ಹಾಗೆಯೇ ಚಿದಾನಂದ ಗೌಡರು ಮಾಡುತ್ತಿರುವ ಈ ಕೆಲಸಗಳು ಶಾಶ್ವತವಾಗಿ ಉಳಿಯುತ್ತವೆ ಎಂದು ಅರ್ಚಕರು ಹೇಳಿದರು. ನಂತರ ಜೆಡಿಎಸ್ ಮುಖಂಡರಾದ ಉಗ್ರೇಶ್ ರವರು ಮಾತನಾಡಿ ಚಿದಾನಂದ ಗೌಡರವರ ಈ ಒಳ್ಳೆ ಕಾರ್ಯಗಳನ್ನು ಪ್ರಶಂಶಿಸಿದರು ಈ ಕಾರ್ಯಕ್ರಮದಲ್ಲಿ ಬಂದ್ ಕುಂಟೆ ಕೊಟ್ಟ ಮತ್ತು ಮೇಲ್ಕುಂಟೆ ಅನೇಕ ಮುಖಂಡರು ಭಾಗವಹಿಸಿದ್ದರು