
ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ವತಿಯಿಂದ ವಿವಿಧ ಕ್ಷೇತ್ರಗಳಲ್ಲಿ ಕಲಾಸೇವೆ ಸಲ್ಲಿಸುತ್ತಿರುವ ಕಲಾವಿಧರಿಗೆ ಸನ್ಮಾನ
ಹೊಸದುರ್ಗ ಫೆ 2. ಕಲಾವಿದರು ದೇಶದ ಸಂಪತ್ತು. ಅವರು ನಮ್ಮ ನಾಡಿನ ಸಾಂಸ್ಕ್ರತಿಕ ಶ್ರೀಮಂತಿಕೆ ಉಳಿಸಿ ಬೆಳಸಲು ಜೀವನ ಪೂತಿ೯ ಶ್ರಮೀಸುವ ವ್ಯಕ್ತಿಗಳು .ಇಂತಹ ಕಲಾವಿದರನ್ನು ಗುರುತಿಸಿ ಅವರಿಗೆ ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಿ.ಪಿ.ಓಂಕಾರಪ್ಪ ತಿಳಿಸಿದರು. ಅವರು ನಗರದ ಜಂಗಮ ನಗರದ ಜಮುರಾ ನಾಗರಾಜ್ ರವರ ಕಲಾ ಮಂದಿರ ದಲ್ಲಿ ಇಂದು ಶ್ರೀ ಸಚ್ಚಿದಾನಂದ ಸೇವಾ ಟ್ರಸ್ಟ್ ರಿ ಬೆಂಗಳೂರು ವತಿಯಿಂದ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಕಲಾ ಸೇವೆ ಯನ್ನು ಸಲ್ಲಿಸುತ್ತಿರುವ ಕಲಾವಿದರಿಗೆ ಸನ್ಮಾನ ಕಾಯ೯ಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡಿ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರು ಆದ ಬಸವರಾಜ್ ರವರ ಕಾಯ೯ ಶ್ಲಾಘನೀಯ ಎಂದು ತಿಳಿಸಿದರು.
ಕಲಾವಿದರು ಮತ್ತು ಅವರ ಕಲಾಪ್ರಕಾರಗಳು ಜಾತ್ಯತೀತ ವಾಗಿರುವಂತದ್ದು ಕಲಾವಿದ ಆಥಿ೯ಕ ವಾಗಿ ತುಂಬಾ ಸಂಕಷ್ಟಗಳಲ್ಲಿದ್ದು ಅವರ ಹಸಿವು ನೀಗಿಸುವ ಕೆಲಸ ಇಂತಹ ಕಾಯ೯ಕ್ರಮ ಗಳ ಮೂಲಕ ಆಗ ಬೇಕೆಂದು ನಿಜಲಿಂಗಪ್ಪ ವಿದ್ಯಾ ಸಂಸ್ಥೆಯ ಕಾಯ೯ ದಶಿ೯ ಕೆ. ಎಸ್. ಕಲ್ಮಠ್ ರವರು ತಿಳಿಸಿ ಬೆಂಗಳೂರಿನಿಂದ ಕಲಾವಿದರು ಇರುವ ಕಡೆ ಬಂದು ಸನ್ಮಾನ ಮಾಡಿರುವ ಬಸವರಾಜ್ ರವರ ಚಿಂತನೆ ಬಹಳ ಉತ್ತವಾದದ್ದು ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಬಿ ಮೈಲಾರಪ್ಪ ಮಾತನಾಡಿ. ನಮ್ಮ ಜಿಲ್ಲೆ ಮತ್ತು ತಾಲ್ಲೂಕು ಬುಡಕಟ್ಟು ಸಂಸ್ಕೃತಿ ಗಳ ನಾಡು ಇಲ್ಲಿ ವಿಪುಲವಾದ ಜನಪದ ಕಲೆಗಳು ಮತ್ತು ಕಲಾವಿದರಿದ್ದು ಅವರಿಗೆ ಸರಿಯಾದ ನೆಲೆ ಇಲ್ಲದೆ
ಬಳಲುತ್ತಿದ್ದಾರೆ ಇಂತಹ ಸಂಘ ಸಂಸ್ಥೆಗಳು ಇವರನ್ನು ಗುರುತಿಸಿ ಉಳಿಸಿ ಬೆಳೆಸುವ ಕೆಲಸ ಆಗಬೇಕು ಎಂದು ತಿಳಿಸಿದರು .
ಸಚ್ಚಿದಾನಂದ ಸೇವಾ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷರಾದ ಬಸವರಾಜು ರವರು ಮಾತನಾಡಿ. ನಮ್ಮ ಪೂವಿ೯ಕರು ಹುಟ್ಟು ಹಾಕಿದ ಈ ಟ್ರಸ್ಟ್ ನಾಡಿನಾದ್ಯಂತ ನಮ್ಮ ದುಡಿಮೆಯ ಸ್ವಲ್ಪ ಭಾಗದ ಹಣವನ್ನು ಯಾವುದೇ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರತಿಭೆ ಗಳನ್ನು ಗುರುತಿಸಿ ಪ್ರೋತ್ಸಹ ನೀಡುವ ಕೆಲಸ ಮಾಡುವುದಾಗಿ ತಿಳಿಸಿದರು.
ಸಮಾಜ ಸೇವಕಿ ಸಿಂಧು ಅಶೋಕ್ ರವರು ಮಾತನಾಡಿ ಕಲಾವಿದರೆಲ್ಲರು