logo

ಅಥಣಿ : ಶಸ್ತ್ರ ಚಿಕಿತ್ಸೆ ಮಾಡಿ ಕರುವನ್ನು ಹೊರತೆಗೆದು ಹಸುವಿನ ಪ್ರಾಣ ಉಳಿಸಲಾಯಿತು.

ಅಥಣಿ ತಾಲೂಕಿನ ಬಾಡಗಿ ಗ್ರಾಮದ ಬಸವರಾಜ ಕಾವೇರಿ ಅವರ ಖಿಲಾರಿ ಹಸು ಚೊಚ್ಚಲ ಹೆರಿಗೆಯಾಗದೆ ಪ್ರಸವ ವೇದನೆಯಿಂದ 12 ತಾಸುಗಳಿಂದ ನರಳುತ್ತಿತ್ತು. ಸ್ಥಳೀಯ ಕೃತಕ ಗರ್ಭಧರಣಾ ಕಾರ್ಯಕರ್ತರು ಮತ್ತು ಪಶುವೈದ್ಯರು ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳಲು ಸುಮಾರು ಒಂದೂವರೆ ಘಂಟೆ ಕಾಲ ಪ್ರಯತ್ನಿಸಿದರು. ಗರ್ಭಕೋಶದ ಒಳಗಡೆ ಕರು ಸಾವನ್ನಪ್ಪಿ ಕರುವಿನ ಹೊಟ್ಟೆಯಲ್ಲಿ ಗಾಳಿ ತುಂಬಿದ್ದರಿಂದ ಗಾತ್ರ ದೊಡ್ಡದಾಗಿ ಸಾಮಾನ್ಯ ಹೆರಿಗೆ ಮಾಡಿಸಿಕೊಳ್ಳುವದು ಅಸಾಧ್ಯವಾಯಿತು. ಮಾಲೀಕರ ಅನುಮತಿಯ ಮೇರೆಗೆ ಸಿಜೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಕರುವನ್ನು ಹೊರತೆಗೆಯುವ ನಿರ್ಧಾರ ತೆಗೆದುಕೊಳ್ಳಲಾಯಿತು. ಕ್ಷೇತ್ರ ಮಟ್ಟದಲ್ಲಿ ರೈತರ ಮನೆ ಬಾಗಿಲಿನ ಮುಂದೆ ಶಸ್ತ್ರ ಚಿಕಿತ್ಸೆಗೆ ಅನುಕೂಲವಾಗುವಂತಹ ಯಾವದೇ ಸೌಲಭ್ಯಗಳು ಇರದೇ ಇದ್ದರೂ ಕೂಡಾ ಹಸುವಿಗೆ ಮುಂಜಾಗೃತವಾಗಿ ಸೂಕ್ತ ನಂಜುನಿವಾರಕ ಚುಚ್ಚು ಮದ್ದು ಹಾಗೂ ಅರವಳಿಕೆ ಚುಚ್ಚುಮದ್ದನ್ನು ನೀಡಿ ಸುಮಾರು 2 ಘಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ಮಾಡಿ ಕರುವನ್ನು ಹೊರತೆಗೆದು ಹಸುವಿನ ಪ್ರಾಣ ಉಳಿಸಲಾಯಿತು.

2
854 views