logo

ಹಿರಿಯಡಕ ಪೊಲೀಸ್ ಠಾಣೆ PSI ಮತ್ತು ಸಿಬ್ಬಂದಿಗಳ ಹಲ್ಲೆ ವಿರುದ್ಧ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ

ಉಡುಪಿ, ಜುಲೈ 29: ಕಾರ್ಯನಿರತ ಪತ್ರಕರ್ತ ಸಂಪಾದಕರ ಹಾಗೂ ವಾರದಿಗಾರರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷರಾದ ಆರತಿ ಗಿಳಿಯಾರ್ ಅವರ ಅಣ್ಣನ ಮೇಲೆ ಹಿರಿಯಡಕ ಪೊಲೀಸ್ ಠಾಣೆಯ PSI ಮತ್ತು ಸಿಬ್ಬಂದಿಗಳು ಹಲ್ಲೆ ನಡೆಸಿದ ಕುರಿತು
ಇಂದು ಉಡುಪಿ ಜಿಲ್ಲಾ ವರಿಷ್ಟಾಧಿಕಾರಿಗಳಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ಸಂಘಟನೆಯ ಮುಖಂಡರು ಮನವಿ ಸಲ್ಲಿಸಿದರು.

ಪ್ರತಿಭಟನಾಕಾರರು ಪೊಲೀಸರು ಅಧಿಕಾರ ದುರುಪಯೋಗ ಮಾಡಿಕೊಂಡು ನಾಗರಿಕರ ಮೇಲಿನ ದೌರ್ಜನ್ಯಕ್ಕೆ ಒಲವು ತೋರುತ್ತಿದ್ದಾರೆ ಎಂಬ ಆರೋಪವನ್ನು ಮುಂದಿಟ್ಟು, ದೋಷಿಗಳನ್ನು ಶಿಕ್ಷಗೆ ಒಳಪಡಿಸಲು ಆಗ್ರಹಿಸಿದರು. ಅವರು ಈ ಘಟನೆ ಕುರಿತು ಸೂಕ್ತ ತನಿಖೆ ನಡೆಸಿ, ನ್ಯಾಯ ಒದಗಿಸಬೇಕು ಎಂಬ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.

ಹಿರಿಯಡಕ ಪೊಲೀಸ್ ಠಾಣೆ PSI ಮತ್ತು ಸಿಬ್ಬಂದಿಗಳ ಹಲ್ಲೆ ವಿರುದ್ಧ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ
ಕಾರ್ಯನಿರತ ಪತ್ರಕರ್ತ ಸಂಪಾದಕರ ಹಾಗೂ ವರದಿಗಾರರ ಸಂಘ (ಕಾ.ನಿ.ಸಂ.ವ.ಸಂ) ಮತ್ತು ಭೀಮವಾದ ದಲಿತ ಸಂಘರ್ಷ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಶಶಿಕಾಂತ್, ಬೆಂಗಳೂರು ಅಧ್ಯಕ್ಷೆ ಶ್ರೀಮತಿ ಯಶಸ್ವಿನಿ,ಸಲಹ ಸಮಿತಿ ಅಧ್ಯಕ್ಷರಾದ ಸಂಜಯ್ ಮತ್ತು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ಸಂಜಯ್ ಕಾಂಬ್ಳೆ ಅವರು ಭಾಗವಹಿಸಿದರು.


ವರದಿ::ಎಸ್.ಎನ್. ವೀರೇಶ
ಜಿಲ್ಲಾ ವರದಿಗಾರರು
ರಾಯಚೂರು.

13
7620 views