
ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ
ನೀರಿನ ಪೈಪಲೈನ್ ಕಾಮಗಾರಿಯ ಗುಂಡಿಯಲ್ಲಿ ಬಿದ್ದಿರುವ ಕ್ಯಾಂಟರ ಲಾರಿ.
ಕೊಪ್ಪಳ ಜಿಲ್ಲೆಯ
ಕುಷ್ಟಗಿ ತಾಲೂಕಿನ ದೋಟಿಹಾಳ:ಗ್ರಾಮ ದಲ್ಲಿ ಕಟ್ಟಿಗೆ ಹೇರಿಕೊಂಡು ಹೋಗುವ ಲಾರಿಯು ಗುಂಡಿಯಲ್ಲಿ ಸಿಲುಕಿದ ಪರಿಣಾಮ ಲಾರಿಯು ಮಗುಚಿ ಬಿದ್ದಿದ್ದು ಇದರ ಕೆಳಗಡೆ ಎರಡು ಬೈಕುಗಳು ನಜ್ಜುಗುಜ್ಜಾದ ಘಟನೆಯು ತಾಲೂಕಿನ ದೋಟಿಹಾಳದಲ್ಲಿ ನಡೆದಿದೆ.
ತಾವರಗೇರಾ ಮೂಲದ ಅಶೋಕ ಎಂಬುವವರ ಕ್ಯಾಂಟರ ಲಾರಿಯು ಮುದೇನೂರು ದೋಟಿಹಾಳ ಮಾರ್ಗವಾಗಿ ದಾಂಡೇಲಿ ಕಡೆ ತೆರಳುತ್ತಿದ್ದು ದೋಟಿಹಾಳ ಗ್ರಾಮದಲ್ಲಿ ಇತ್ತೀಚಿಗೆ ಪೈಪ್ ಲೈನ ಕಾಮಗಾರಿಗಾಗಿ ತೋಡಿರುವ ಗುಂಡಿಯಲ್ಲಿ ಹಿಂದಿನ ಗಾಲಿಗಳು ಸಿಲುಕಿರುವ ಪರಿಣಾಮ ಘಟನೆಯು ನಡೆದಿದ್ದು ಅದೃಷ್ಟವಶಾತ್ ಯಾವುದೆ ಪ್ರಾಣಹಾನಿ ಯಾಗಿರುವುದಿಲ್ಲ.
ಸ್ಥಳಕ್ಕೆ ಪಿಎಸೈ ಭೇಟಿ: ಘಟನಾ ಸ್ಥಳಕ್ಕೆ ಕೂಡಲೆ ಪಿಎಸೈ ಹನುಮಂತಪ್ಪ ತಳವಾರ ಭೇಟಿ ನೀಡಿ ಗ್ರಾಮಸ್ಥರ ಸಹಕಾರ ಹಾಗೂ ಜೆಸಿಬಿ ಸಹಾಯದಿಂದ ವಾಹನದಲ್ಲಿರುವ ಕಟ್ಟಿಗೆಗಳನ್ನು ತೆರವುಗೊಳಿಸುವ ಕೆಲಸವನ್ನು ಮಾಡಿದರು.
ತಪ್ಪಿದ ಭಾರಿ ಅನಾಹುತ: ವಾಹನ ಬಿದ್ದ ಜಾಗದಲ್ಲಿ ಹೋಟೆಲ್ ಅಂಗಡಿಗಳು ಇದ್ದು ಇದು ಜನಸಂದಣೀಯ ಪ್ರದೇಶವಾಗಿದ್ದು ಅದೃಷ್ಟ ವಶಾತ್ ಈ ಘಟನೆ ನಡೆದ ಸಂದರ್ಭದಲ್ಲಿ ಇಲ್ಲಿ ಎರಡು ಬೈಕುಗಳನ್ನು ಹೊರತುಪಡಿಸಿ ವ್ಯಕ್ತಿಗಳು ಇರಲಾರದ ಹಿನ್ನಲೆಯಲ್ಲಿ ಭಾರಿ ಅನಾಹುತ ತಪ್ಪಿದಂತಾಗಿದೆ ಎನ್ನಬಹುದು.
ವಾಹನ ಕೆಳಗಡೆ ಸಿಲುಕಿರುವ ಬೈಕುಗಳನ್ನು ಕಡೇಕೊಪ್ಪ ಗ್ರಾಮದ ಅಶೋಕ ಬಿಂಜವಾಡಗಿ ಸೇರಿರುವ ಶೈನ್ ಬೈಕು, ಹಾಗೂ ದೋಟಿಹಾಳದ ಶ್ರೀಶೈಲ ಕಾಳಗಿ ಅವರಿಗೆ ಸೇರಿದ ಸ್ಕೂಟಿ ಎಂದು ಗುರುತಿಸಲಾಗಿದ್ದು ವಾಹನಗಳನ್ನು ಪೋಲಿಸಠಾಣೆಗೆ ತಂದು ದೂರು ದಾಖಲಿಸುವಂತೆ ಪೋಲಿಸರು ತಿಳಿಸಿದ್ದಾರೆ.
ಗ್ರಾಪಂ ವಿರುದ್ದ ಆಕ್ರೋಶ: ಈ ಘಟನೆಯು ನಡೆಯಲು ಮುಖ್ಯವಾಗಿ ಗ್ರಾಮ ಪಂಚಾಯತಿಯವರು ಕಾರಣಿ ಕರ್ತರಾಗಿದ್ದು ಕೆಲಸ ಮುಗಿದ ಮೇಲೆ ಅಗೆದಿರುವ ಗುಂಡಿಯನ್ನು ಮುಚ್ಚಬೇಕಾಗಿತ್ತು ಈ ಗುಂಡಿಯನ್ನು ಮುಚ್ಚಲಾರದ ಪರಿಣಾಮ ಈ ಅನಾಹುತ ಸಂಭವಿಸಿದೆ ಎಂದು ಗ್ರಾಪಂ ವಿರುದ್ದ ಜನರು ಆಕ್ರೋಶವನ್ನು ಹೊರಹಾಕಿದರು.
ಪೋಟೊ4ಕೆಎಸಟಿ3: ಕುಷ್ಟಗಿ ತಾಲೂಕಿನ ದೋಟಿಹಾಳದಲ್ಲಿ ಪೈಪಲೈನ್ ಕಾಮಗಾರಿಯ ಗುಂಡಿಯಲ್ಲಿ ಬಿದ್ದಿರುವ ಕ್ಯಾಂಟರ ಲಾರಿ.