6 ತಿಂಗಳಲ್ಲಿ 322 ಶಿಶುಗಳ ನಿಗೂಢ ಸಾವು?
ಬೆಳಗಾವಿ ಸರಕಾರೀ ಆಸ್ಪತ್ರೆಯಲ್ಲಿ ಇಂದು (22/12/24) ಪುನಃ ಬಾಣಂತಿಯೋರ್ವರ ದುರ್ಮರಣವಾಗಿದೆ.. ಡಿಸೆಂಬರ್ 8 ರ ವರದಿಯಂತೆ 29 ಬಾಣಂತಿಯರ,
322 ಶಿಶುಗಳ ಮರಣವಾಗಿದೆ ಕೇವಲ 6 ತಿಂಗಳಲ್ಲಿ. ಸರಕಾರ ಮತ್ತು ಅಲ್ಲಿಂದ ಆಯ್ಕೆಯಾದ ಜನಪ್ರತಿನಿಧಿಗಳಿಗೆ ಮತ್ತು ವಿರೋಧ ಪಕ್ಷದವರಿಗೆ ಇದರ ಬಗ್ಗೆ ಇನಿತಷ್ಟೂ ಯೋಚನೆಯಿಲ್ಲ, ಕಾಳಜಿಯೂ ಇಲ್ಲ.. ಯಾಕೆ , ಯಾರಿಂದಾಗಿ ಇಷ್ಟೊಂದು ಮರಣ ಸಂಭವಿಸುತ್ತಿದೆ ತನಿಖೆ ಮಾಡಿಸಿದ್ರಾ..!? ಸುವರ್ಣ ಸೌಧದಲ್ಲಿ ಕಲಾಪ ನಡೆಯಿತು ಇದರ ಬಗ್ಗೆ ಚರ್ಚೆ ಆಯ್ತಾ.. ಯಾವುದೋ ಕೆಲಸಕ್ಕೆ ಬಾರದ ಮಾತುಗಳನ್ನು ಹಿಡಿದುಕೊಂಡು ಕಲಾಪ ಹಾಳುಮಾಡಿ ಬಿಟ್ರಲ್ಲಾ... ಅಂದು ಆಡಿದ ಮಾತಿಗೆ (ಸದನದಲ್ಲಿ ಆಡಿರುವುದರ ಬಗ್ಗೆ ಯಾವುದೇ ದಾಖಲೆಯಿಲ್ಲ ಅಂತ ಸಭಾಪತಿಗಳು ಹೇಳಿದಾರೆ) ಕಣ್ಣೀರು ಬಂತು.. ಆರು ತಿಂಗಳಲ್ಲಿ ಇಷ್ಟೊಂದು ಮರಣ ಸಂಭವಿಸಿದೆ.. ಇದಕ್ಕೆ ಕಣ್ಣೀರು ಬರೋದಿಲ್ವಲ್ಲಾ.. ಒಂದು ಶಬ್ದ ಆಡಿದ್ದಕ್ಕೆ ಕಣ್ಣೀರು ಬಂತು, ಅಧಿಕಾರ ಬಳಸಿ ಆ ಶಬ್ದ ಆಡಿದವರಿಗೆ ಆಟ ಆಡಿಸಿದ್ದನ್ನ ಇಡೀ ದೇಶವೇ ನೋಡಿದ್ದಾಯ್ತು.. ಸರಕಾರಿ ಆಸ್ಪತ್ರೆಯಲ್ಲಿ ದುರ್ಮರಣಕ್ಕೀಡಾದವರ ಕುಟುಂಬದವರ ಕಣ್ಣೀರಿಗೆ ಬೆಲೆಯೇ ಇಲ್ವಾ..?
ಋಷಿ ವಾಣಿ ಕನ್ನಡ ದಿನಪತ್ರಿಕೆ ಸಂಪಾದಕರು ಅಥಣಿ. ಮಹಾದೇವ ಮಗದುಮ್
ಮೊಬೈಲ್ ನಂಬರ್ : 9743547202,9008833323