logo

ಮೋಟರ ಸೈಕಲ ಕಳ್ಳರ ಬಂಧನ; 14 ಮೋಟರ ಸೈಕಲಗಳು ವಶ


ಬೆಳಗಾವಿ: ಬೈಲಹೊಂಗಲ ಪೊಲೀಸ್ ಠಾಣೆ ಮತ್ತು ಸುತ್ತ ಮುತ್ತಲಿನ ಠಾಣೆಗಳ ವ್ಯಾಪ್ತಿಯಲ್ಲಿ ಮೋಟರ ಸೈಕಲಗಳ ಕಳ್ಳತನ ಪ್ರಕರಣಗಳು ತೀವ್ರವಾಗಿ ಸಂಭವಿಸುತ್ತಿದ್ದವು ಈ ಮೋಟರ ಸೈಕಲಗಳ ಪತ್ತೆಗಾಗಿ ಪಿ.ಎಸ್.ಮುರನಾಳ ಪಿ.ಎಸ್.ಐ(ಸಿಬಿ) ಮತ್ತು ಅಪರಾಧ ಪತ್ತೆದಳ ಸಿಬ್ಬಂದಿಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.

ಈ ದಿವಸ ದಿನಾಂಕ: 06/12/2024 ರಂದು ಶ್ರೀ ಪಿ.ಎಸ್.ಮುರನಾಳ ಪಿ.ಎಸ್.ಐ (ಸಿಬಿ) ಬೈಲಹೊಂಗಲ ಪೊಲೀಸ್ ಠಾಣೆ ರವರು ಹಾಗೂ ಸಿಬ್ಬಂದಿ ಜನರು ಕೂಡಿಕೊಂಡು ಕೆ.ಆರ್.ಸಿ.ಎಸ್ ಕಾಲೇಜ ಹತ್ತಿರ ಬೈಲಹೊಂಗಲ ಬೆಳಗಾವಿ ರಸ್ತೆ ಮೇಲೆ ಸಂಚರಿಸುವ ವಾಹನಗಳ ದಾಖಲಾತಿಗಳನ್ನು ಪರಿಶೀಲಿಸುತ್ತಿರುವ ಕಾಲಕ್ಕೆ ನಾಲ್ಕು ಜನ ವ್ಯಕ್ತಿಗಳು ಎರಡು ಮೋಟರ ಸೈಕಲಗಳ ಮೇಲೆ ಬಂದಾಗ ಸದರಿಯವರಿಗೆ ವಿಚಾರಿಸಿ ಸದರೀಯವರು ಮೋಟರ ಸೈಕಲಗಳ ದಾಖಲಾತಿ ಹಾಜರ ಪಡಿಸದೇ ಇದ್ದಾಗ ಸದರಿಯವರಿಗೆ ಠಾಣೆಗೆ ಹಾಜರ ಪಡಿಸಿಕೊಂಡು ಕೂಲಂಕುಷವಾಗಿ ವಿಚಾರಣೆಗೊಳಪಡಿಸಿದಾಗ ಸದರೀಯವರು ಎರಡೂ ಮೋಟರ ಸೈಕಲಗಳನ್ನು ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದು ಅಲ್ಲದೇ ಸದರೀ ಆರೋಪಿತರಾದ,

1] ಅಭಿಷೇಕ ಬಾಬು ಹೊಸಟ್ಟಿ ಸಾ: ಚಿಕ್ಕಬಾಗೇವಾಡಿ

2] ಸಚಿನ ಈರಪ್ಪ ಬಡಿಗೇರ ಸಾ: ಸದರ

3] ಅಭಿಷೇಕ ಸುರೇಶ ಪಾರಿಶ್ವಾಡ ಸಾ: ಸದರ.

4] ಸಂದೀಪ ಈರಪ್ಪ ಬಡಿಗೇರ ಸಾ: ಸದರ.

ಇವರ ಕಡೆಯಿಂದ ಒಟ್ಟು 10 ಲಕ್ಷ ರೂಪಾಯಿ ಕಿಮ್ಮತ್ತಿನ ಒಟ್ಟು 14 ಮೋಟರ ಸೈಕಲಗಳನ್ನು ವಶಪಡಿಸಿಕೊಂಡು ಸದರೀ ಆರೋಪಿತರಿಗೆ ಮಾನ್ಯ ನ್ಯಾಯಾಲಯಕ್ಕೆ ಹಾಜರ ಮಾಡಿದ್ದು ಅದೆ.

ಸದರೀ ಪ್ರಕರಣದ ಆರೋಪಿತರ ತಪಾಸ ಬಗ್ಗೆ ಮಾನ್ಯ ಶ್ರೀ ಭೀಮಾಶಂಕರ ಗುಳೇದೆ ಐ.ಪಿ.ಎಸ್ ಎಸ್.ಪಿ ಸಾಹೇಬರು ಬೆಳಗಾವಿ, ಶ್ರೀ ಶೃತಿ ಎಸ್.ಎನ್ ಐಪಿಎಸ್ ಹೆಚ್ಚುವರಿ ಎಸ್.ಪಿ.ಸಾಹೇಬರು ಬೆಳಗಾವಿ ಮತ್ತು ಶ್ರೀ ರಾಮಗೊಂಡ ಬಸರಗಿ ಹೆಚ್ಚುವರಿ ಎಸ್.ಪಿ.ಸಾಹೇಬರು-2 ಬೆಳಗಾವಿ ಹಾಗೂ ಶ್ರೀ ರವಿ ಡಿ ನಾಯ್ಕ ಡಿ.ಎಸ್.ಪಿ ಬೈಲಹೊಂಗಲ ಮತ್ತು ಶ್ರೀ ಪಿ.ವಿ.ಸಾಲಿಮಠ ಪಿ.ಐ ಬೈಲಹೊಂಗಲ ರವರ ಮಾರ್ಗದರ್ಶನದಲ್ಲಿ ಶ್ರೀ ಪಿ.ಎಸ್.ಮುರನಾಳ ಪಿ.ಎಸ್.ಐ (ಸಿಬಿ) ಬೈಲಹೊಂಗಲ .ಪಿ.ಎಸ್ ಮತ್ತು ಸಿಬ್ಬಂದಿ ಜನರಾದ, 2386 ಎಸ್.ಯು.ಮೆಣಸಿನಕಾಯಿ, సి. సి ಬನಂ: 1396 ವಿ.ಎಮ್.ದೊಡ್ಡಹೊನ್ನಪ್ಪನವರ, ಸಿ.ಹೆಚ್.ಸಿ ಬನಂ: 1756 ಎಮ್.ಬಿ.ಕಂಬಾರ ಹಾಗೂ ಸಿಪಿಸಿ 3142 ... みん 2987 ... ผม : 3826 5.2.. みん ಬನಂ: 2768 ಜೆ.ಆರ್.ಮಳಗಲಿ ಇವರನ್ನು ಒಳಗೊಂಡ ತನಿಖಾ ತಂಡವು ಪ್ರಕರಣವನ್ನು ಭೇದಿಸಿ 04 ಜನ ಆರೋಪಿತರಿಗೆ ದಸ್ತಗೀರ ಮಾಡಿ ಅವರಿಂದ ವಿವಿಧ ಕಡೆಗಳಲ್ಲಿ ಕಳವು ಮಾಡಿದ 14 ಮೋಟರ ಸೈಕಲಗಳನ್ನು ಪತ್ತೆ ಮಾಡಿದ್ದು ಈ ಕಾರ್ಯ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕಾರ್ಯವನ್ನು ಮಾನ್ಯ ಪೊಲೀಸ್ ವರಿಷ್ಠಾಧಿಕಾರಿಗಳು ಬೆಳಗಾವಿ ರವರು ಪ್ರಶಂಸೆ ವ್ಯಕ್ತ ಪಡಿಸಿರುತ್ತಾರೆ.

ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ಬೆಳಗಾವಿ

41
12474 views