logo

ಬ್ಯಾಡಗಿ ರೋಟರಿ ಕ್ಲಬ್ ಮಕ್ಕಳ ನೃತ್ಯ ಪ್ರದರ್ಶನ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ

ಬ್ಯಾಡಗಿ ರೋಟರಿ ಕ್ಲಬ್ ವತಿಯಿಂದ ಅಂಗನವಾಡಿ ಮಕ್ಕಳ ನೃತ್ಯ ಪ್ರದರ್ಶನ ಮತ್ತು ಪ್ರಶಸ್ತಿ ವಿತರಣಾ ಸಮಾರಂಭ ನಡೆಯಿತು
ಬ್ಯಾಡಗಿ ಪಟ್ಟಣದ ಕದರಮಂಡಲಗಿ ರಸ್ತೆಯಲ್ಲಿರುವ ಸಮಗ್ರ ಸಮಾಜ ಕಾರ್ಯ ನಿರ್ವಹಣಾ ಕೇಂದ್ರ ಸ್ನೇಹ ಸದನದಲ್ಲಿ ಬ್ಯಾಡಗಿ ರೋಟರಿ ಕ್ಲಬ್ ವತಿಯಿಂದ ಪಟ್ಟಣದ ಗಾಂಧಿನಗರ, ಸಂಗಮೇಶ್ವರ ನಗರ, ಇಸ್ಲಾಂಪುರ, ಶಿವಪುರ ಬಡಾವಣೆಯ ಒಟ್ಟು ನಾಲ್ಕು ಕ್ರಷ್ ಗಳ ಅಂಗನವಾಡಿ ಮಕ್ಕಳ ನೃತ್ಯ ಪ್ರದರ್ಶನ ಸಮಾರಂಭ ನಡೆಯಿತು. ನೃತ್ಯ ಪ್ರದರ್ಶನ ಮಾಡಿದ ಪ್ರತಿಯೊಬ್ಬ ಮಕ್ಕಳಿಗೂ ರೋಟರಿ ಕ್ಲಬ್ ವತಿಯಿಂದ ಪ್ರಶಸ್ತಿ ಪತ್ರ ಮತ್ತು ಟಿಫನ್ ಬಾಕ್ಸ್ ಗಿಫ್ಟ್ ಮತ್ತು ಸಿಹಿ ತಿಂಡಿಗಳನ್ನು ವಿತರಿಸಲಾಯಿತು.
ಸಮಾರಂಭದ ವೇದಿಕೆಯಲ್ಲಿ ಉದ್ಘಾಟಕರಾಗಿ ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಮುಖ್ಯ ಅತಿಥಿಗಳಾಗಿ ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಸದಸ್ಯರಾದ ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ಇನ್ನರ್ವಿಲ್ ಕ್ಲಬ್ಬಿನ ಸದಸ್ಯರಾದ ಶ್ರೀಮತಿ ಪುಷ್ಪಾ ಇಂಡಿಮಠ ಮತ್ತು ಅಧ್ಯಕ್ಷರಾಗಿ ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಇದ್ದರು. ಗಾಂಧಿನಗರ ಅಂಗನವಾಡಿಯ ಮುಖ್ಯ ಶಿಕ್ಷಕಿ ಸರಸ್ವತಿ ನಿರೂಪಣೆ ಮಾಡಿದರು.
ನೃತ್ಯ ಪ್ರದರ್ಶನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಮಾತನಾಡಿ ನಮ್ಮ ರೋಟರಿ ಸಂಸ್ಥೆಯ ಎಲ್ಲಾ ಸದಸ್ಯರ ಸಹಾಯದಿಂದ ಇಂದಿನ ಮಕ್ಕಳ ನೃತ್ಯ ಪ್ರದರ್ಶನ ಸಮಾರಂಭ ಹಾಗೂ ಪ್ರಶಸ್ತಿ ವಿತರಣಾ ಸಮಾರಂಭ ನಡೆದಿದ್ದು ನಮ್ಮ ಸಂಸ್ಥೆಯ ಎಲ್ಲಾ ಸೇವಾ ಕಾರ್ಯಗಳು ಎಲ್ಲ ಸದಸ್ಯರ ಸಹಮತ ಹಾಗೂ ಅವರ ವಯಕ್ತಿಕ ಆರ್ಥಿಕ ಸಹಾಯದಿಂದ ನಡೆಯುತ್ತವೆ ನಮ್ಮ ಸದಸ್ಯರು ಸಮಾಜ ಸೇವಾ ಕಾರ್ಯದಲ್ಲಿ ಸದಾ ನನ್ನ ಜೊತೆ ಕೈಜೋಡಿಸುತ್ತಿದ್ದು ನಾವು ನಡೆಸುವ ಎಲ್ಲಾ ಸಮಾಜ ಸೇವಾ ಕಾರ್ಯಗಳಿಗೆ ಸಹಾಯ ಹಸ್ತ ನೀಡಿ ನಮ್ಮ ಸಂಸ್ಥೆಯ ಉದ್ದೇಶವನ್ನು ನೆರವೇರಿಸಲು ಸಹಕರಿಸುತ್ತಿದ್ದಾರೆ. ಇಂದಿನ ನೃತ್ಯ ಪ್ರದರ್ಶನಕ್ಕೆ ಬಂದಿರುವ ಎರಡು ಮೂರು ವರ್ಷದ ಚಿಕ್ಕ ಮಕ್ಕಳು ಮನೆಯಲ್ಲಿ ಯಾವ ಮಾತನ್ನು ಕೇಳದೆ ಇರುವ ಪರಿಸ್ಥಿತಿಯಲ್ಲಿ ಶಿಕ್ಷಕರು ಇವರನ್ನು ನೃತ್ಯ ಪ್ರದರ್ಶನಕ್ಕೆ ಸಜ್ಜು ಮಾಡಿ ಸುಂದರ ವೇಷಭೂಷಣಗಳೊಂದಿಗೆ ತಮ್ಮ ಕಲೆ ಪ್ರದರ್ಶನ ಮಾಡಿಸುತ್ತಿರುವುದರ ಹಿಂದೆ ಅವರ ಪರಿಶ್ರಮ ಬಹಳ ಕಾಣುತ್ತಿದೆ ಮನೆಯಲ್ಲಿ ಮಕ್ಕಳನ್ನು ಅವರ ಕಾಟಗಳನ್ನು ಸಹಿಸಲಾಗದೆ ಇಂತಹ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳನ್ನು ಬಿಡುತ್ತಾರೆ ಶಿಕ್ಷಕರು ಇವರನ್ನು ನೋಡಿಕೊಳ್ಳುವುದರ ಜೊತೆಗೆ ಸಾಮಾನ್ಯ ಜ್ಞಾನ ಶಿಸ್ತು ಕಲಿಸುವುದರಲ್ಲಿ ಮೊದಲ ಪಾತ್ರ ವಹಿಸುತ್ತಾರೆ ಇವರ ಸೇವೆ ಶ್ರೇಷ್ಠವಾದದ್ದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸ್ನೇಹ ಸದನದ ನಿರ್ದೇಶಕಿ ಸಿಸ್ಟರ್ ರೂಪ ಮಾತನಾಡಿ ಅಂಗನವಾಡಿ ಕೇಂದ್ರಗಳಲ್ಲಿ ಸಮಾರಂಭಗಳು ಸಂಸ್ಕೃತಿಕ ಚಟುವಟಿಕೆಗಳು ಕಲೆ ಕ್ರೀಡೆಗಳು ನಡೆಯುವುದು ಅಸಾಧ್ಯ ಹಾಗು ಅಪರೂಪ. ಇಂತಹ ಸಂದರ್ಭದಲ್ಲಿ ನಮ್ಮ ಅಂಗನವಾಡಿ ಶಿಕ್ಷಕಿ ಸರಸ್ವತಿ ಇವರ ವಿನಂತಿ ಮೇರೆಗೆ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಇವರು ಕಳೆದ ನಾಲ್ಕು ವರ್ಷಗಳಿಂದ ಸತತವಾಗಿ ನಮ್ಮ ಸ್ನೇಹ ಸದನದಲ್ಲಿ ಅಂಗನವಾಡಿಗಳ ಮಕ್ಕಳ ನೃತ್ಯ ಪ್ರದರ್ಶನಕ್ಕೆ ಸಹಾಯ ನೀಡಿ ಪ್ರಶಸ್ತಿಗಳನ್ನೂ ಹಾಗು ವಿಶೇಷ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ ಇದರಿಂದ ನಮ್ಮ ಎಲ್ಲಾ ಅಂಗನವಾಡಿ ಕೇಂದ್ರಗಳ ಮಕ್ಕಳು ಹಾಗೂ ಪಾಲಕರು ಬಹಳ ಸಂತೋಷ ವ್ಯಕ್ತಪಡಿಸಿದ್ದಾರೆ ಪ್ರತಿ ವರ್ಷ ನೃತ್ಯ ಪ್ರದರ್ಶನಕ್ಕೆ ಮಕ್ಕಳನ್ನು ಪ್ರೋತ್ಸಾಹಿಸಿ ಮಕ್ಕಳ ಮುಂದಿನ ಶಿಕ್ಷಣಕ್ಕೆ ಬುನಾದಿ ಹಾಕುವಲ್ಲಿ ರೋಟರಿ ಸಂಸ್ಥೆಯ ಶ್ರೀ ಮಂಜುನಾಥ ಉಪ್ಪಾರ ಮೂಲಕಾರಣಿಕರ್ತರಾಗಿದ್ದಾರೆ ಇವರ ಸೇವೆ ಅನೇಕ ವರ್ಷಗಳಿಂದ ಬ್ಯಾಡಗಿ ಸಾರ್ವಜನಿಕರಿಗೆ ಲಭಿಸಿದ್ದು ಇನ್ನು ಮುಂದೆಯೂ ಇವರ ಸೇವಾ ಕಾರ್ಯಗಳು ಬ್ಯಾಡಗಿ ಪಟ್ಟಣದ ಸಾರ್ವಜನಿಕರಿಗೆ ಹಾಗು ಮಕ್ಕಳಿಗೆ ಇನ್ನು ದೊಡ್ಡದಾಗಿ ಲಭಿಸಲಿ ಎಂದು ಆ ದೇವರಲ್ಲಿ ನಾವು ಸಹಿತ ಪ್ರಾರ್ಥಿಸುತ್ತೇವೆ ಎಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಸಿಸ್ಟೆಂಟ್ ಗವರ್ನರ್ ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ, ಅಧ್ಯಕ್ಷ ಎಸ್ ಎಂ ಬೂದಿಹಾಳಮಠ, ಕಾರ್ಯದರ್ಶಿ ನಿರಂಜನ ಶೆಟ್ಟಿಹಳ್ಳಿ, ಕಿರಣ ಮಾಳೇನಹಳ್ಳಿ, ಸತೀಶ ಅಗಡಿ, ಜಗದೀಶ ದೇವಿಹೊಸೂರ, ಸಿದ್ಧಲಿಂಗೇಶ ಕೊಂಚಿಗೆರಿ, ಬಸವರಾಜ ಸುಂಕಾಪುರ, ಆನಂದಗೌಡ ಸೋರಟುರ, ಜೇ ಹೆಚ್ ಪಾಟೀಲ, ಎಂ ಎನ್ ಬಂದಮ್ಮನವರ, ಮಾಲತೇಶ ಕಲ್ಯಾಣಿ , ಪವಾಡೇಪ್ಪ ಆಚನುರ, ವೀರೇಶ ಬಾಗೋಜಿ, ಶ್ರೀಮತಿ ಪುಷ್ಪಾ ಇಂಡೀಮಠ, ಸಿಸ್ಟರ್ ರೂಪ, ಶಿಕ್ಷಕಿಯರಾದ ಸರಸ್ವತಿ, ರಹಿಮಾ, ಫಾತಿಮಾ, ಲಲಿತ, ರೇಣುಕಾ, ಸಹಾಯಕಿಯರಾದ ಮಮತಾ, ಶೈಲಾ, ದೀಪ, ಸವಿತಾ ಹಾಗೂ ಇನ್ನಿತರರು ಉಪಸ್ಥಿತರಿದ್ದರು

7
1398 views