logo

ಹಿರಿಯೂರು ನಗರಸಭೆ ಮುತ್ತಿಗೆ ಪ್ರತಿಭಟನೆ ನಡೆಯಿತು,

ಹಿರಿಯೂರು ನಗರಸಭೆಯ ಆಡಳಿತದಲ್ಲಿ ರಸ್ತೆ ಅಗಲಿಕಲಣ ಕಾರ್ಯ ವಿಳಂಬವಾಗಿರುವುದ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬೃಹತ್ ಪ್ರತಿಭಟನೆ ನಗರಸಭೆ ಮುತ್ತಿಗೆ ಹೋರಾಟ ನಡೆಯಿತು ಈ ಹೋರಾಟದಲ್ಲಿ ಭಾಗಿಯಾದ ಘಾಟ್ ರವಿ ಅವರು ನಗರಸಭೆ ಆಡಳಿತ ಎತ್ತ ಸಾಗುತ್ತಿದೆ ಎಂದು ಗೊತ್ತಾಗುತ್ತಿಲ್ಲ ಅಧ್ಯಕ್ಷರಾಗಲಿ ಮುಖ್ಯ ಅಧಿಕಾರಿಗಳಾಗಲಿ ರಸ್ತೆ ಅಗಲೀಕರಣದ ಕಾರ್ಯವನ್ನು ಅಸಡ್ಡೆ ತೋರುತ್ತಿರುವುದು ಸಾರ್ವಜನಿಕರಿಗೆ ಬಹುದೊಡ್ಡ ಅನ್ಯಾಯವಾಗುತ್ತಿದೆ ಹಾಗಾಗಿ ನೀವು ಈ ಕಾರ್ಯವನ್ನು ತ್ವರಿತ ಗತಿಯಲ್ಲಿ ಮಾಡದಿದ್ದರೆ ಮುಂದಿನ ದಿನಹಿರಿಯೂರು ಬಂದ್ ಕಾರ್ಯಕ್ರಮ ಖಂಡಿತ ಮಾಡುತ್ತೇವೆ, ನಮ್ಮನ್ನು ಆಳುತ್ತಿರುವ ಹಿರಿಯೂರು ಜಿಲ್ಲಾ ಉಸ್ತುವಾರಿ ಸಚಿವರು ಗಮನಹರಿಸಬೇಕು ಇಲ್ಲವಾದರೆ ಮುಂದಿನ ಹೋರಾಟ ಉಗ್ರವಾಗಿರುತ್ತದೆ, ಎಂದು ಘಾಟ್ ರವಿಕುಮಾರ್ ಅವರು ಒತ್ತಾಯಿಸಿದರು ,ಇದೇ ಸಂದರ್ಭದಲ್ಲಿ ಕೆ ,ಪಿ , ಶ್ರೀನಿವಾಸ್ ರವರು ಮಾತನಾಡಿ ನಗರ ಸಭೆಯ ಆಡಳಿತ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಆರು ದಿನದ ಹಿಂದೆ ಶ್ರೀಶೈಲ ಸರ್ಕಲ್ ನಲ್ಲಿ ಕಾಂಗ್ರೆಸ್ ಆಫೀಸ್ ನಿರ್ಮಿಸಲು ಜಾಗ ಬೇಕೆಂದು ಅಂಗಡಿಗಳು ಮತ್ತು ಬಡ ಜನಗಳಮನೆಗಳನ್ನು ಕ್ಷಣಾರ್ಧದಲ್ಲಿ ಧ್ವಂಸ ಮಾಡಿ ಎತ್ತಂಗಡಿ ಮಾಡಿಸಿದ್ದೀರಾ ನಿಮ್ಮ ಕಾರ್ಯವೈಕರಿ ಕಂಡು ಹಿರಿಯೂರಿನ ಜನ ಆಶ್ಚರ್ಯಗೊಂಡಿದ್ದಾರೆ ಆದರೆ ರಸ್ತೆ ಮೈಸೂರು ಬಳ್ಳಾರಿ ಕಡೆ ಹಿರಿಯೂರಿನ ಒಳಗಡೆ ಅಗಲೀಕರಣ ವಾಗಬೇಕಿದ್ದ ರಸ್ತೆಯನ್ನು ವಿಳಂಬ ಮಾಡುತ್ತಿರುವುದು ಇಲ್ಲಿನ ಜನರಿಗೆ ನೋವಾಗಿದೆ ಅದರ ಬಗ್ಗೆ ಗಮನ ಹರಿಸಿಲ್ಲ ನೀವು ಅದಕ್ಕಾಗಿ ಬೀದಿಗಿಳಿದು ನಗರಸಭೆ ಮುತ್ತಿಗೆ ಹಾಕುವ ಮೂಲಕ ನಿಮಗೆ ಮನವರಿಕೆ ಮಾಡುತ್ತಿದ್ದೇವೆ ಮುಂದಿನ ದಿನದಲ್ಲಿ ನಮ್ಮ ಹೋರಾಟ ಎಲ್ಲಿಗೆ ಹೋಗಿ ಮುಟ್ಟುತ್ತದೆ ಗೊತ್ತಿಲ್ಲ ಎಚ್ಚರಿಕೆ ಇಟ್ಟುಕೊಂಡು ತ್ವರಿತ ಗತಿಯಲ್ಲಿ ರಸ್ತೆ ಅಗಲೀಕರಣವನ್ನು ನಗರಾಡಳಿತ ಮಾಡಬೇಕಾಗಿ ವಿನಂತಿಸಿಕೊಳ್ಳುತ್ತೇನೆ, ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಮುಖಂಡರಾದ ಪ್ರದೀಪ್ ವೇದಾವತಿ ನಗರ ರವರು ಯಾವ ಪಕ್ಷವು ನೋಡುವುದಿಲ್ಲ ಜನರಿಗೆ ಒಳ್ಳೆಯದಾಗಬೇಕು ಹಿರಿಯೂರಿನ ಟ್ರಾಫಿಕ್ ಕಿರಿಕಿರಿ ನಿಲ್ಲಬೇಕು ನಾನು ಈ ಕೆಲಸ ಮುಂದಿನ ದಿನದಲ್ಲಿ ಬೇಗನೆ ಆಗದಿದ್ದರೆ ಯಾವ ಪಕ್ಷನು ನೋಡದೆ ಹೋರಾಟ ಮಾಡುತ್ತೇನೆ ಈಗಲು ಹೋರಾಟಗಾರರಿಗೆ ಬೆಂಬಲಿಸುತ್ತಾ ಇದ್ದೇನೆ ಮುಂದೇನಾದರು ರಸ್ತೆ ಕಾಮಗಾರಿ ಬೇಗ ಮುಗಿಯದಿದ್ದರೆ ನಗರಸಭೆಯ ಕಚೇರಿಗಳಲ್ಲೂ ಕೆಲಸ ಮಾಡಲು ಬಿಡುವುದಿಲ್ಲ ನೀವು ಕೂತ್ಕೊಳ್ಳಲು ಚೇರುಗಳು ಇರುವುದಿಲ್ಲ ಎಂದು ಘಂಟಾಘೋಷವಾಗಿ ಹೋರಾಟಕ್ಕೆ, ,ಬೆಂಬಲಿಸಿದರು, ಹಿರಿಯೂರಿನ ಮಾಜಿ ಪುರಸಭಾ ಅಧ್ಯಕ್ಷರು ವಿಹೆಚ್, ರಾಜಣ್ಣನವರು ಮಾತನಾಡಿ ನಗರಸಭೆಯ ಸದಸ್ಯರುಗಳು ಯಾರ ಭಯವು ಇಲ್ಲದೆ ಕೆಲಸಗಳನ್ನು ನಿರ್ಲಕ್ಷ ತೋರುತ್ತಿದ್ದಾರೆ ಇವರಿಗೆ ಹಣ ಮಾಡುವ ಉದ್ದೇಶ ಒಂದೇ ಕೆಲಸದ ಕಡೆ ಗಮನ ಇಲ್ಲ ಬರಿ ಹುಂಬತನ ದಿಂದಲೇ ಬೇಜವಾಬ್ದಾರಿತನ ರಿಂದ ನಡೆದುಕೊಳ್ಳುವುದು ಸರಿ ಇಲ್ಲ ಎಂದು ನೇರವಾಗಿ ಖಂಡಿಸಿದ್ದಾರೆ ಹೋರಾಟಕ್ಕೂ ಬೆಂಬಲ ಸೂಚಿಸಿದರು ,ಇದೇ ಸಂದರ್ಭದಲ್ಲಿ, ಕೇಶವಮೂರ್ತಿ ,ರವರು ಮಾತನಾಡಿ ಹಿಂದೆ ನಾವು ಕೂಡ ರಸ್ತೆ ಅಗಲೀಕರಣಕ್ಕೆ ಸುಮಾರು ವರ್ಷಗಳಿಂದ ಹೋರಾಟ ಮಾಡಿ ಬೇಸತ್ತು ಹೋಗಿದೆ ಈಗಲಾದರೂ ತೋರಿತಗತಿಯಲ್ಲಿ ಆಗುತ್ತದೆ ಎಂಬ ಆಸೆ ಉಂಟಾಗಿದೆ ಆದರೆ ಅರ್ಧದಲ್ಲಿಯೇ ಸರಿಯಾಗಿ ಮಾಡದಿಲ್ಲದ ಕಾರಣ ಹೋರಾಟಕ್ಕೆ ಕೈಜೋಡಿಸಬೇಕಾಗಿದೆ ಹಿರಿಯೂರು ಒಂದು ಸುಂದರ ಕ್ಷೇತ್ರ ಇತಿಹಾಸವುಳ್ಳ ಊರನ್ನು ಇನ್ನು ಸುಂದರವಾಗಿಸುವ ನಿಟ್ಟಿನಲ್ಲಿ ನೀವು ಕೆಲಸ ಮಾಡಬೇಕು ಎಂದು ಆಗ್ರಹಿಸಿದರು ಇದೇ ಸಂದರ್ಭದಲ್ಲಿ ಕರ್ನಾಟಕ ನವ ನಿರ್ಮಾಣ ಸೇನೆ ತಾಲೂಕು ಅಧ್ಯಕ್ಷರು, ಬಿ ಲಕ್ಷ್ಮಿಕಾಂತ್ ಮಾತನಾಡಿ ಹಿರಿಯೂರು ಸಾರ್ವಜನಿಕರಿಗೆ ರಸ್ತೆಯ ಗಾಂಧಿ ಸರ್ಕಲ್ ಬಳಿ ಇರುವ ಕಲ್ಪನಾ ಹೋಟೆಲ್ ಭಾಗದಲ್ಲಿ ಜನರು ಓಡಾಡುಲ ತತ್ತರಿಸಿ ಹೋಗುತ್ತಾರೆ ವಾಹನಗಳ ದಟ್ಟಣೆಯ ತೊಂದರೆಗೆ ಹಿರಿಯೂರಿಗೆ ಹಳ್ಳಿಯಿಂದ ಬರುವ ಜನರು ಹೋಗುವುದೇ ಬೇಡ ಎಂಬ ಮನೋಭಾವ ಕಿರಿಕಿರಿ ಉಂಟಾಗಿ ಎಷ್ಟೋ ಗಾಡಿಗಳು ಆಕ್ಸಿಡೆಂಟ್ ಕೂಡ ಆಗಿದ್ದಾರೆ ಇದನ್ನೆಲ್ಲಾ ಸರಿಪಡಿಸಬೇಕಾಗಿ ನಗರಾಡಳಿತ ಮುಂಜಾಗ್ರತೆಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಇಲ್ಲವಾದರೆ ಮುಂದಿನ ದಿನದಲ್ಲಿ ಹಿರಿಯೂರು ನಗರವನ್ನು ಬಂದ್ ಆಚರಿಸಬೇಕಾಗುತ್ತದೆ ಎಂದು ಹೋರಾಟಕ್ಕೆ ಕೈಜೋಡಿಸಿದರು, ರೈತಪರ ಹೋರಾಟಗಾರರಾದ ಹೊರಕೆರಪ್ಪನವರು ಕೂಡ ಅವರ ಮನೆಯೇ ರಸ್ತೆಗೆ ಹೋಗುತ್ತಿದ್ದರು ತಲೆಕೆಡಿಸಿಕೊಳ್ಳದೆ ರಸ್ತೆ ಹಗಲೀಕರಣವಾಗಲಿ ಎಂದು ಕೈ ಜೋಡಿಸಿದ ಹೊರಕೆರಪ್ಪನವರು, ಡಿಎಸ್ಎಸ್, ತಿಮ್ಮರಾಜು, ರವರು ಕೂಡ ಹೋರಾಟಕ್ಕೆ ಬೆಂಬಲಿಸಿ ಹಿರಿಯೂರು ಸುಮಾರು ಲಕ್ಷಾಂತರ ಜನ ಓಡಾಡುವಂತೆ ಸ್ಥಳ ರಸ್ತೆ ಚೆನ್ನಾಗಿದ್ದರೆ ಇನ್ನು ನಮ್ಮ ಊರು ಹೆಸರಾಗುತ್ತದೆ ಈ ಕೆಲಸವನ್ನು ನಗರಸಭೆ ಆಡಳಿತ ಅತಿ ಬೇಗ ಮುಗಿಸದಿದ್ದರೆ ಇನ್ನು ಮುಂದೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು, ಇಷ್ಟೆಲ್ಲಾ ಆದ ನಂತರ ನಗರಸಭೆ ಅಧ್ಯಕ್ಷರಾದ, ಅಜ್ಜಪ್ಪನವರು ಆಗಮಿಸಿ, ಮನವಿ ಪತ್ರ ಸ್ವೀಕರಿಸಿ ನನ್ನನ್ನು ಯಾರು ಹಣಕ್ಕಾಗಿ ಬುಕ್ಕಾಗಿದ್ದಾರೆ ಎಂದು ತಿಳಿಯಬೇಡಿ ನನ್ನ ಶಪಥ ಯಾರೇ ಬಂದರೂ ರಸ್ತೆಯನ್ನು ನಮ್ಮ ವ್ಯಾಪ್ತಿಗೆ ಬರುವ ಜಾಗವನ್ನು ಖಂಡಿತ ಅಗಲೀಕರಣ ಮಾಡುವುದರಲ್ಲಿ ಮಾತು ತಪ್ಪುವುದಿಲ್ಲ ಯಾವ ಹಣಕ್ಕಾಗಿಯೂ ಬಗ್ಗುವುದಿಲ್ಲ ಜಗ್ಗುವುದಿಲ್ಲ ನೀವು ತಪ್ಪು ತಿಳಿಯಬೇಡಿ ನನ್ನ ಕೆಲಸ ಅಮರವಾಗಿ ಉಳಿಯಬೇಕು ನಮ್ಮ ಪಕ್ಷವು ಖಂಡಿತ ಈ ಕಾರ್ಯ ಮಾಡೆ ತೀರುತ್ತೇವೆ ಸಾರ್ವಜನಿಕರು ಸಹಮತದಿಂದ ಸಹಕರಿಸಬೇಕೆಂದು ನಗರಸಭಾ ಆಡಳಿತದಿಂದ ಮನವಿ ಸ್ವೀಕರಿಸಲಾಯಿತು, ಗಾಟ್ ಚಂದ್ರಪ್ಪ ಗಾಟ್ ಮಂಜುನಾಥ್ , ಗಾಟ್ ಕರ್ಣ , ನೂರ್ ಅಹಮದ್ ಆಸಿಫ್, ಚಿದಾನಂದ್, ವಿಜಯ್ ಕುಮಾರ್ ಕೆಆರ್ ಹಳ್ಳಿ ರಘುನಾಥ್ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ, ಜಗದೀಶ್ ಅಭಿನಹೊಳೆ ಈಶ್ವರಗೆರೆ ರಾಘವೇಂದ್ರ, ಮಹಾಲಿಂಗಪ್ಪ ಉಪ್ಪಳಗೆರೆ, ಬಾಬು ಕೋನಿಗರಹಳ್ಳಿ, ವೇದವತಿ ನಗರ ತಿಪ್ಪೇಸ್ವಾಮಿ ನಗರಸಭಾ ಸದಸ್ಯರು ಕೂಡ ಉಪಸ್ಥಿತರಿದ್ದರು , ವರದಿಗಾರರು ✍️ಮಹೇಶ್ ಆರ್ ,ಆಲ್ ಇಂಡಿಯಾ ಮೀಡಿಯಾ

196
3837 views