ಗ್ರಾಪಂ ಅಧ್ಯಕ್ಷರ, ಉಪಾಧ್ಯಕ್ಷರ ಪದನಾಮವನ್ನು ಫಲಕದಲ್ಲಿ ಅಳವಡಿಸಲು ನಿರುತ್ಸಾಹ
ದೇವನಹಳ್ಳಿ: ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾಗಿ, ಉಪಾಧ್ಯಕ್ಷರಾಗಿ ಆಯ್ಕೆಗೊಂಡು ಎರಡು ತಿಂಗಳು ಕಳೆದು ಮೂರನೇ ತಿಂಗಳಿಗೆ ಕಾಲಿಟ್ಟಿದ್ದರೂ ಸಹ ಇಂದಿಗೂ ನಾಮಫಲಕದಲ್ಲಿ ಪದನಾಮವನ್ನು ಅಳವಡಿಸಲು ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುನಿರಾಜು ನಿರುತ್ಸಾಹ ತೋರಿದ್ದಾರೆ.
ಕಳೆದ ವಾರದ ಹಿಂದೆಯಷ್ಟೇ ಪದನಾಮವನ್ನು ಫಲಕದಲ್ಲಿ ಅಳವಡಿಸಲು ಸೂಚಿಸಿದ್ದರೂ ಸಹ ಬೆಂಗಳೂರಿನಲ್ಲಿ ಹೆಸರು ಮಾಡಿಸಿಕೊಂಡು ಬರಬೇಕೆಂಬ ಸಬೂಬು ನೀಡಿ ಜಾರಿಕೊಳ್ಳುತ್ತಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಇನ್ನಾದರೂ ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ ವೆಂಕಟೇಶ್.ಪಿ.ಎಸ್, ಗ್ರಾಪಂ ಉಪಾಧ್ಯಕ್ಷ ಶಿವಕುಮಾರ್ ಹೆಸರುಗಳನ್ನು ನಾಮಫಲಕದಲ್ಲಿ ಅಳವಡಿಸಿ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗೆ ಗೌರವ ತರುವಂತಹ ಕೆಲಸವನ್ನು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಚಿತ್ರ: ಚನ್ನರಾಯಪಟ್ಟಣ ಗ್ರಾಮ ಪಂಚಾಯಿತಿ ಅಧ್ಯಕ್ಷರ, ಉಪಾಧ್ಯಕ್ಷರ ಪದನಾಮವನ್ನು ಫಲಕದಲ್ಲಿ ಅಳವಡಿಸದಿರುವುದು.