ಸಿದ್ಧಗಂಗ ಗೃಹ ಗ್ರಂಥಾಲಯದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ
ದೇವನಹಳ್ಳಿ: ದೇವನಹಳ್ಳಿ ಪಟ್ಟಣದ ಕೋಡಿಮಂಚೇನಹಳ್ಳಿಯಲ್ಲಿರುವ ಸಿದ್ದಗಂಗ ಗೃಹ ಗ್ರಂಥಾಲಯದಲ್ಲಿ ೫೩೭ನೇ ದಾಸ ಶ್ರೇಷ್ಠ ಕನಕದಾಸರ ಜಯಂತಿ ಆಚರಣ ಕಾರ್‍ಯಕ್ರಮ ನಡೆಯಿತು.
ದೇವನಹಳ್ಳಿ ಸಾರ್ವಜನಿಕ ಸಂಪರ್ಕ ಕೇಂದ್ರದ ಸಂಸ್ಥಾಪಕ ಅಧ್ಯಕ್ಷ ಡಾ.ಟಿ.ಎಂ.ಸಹದೇಶ್ ಮಾತನಾಡಿ, ಕನಕದಾಸರು ಮತ್ತು ಪುರಂದರದಾಸರನ್ನು ಕರ್ನಾಟಕ ಕೀರ್ತನೆ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಕರೆಯಲಾಗುತ್ತದೆ. ಸಾಹಿತ್ಯದ ಜೊತೆಗೆ ಸಂಗೀತಕ್ಕೂ ಒತ್ತುಕೊಟ್ಟ ಉಭಯ ಸಂತರು ದಾಸ ಪರಂಪರೆಯಲ್ಲಿ ಅಜರಾಮರರಾಗಿ ಉಳಿದವರು. ಅದರಲ್ಲಿ ಕನಕದಾಸರು ನಾಡು ಕಂಡ ಅಪ್ರತಿಮ ದಾಸರಾಗಿದ್ದು ದಾಸಶ್ರೇಷ್ಠ ಎಂದೆನಿಸಿಕೊಂಡವರು. ಅವರ ಆದರ್ಶಗಳನ್ನು ನಾವೆಲ್ಲರೂ ತಪ್ಪದೇ ಪಾಲಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಸಾಹಿತಿ ಬಿಟ್ಟಸಂದ್ರ ಗುರುಸಿದ್ದಯ್ಯ, ಜೈಭೀಮ್ ಛಲವಾದಿ ಮಹಾಸಭಾ ರಾಜ್ಯಾಧ್ಯಕ್ಷ ಶ್ರೀನಿವಾಸ್, ಸ್ವಾತಂತ್ರ್ಯ ಹೋರಾಟಗಾರ ಕೃಷ್ಣಪ್ಪ, ನಟರಾಜ್, ಸಾರ್ವಜನಿಕ ಸಂಪರ್ಕ ಕೇಂದ್ರದ ಕಾರ್ಯಾಧ್ಯಕ್ಷ ಹುರುಳಗುರ್ಕಿ ಮಂಜುನಾಥ್, ದೇವನಹಳ್ಳಿ ತಾಲೂಕು ಕನ್ನಡ ಅಧ್ಯಕ್ಷ ಅನಿಲ್, ಶಿವಕುಮಾರ್, ಲೋಕೇಶ್‌ಗೌಡ, ಪತ್ರಕರ್ತೆ ಪ್ರಿಯಾ, ಯುವ ಮುಖಂಡ ಮುರಳಿ ಇದ್ದರು.
ಚಿತ್ರ: ಸಿದ್ಧಗಂಗ ಗೃಹ ಗ್ರಂಥಾಲಯದಲ್ಲಿ ದಾಸಶ್ರೇಷ್ಠ ಕನಕದಾಸರ ಜಯಂತಿ ಆಚರಣೆ ನಡೆಯಿತು.