logo

ಮಂಡ್ಯ ಸೀಟ್ ಬೆಲ್ಟ್ ಧರಿಸದ ಚಾಲಕನಿಗೆ ₹18 ಸಾವಿರ ದಂಡ ವಿಧಿಸಿದ ಟ್ರಾಫಿಕ್ ಪೊಲೀಸರು!

ಸೀಟ್ ಬೆಲ್ಟ್ ಧರಿಸದೇ ಪದೇ ಪದೇ 36 ಬಾರಿ ಸಂಚಾರಿ ನಿಯಮ ಉಲ್ಲಂಘಿಸಿದ್ದ ಗೂಡ್ಸ್ ವಾಹನದ ಚಾಲಕನಿಗೆ ಮಂಡ್ಯದ ಸಂಚಾರಿ ಪೊಲೀಸರು ಬರೋಬರಿ 18 ಸಾವಿರ ರೂ. ದಂಡ ವಿಧಿಸಿದ್ದಾರೆ.
ಮೈಸೂರು ನಗರದ ನೋಂದಣಿ ಹೊಂದಿದ್ದ ಗೂಡ್ಸ್ ವಾಹನದ ಮೂಲಕ ಗ್ಯಾಸ್ ಸಿಲಿಂಡರ್‌ಗಳನ್ನು ನಗರದಲ್ಲಿ ಸರಬರಾಜು ಮಾಡಲಾಗುತ್ತಿತ್ತು. ಚಾಲಕ ಪ್ರತಿ ಬಾರಿಯು ವಾಹನ ಚಲಾಯಿಸುವ ಸಂದರ್ಭದಲ್ಲಿ 36 ಬಾರಿಯೂ ಸೀಟ್ ಬೆಲ್ಟ್ ಹಾಕದೇ ಇರುವುದು ಮಂಡ್ಯ ನಗರದಲ್ಲಿ ಟ್ರಾಫಿಕ್ ಪೊಲೀಸರು ಅಳವಡಿಸಿದ್ದ ಸಿ.ಸಿ.ಕ್ಯಾಮೆರಾಗಳಲ್ಲಿ ದಾಖಲಾಗಿತ್ತು,
ಇಂದು ಕೂಡ ಮಂಡ್ಯ ನಗರದ ಸಂಜಯ ವೃತ್ತದಲ್ಲಿ ಪದೇ ಪದೇ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಚಾಲಕನಿಗೆ ಬರೋಬ್ಬರಿ 18 ಸಾವಿರ ದಂಡ ವಿಧಿಸಿ, ಸಂಚಾರಿ ನಿಯಮಗಳನ್ನು ಪಾಲಿಸಿ, ರಸ್ತೆಯಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ತಿಳುವಳಿಕೆ ನೀಡಲಾಯಿತು.
ಒಂದು ಬಾರಿಯ ನಿಯಮ ಉಲ್ಲಂಘನೆಗೆ ತಲಾ 500 ರೂ. ದಂಡದಂತೆ 36 ಬಾರಿಯ ಉಲ್ಲಂಘನೆಗೆ ಒಟ್ಟು 18,000 ಸಾವಿರ ರೂ. ದಂಡವನ್ನು ವಿಧಿಸಲಾಗಿದೆ. ಈ ಹಿನ್ನೆಲೆಯಲ್ಲಿ ಚಾಲಕ ಮಂಗಳವಾರ 18 ಸಾವಿರ ರೂ. ದಂಡ ಪಾವತಿಸಿ, ರಶೀದಿ ಪಡೆದಿದ್ದಾರೆಂದು ಮಂಡ್ಯ ಸಂಚಾರಿ ಪೊಲೀಸ್ ಇನ್ಸ್‌ಪೆಕ್ಟರ್ ಸಂತೋಷ್ ಮಾಹಿತಿ ನೀಡಿದ್ದಾರೆ.

ಈ ಸಂದರ್ಭದಲ್ಲಿ ದಂಡ ಕಟ್ಟಿದ ಸವಾರನಿಗೆ ಸಂಚಾರಿ ಪೊಲೀಸರು ಎಚ್ಚರಿಕೆ ನೀಡಿ, ಸಂಚಾರಿ ನಿಯಮಗಳನ್ನು ಪಾಲಿಸಿ, ರಸ್ತೆಯಲ್ಲಿ ಜಾಗರೂಕತೆಯಿಂದ ವಾಹನ ಚಲಾಯಿಸುವಂತೆ ತಿಳುವಳಿಕೆ ನೀಡಿದ್ದಾರೆ.

1
8172 views