ಬ್ಯಾಡಗಿ ರೋಟರಿ ಕ್ಲಬ್ ಮಕ್ಕಳ ದಿನಾಚರಣೆ - ನೊಟಪುಸ್ತಕಗಳ ಕೊಡುಗೆ
ಬ್ಯಾಡಗಿ ನೆಹರು ನಗರದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ರೋಟರಿ ಕ್ಲಬ್ ಬ್ಯಾಡಗಿ ವತಿಯಿಂದ ಮಕ್ಕಳ ದಿನಾಚರಣೆ ಕಾರ್ಯಕ್ರಮ ನಡೆಸಲಾಯಿತು ಮಕ್ಕಳ ದಿನಾಚರಣೆ ಪ್ರಯುಕ್ತ ಬ್ಯಾಡಗಿ ರೋಟರಿ ಕ್ಲಬ್ಬಿನ ಮಾಜಿ ಅಧ್ಯಕ್ಷ ಹಾಗೂ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಪುಟ್ಟಪ್ಪ ಉಪ್ಪಾರ ಶಾಲೆಯ ಎಲ್ಲ ಮಕ್ಕಳಿಗೆ ನೋಟಪುಸ್ತಕ, ಪೆನ್ನು ವಿತರಿಸಿ ಸಿಹಿ ಹಂಚಿ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.ನಂತರ ಶಾಲೆಯ ಮುಖ್ಯೋಪಾಧ್ಯಾಯ ಶ್ರೀ ಮಾಲತೇಶ ಗುಡಗುರ ಮಾತನಾಡಿ ರೋಟರಿ ಕ್ಲಬ್ಬಿನ ಅಸಿಸ್ಟೆಂಟ್ ಗವರ್ನರ್ ಶ್ರೀ ಮಂಜುನಾಥ ಉಪ್ಪಾರ ಇವರು ಕಡಿಮೆ ಹಾಜರಾತಿ ಇರುವ ನಮ್ಮ ಶಾಲೆಯನ್ನು ಗುರುತಿಸಿ ಇಂದು ಮಕ್ಕಳ ದಿನಾಚರಣೆ ಕಾರ್ಯಕ್ರಮ ಇಲ್ಲಿ ನಡೆಸುತ್ತಿರುವುದು ಬಹಳ ಸಂತೋಷದ ವಿಷಯ ಹಾಗೂ ಅವರು ವಿಶೇಷವಾಗಿ ಎಲ್ಲ ಮಕ್ಕಳಿಗೆ ನೋಟಪುಸ್ತಕ, ಪೆನ್ನು ಹಾಗೂ ಸಿಹಿ ತಿಂಡಿ ವಿತರಿಸಿರುವುದು ಇನ್ನೂ ಹೆಚ್ಚಿನ ಸಂತೋಷ ಲಭಿಸಿದೆ ಎಂದು ಧನ್ಯವಾದ ತಿಳಿಸಿದರು. ಜೊತೆಗೆ ಮಕ್ಕಳಿಗೆ ಶಿಕ್ಷಣ ಕಲಿಯಲು ಶಾಲೆಯು ಮೂಲಭೂತ ಸೌಕರ್ಯಗಳ, ಸೌಲತ್ತುಗಳ ಕೊರತೆಯಿಂದ ಕೂಡಿದ್ದು ಕೆಲವು ಸೌಕರ್ಯ ಒದಗಿಸುವಂತೆ ಲಿಖಿತವಾಗಿ ಮನವಿಯನ್ನು ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಅವರಿಗೆ ಸಲ್ಲಿಸಿದರು.ಶಾಲೆಯು ಮನವಿ ಸ್ವೀಕರಿಸಿದ ಅಸಿಸ್ಟೆಂಟ್ ಗವರ್ನರ್ ಮಂಜುನಾಥ ಉಪ್ಪಾರ ಮಾತನಾಡಿ ಕೇವಲ 7 ಮಕ್ಕಳು ಇದ್ದ ಶಾಲೆಯಲ್ಲಿ ತಾವು ಶ್ರಮಿಸಿ 32 ವಿದ್ಯಾರ್ಥಿಗಳನ್ನು ಕೂಡಿಸಿದ್ದು ಒಂದು ಅದ್ಭುತ ಈಗಿನ ಕಾಲಮಾನದಲ್ಲಿ ಸಾರ್ವಜನಿಕರು ಇಂಗ್ಲಿಷ್ ವ್ಯಾಮೋಹದಿಂದ ಖಾಸಗಿ ಶಾಲೆಗಳತ್ತ ಮುಗಿಬಿದ್ದಿದ್ದು ಎಲ್ಲ ಸರ್ಕಾರಿ ಶಾಲೆಗಳು ಅಳಿವಿನ ಅಂಚಿನಲ್ಲಿವೆ ಇದಕ್ಕೆ ಸರ್ಕಾರ ಎಲ್ಲ ಸರ್ಕಾರಿ ಶಾಲೆಗಳಿಗೆ ವಿಶೇಷ ಅನುದಾನ ನೀಡಿ ಇಂಗ್ಲಿಷ್ ಮಿಡಿಯಂ ಪ್ರಾರಂಭ ಮಾಡಿದಾಗ ಮಾತ್ರ ಸರ್ಕಾರಿ ಶಾಲೆಗಳು ಪುನಶ್ಚೇತನ ಹೊಂದಲು ಸಾಧ್ಯ ಎಂದರು. ತಮ್ಮ ಮನವಿಯನ್ನು ನಮ್ಮ ಮುಂದಿನ ಸಭೆಯಲ್ಲಿ ಪರಿಗಣನೆಗೆ ತೆಗೆದುಕೊಂಡು ಕ್ಲಬ್ಬಿನ ಎಲ್ಲ ಸದಸ್ಯರ ಸಹಮತ ಸಹಾಯ ಪಡೆದು ತಮ್ಮ ಬೇಡಿಕೆಗಳಲ್ಲಿ ಸಾಧ್ಯವಾದಷ್ಟು ಸಹಾಯ ನೀಡಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಈ ಸಂದರ್ಭದಲ್ಲಿ ರೋಟರಿ ಕ್ಲಬ್ಬಿನ ಅಧ್ಯಕ್ಷ ಸಿದ್ಧಲಿಂಗಯ್ಯ ಬೂದಿಹಾಳಮಠ, ಉಪಾಧ್ಯಕ್ಷ ಕಿರಣ ವೆರ್ಣೇಕರ, ಮಾಜಿ ಅಧ್ಯಕ್ಷರಾದ ಮಂಜುನಾಥ ಉಪ್ಪಾರ, ವಿಶ್ವನಾಥ ಅಂಕಲಕೋಟಿ, ಮಹೇಶ್ವರಿ ಪಸಾರದ, ಡಾ. ಎಸ್ ಎನ್ ನಿಡಗುಂದಿ, ಮತ್ತು ಶಾಲೆಯ ಎಸ್ ಡಿ ಎಂ ಸಿ ಸದಸ್ಯರಾದ ಸುಧೀರ ಹವಳದ ಪುರಸಭೆ ಸದಸ್ಯರಾದ ಗಾಯತ್ರಿ ರಾಯ್ಕರ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ಮಾಲತೇಶ ಗುಡುಗುರ ಮತ್ತು ಶಿಕ್ಷಕ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.