logo

ದೇವಸೂಳೆ ಹಾಗೂ ಇತರೆ ಮೂರು ಚಲನಚಿತ್ರ ನಿರ್ಮಾಣ ಕಲಾವಿದರ ಆಯ್ಕೆಗಾಗಿ ಆಡಿಷನ್ ಪೂರ್ವ ಸಿದ್ಧತಾ ಸಭೆ


ಗದಗ, ಕಾರಭಾರಿ ಸಿನಿ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ ಐತಿಹಾಸಿಕ ವಿಷಯ ಆಧಾರಿತ ಹಾಗೂ ದೇವರ ಹೆಸರಿನಲ್ಲಿ ಮಹಿಳೆಯ ಮೇಲೆ ದಶಕಗಳಿಂದಲೂ ನಡೆಯುತ್ತಿರುವ ಅತ್ಯಾಚಾರದ ವಿಷಯ ಆಧಾರಿತ ಮಿಶ್ರ ಭಾಷಾ ಚಲನಚಿತ್ರ (ಪ್ಯಾನ ಇಂಡಿಯಾ ಮೂವಿ) ಕುರಿತು ಹುಬ್ಬಳ್ಳಿ ಧಾರವಾಡ ಮಹಾನಗರದಲ್ಲಿ ನಡೆಯಲಿರುವ ಆಡಿಷನ್ ಸೇರಿದಂತೆ
ಕಾರಭಾರಿ ಮೋಷನ್ಸ್ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ ಸಹಯೋಗದಲ್ಲಿ ನಿರ್ಮಾಣವಾಗುತ್ತಿರುವ ಗೌಂಡಿ, ಅವಳು, ಹಾಗೂ ನಿಯಮ 1988 ಚನನಚಿತ್ರಗಳ ಕಲಾವಿದರ ಆಯ್ಕೆಗಾಗಿ ನಡೆಯಲಿರುವ ಆಡಿಷನ್ ಕುರಿತು ಪೂರ್ವಭಾವಿ ಸಮಾಲೋಚನಾ ಸಭೆ ಇಂದು ಗದಗ ನಗರದಲ್ಲಿ ನೆರವೇರಿತು.
ರಾಜ್ಯದ ವಿವಿಧ ಪ್ರದೇಶಗಳಿಂದ ಆಸಕ್ತ ಕಲಾವಿದರು, ಅವಕಾಶ ವಂಚಿತ ಕಲಾವಿದರು, ಉತ್ತರ ಕರ್ನಾಟಕದ ಪ್ರತಿಭೆಗಳು, ಈ ರೀತಿ ಹೊಸ ಪ್ರತಿಭೆಗಳಿಗೆ ನಾಲ್ಕೂ ಚಿತ್ರಗಳಿಗೆ ಅವಕಾಶ ಕೊಡುವ ನಿಟ್ಟಿನಲ್ಲಿ ಹಾಗೂ ನಾಲ್ಕು ಚಿತ್ರಗಳಿಗೆ ಒಂದೇ ಬಾರಿ ಆಡಿಷನ್ ನಡೆಸುವ ಕುರಿತು ಇಂದು ಸಭೆಯಲ್ಲಿ ಚರ್ಚಿಸಲಾಯಿತು.
ಚಿತ್ರ ನಿರ್ಮಾಣ ನಿರ್ದೇಶಕಿ ಮೇರಿ ರಾ ದೇ ಕಾರಭಾರಿ ಹಾಗೂ ಚಿತ್ರ ನಿರ್ದೇಶಕ ರಾ ದೇ ಕಾರಭಾರಿ ರವರ ಅಧ್ಯಕ್ಷತೆಯಲ್ಲಿ ನಗರದ ಟಿಪ್ಪು ಸುಲ್ತಾನ್ ಸರ್ಕಲ್ ನಲ್ಲಿ ಇರುವ ಸಮೃದ್ಧಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ರಾಜ್ಯಾದ್ಯಂತ ಕಲಾವಿದರನ್ನು ಆಡಿಷನ್ ಗೆ ಸೇರಿಸುವ ನಿಟ್ಟಿನಲ್ಲಿ ಇದು ಜನ ಪುರುಷ ಕಾಸ್ಟಿಂಗ್ ಡೈರೆಕ್ಟರ್ ರವರನ್ನು ನೇಮಕ ಮಾಡಲಾಯಿತು.
ಸಾಕಷ್ಟು ವರ್ಷಗಳಿಂದ ಕಲಾ ಸೇವೆ ಮಾಡುತ್ತಾ ಬಂದಿರುವ ಕಲಾವಿದರಾದ ಶ್ರೀ ಶ್ರೀಕಾಂತ್ ಲಮಾಣಿ, ಶ್ರೀ ಪ್ರಕಾಶರಾಜಕುಮಾರ, ಶ್ರೀ ರಾಜು ಅಹ್ಮದ್, ಶ್ರೀ ಮಂಜುನಾಥ ನರಗುಂದ, ಶ್ರೀ ಅರುಣ ಬಡಿಗೇರ, ಇವರನ್ನು ಚಿತ್ರಗಳ ಕಾಸ್ಟಿಂಗ್ ಡೈರೆಕ್ಟರ್ ಎಂದು ನೇಮಕ ಮಾಡಲಾಯಿತು.
ರಾಜ್ಯಾದ್ಯಂತ ಎಲೆಮರೆ ಕಾಯಿಯಂತೆ ಇರುವ ಉತ್ಸಾಹಿ ಕಲಾವಿದರೆಲ್ಲರನ್ನು ಸೇರಿಸಿ ನಾಲ್ಕು ಚಿತ್ರಗಳಿಗೆ ಒಂದೇ ಬಾರಿ ಆಡಿಷನ್ ನಡೆಸಲು ತೀರ್ಮಾನಿಸಲಾಯಿತು.
ಚಿತ್ರಗಳಿಗೆ ಮಹಿಳಾ ಕಾಸ್ಟಿಂಗ್ ಡೈರೆಕ್ಟರ್ ಸಹ ಬೇಕಾಗಿದ್ದು ಶೀಘ್ರದಲ್ಲಿಯೇ ಮಹಿಳಾ ತಂಡದ ಜೊತೆ ಸಭೆ ನಡೆಸುವ ಬಗ್ಗೆ ನಿರ್ದೇಶಕ ಕಾರಭಾರಿ ರವರು ಹೇಳಿದರು.
ಚಿತ್ರದ ಆಡಿಷನ್ ಅನ್ನು ಅಂದಾಜು ಜನೆವರಿ ತಿಂಗಳಲ್ಲಿ ನಡೆಸಲು ತೀರ್ಮಾನಿಸಿ ಆಡಿಷನ್ ಗೆ ಕನಿಷ್ಠ ಎರಡು ಸಾವಿರ ಜನರನ್ನು ಸೇರಿಸುವ ನಿರೀಕ್ಷೆ ಇರುವ ಕುರಿತು ಹಾಗೂ ಹೊಸ ಪ್ರತಿಭೆಗಳ ಅನಾವರಣಕ್ಕೆ ನಿರ್ಮಾಣಗೊಂಡ ಕಾರಭಾರಿ ಮೋಷನ್ಸ್ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ ಮೂಲಕ ನೂರಾರು ಚಿತ್ರಗಳು ನಿರ್ಣಾನವಾಗಲಿದ್ದು ನಮ್ಮ ಸಮೂಹದಲ್ಲಿ ಹೊಸ ಪ್ರತಿಭೆಗಳನ್ನು ಸೇರಿಸಿಕೊಂಡು ಅವರನ್ನು ಮುಖ್ಯ ವಾಹಿನಿಗೆ ತರಲು ಸಹ ಚಾಚಿಸಲಾಯಿತು.

8
2683 views