ಶಿರಾ: ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಿದ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯರು.
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ಮಾಡಲಾಯಿತು, ಕರಿಯಲಾ ಹಳ್ಳಿಯ ಸುಮಾರು 45 ವರ್ಷದ ಮಹಾಲಕ್ಷ್ಮಿ ಎಂಬ ಮಹಿಳೆಗೆ ತೀವ್ರ ಹೊಟ್ಟೆನೋವು ಕಾಣಿಸಿಕೊಂಡಾಗ m r i ಸ್ಕ್ಯಾನಿಂಗ್ ಮಾಡಿಸಿದಾಗ ಗರ್ಭ ಕೋಶದಲ್ಲಿ ಗೆಡ್ಡೆ ಇರುವುದು ಪತ್ತಯಾಗಿತ್ತು ಆದ್ದರಿಂದ ಆಪರೇಶನ್ ಮಾಡುವುದು ಅನಿವಾರ್ಯ ಎಂಬುದು ತಿಳಿದು. ರೋಗಿಯು ತುಂಬಾ ಬಡವರಾದ ಕಾರಣ ತುಂಬಾ ಚಿಂತಿತರಾಗಿದ್ದರು. ಹೊಟ್ಟೆನೋವು ಜಾಸ್ತಿ ಕಾಣಿಸಿಕೊಂಡಾಗ, ಶಿರಾದಲ್ಲಿರುವ ಸರ್ಕಾರಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿರುವ ಡಾಕ್ಟರ್ ನರೇಂದ್ರ ಬಾಬುರವ್ರಲ್ಲಿ ತಮ್ಮ ಅಳಲನ್ನು ತೋಡಿಕೊಂಡರು, ಜಿಲ್ಲಾ ಆಸ್ಪತ್ರೆಯಲ್ಲಿ ಇರುವ ಸೌಲಭ್ಯವು ಈ ಆಸ್ಪತ್ರೆಯಲ್ಲಿ ಇಲ್ಲದಿದ್ದರೂ, ಇದಕ್ಕೆ ಸ್ಪಂದಿಸಿದ dr: ನರೇಂದ್ರ ಬಾಬುರವರು, ಮಹಿಳೆಗೆ ದೈರ್ಯ ತುಂಬಿ ಯಾವುದೇ ಫಲಾಫೇಕ್ಷೆಯಿಲ್ಲದೆ dr:B M ಗೌಡ ರವರ ಮಾರ್ಗದರ್ಶನದಲ್ಲಿ,ಸುಮಾರು 26 cm ಉದ್ದ 2.5 ಕೆಜಿ ತೂಕದ ಗರ್ಭಕೋಶದಲ್ಲಿನ ಗೆಡ್ಡೆಯನ್ನು ರೋಗಿಗೆ ಯಾವುದೇ ತೊಂದರೆಯಾಗದಂತೆ ತಮ್ಮ ವೈದ್ಯರ ತಂಡದೊಂದಿಗೆ ಆಪರೇಶನ್ ಮಾಡಿ ಗೆಡ್ಡೆಯನ್ನು ಹೊರತೆಗೆಯಲಾಯಿತು.