logo

ಶಿರಾ : ಸರ್ಕಾರದಿಂದ ರೈತರಿಗೆ ಟೊಳ್ಳು ಭರವಸೆ, ಅವೈಜ್ಞಾನಿಕ ಶೇಂಗಾ ಬೆಂಬಲ ಬೆಲೆ

ಮೊನ್ನೆಯಷ್ಟೇ ಕರ್ನಾಟಕ ಸರ್ಕಾರದಿಂದ ಘೋಷಣೆಯಾದ ಶೇಂಗಾ ಬೆಳೆದ ರೈತರಿಗೆ ಪ್ರತಿ ಕ್ವಿಂಟಾಲ್ ಶೇಂಗಾಕ್ಕೆ 6783 ರೂಪಾಯಿ ಕೊಡುವದಾಗಿ ಹೇಳಿದೆ, ಇದು ಅವೈಜ್ಞಾನಿಕ ಎಂದು ರೈತರು ಆರೋಪಿಸಿದ್ದಾರೆ, ಏಕೆಂದರೆ ಶೇಂಗಾ ಬೆಳೆದ ಎಲ್ಲಾ ರೈತರಿಗೂ ಈ ಒಂದು ಬೆಂಬಲ ಬೆಲೆ ಸಿಗುವುದಿಲ್ಲ ಕಾರಣವೆನೆಂದರೆ , ಉದಾಹರಣೆಗೆ ಒಂದು ಕೆಜಿ ಶೇಂಗಾದಲ್ಲಿ 700gram ಶೇಂಗಾ ಬೀಜವು ಶೆಲ್ಲಿಂಗ್ (ಉತ್ಕೃಷ್ಟ)ವಾಗಿರಬೇಕು. 4%ಸುಕ್ಕುಗಟ್ಟಿದ ಬೀಜ,2%ಕಸ, 2%ಹಾಳದ ಬೀಜ, 4%ಇತರೆ, 8%ತೇವಾಂಶ ಇರಬೇಕೆಂಬ ನಿಯಮ ಈಗಿರುವಾಗ ರೈತರಿಗೆ ಯಾವ ರೀತಿ ಬೆಂಬಲ ಕೊಟ್ಟಂತಾಗುತ್ತದೆ, ಈ ನಿಯಮದಂತೆ ಬೆಳೆ ಬೆಳೆಯಲು ಹೇಗೆ ಸಾಧ್ಯವಾಗುತ್ತದೆ . ನೀವು ಎಲ್ಲೆಲ್ಲೋ ಹಳ್ಳಿಗಳಿಂದ ಬಾಡಿಗೆ ವಾಹನದಲ್ಲಿ ಬೀಜ ತಂದು ನಿರಾಸೆಯಾಗಬೇಡಿ , ಇವರ ಈ ಮಾನದಂಡಗಳನ್ನು ತಿಳಿದುಕೊಂಡು ಮಾರುಕಟ್ಟೆಗೆ ತನ್ನಿ, ಮತ್ತೆ ವಾಪಸ್ ತಗ್ಗೊಂಡು ಹೋಗುವ ಪ್ರಮೇಯವೇ ಬರುವುದಿಲ್ಲ. ಈಗಾಗಲೇ 60%ರೈತರು ಮಾರಾಟ ಮಾಡಿಯಾಗಿದೆ ಉಳಿದ 40%ರೈತರು ಮಾತ್ರಬೆಳೆದ ಶೇಂಗಾ ಮಾರಾಟ ಮಾಡಬೇಕಾಗಿದೆ, ಘೋಷಣೆಯಾಗಿರುವ ಶೇಂಗಾ ಬೆಂಬಲ ಬೆಲೆ ಅವೈಜ್ಞಾನಿಕವಾಗಿದ್ದು ರೈತರ ಕಣ್ಣ್ ವರೆಸುವ ತಂತ್ರವಾಗಿದೆ.ಆದ್ದರಿಂದ ಈ ಆದೇಶವನ್ನು ಇಂಪಡೆಯಬೇಕೆಂದು
ರೈತರ ಒತ್ತಾಯವಾಗಿದೆ.

6
1106 views