logo

ಹಿರಿಯೂರು ತಾಲ್ಲೂಕು ರಸ್ತೆಗಳು ಸಂಪೂರ್ಣ ಕಳಪೆ, ದುರಸ್ತಿ ಇಂದ ದೂರ ಉಳಿದಿರುವ ಕಾಮಗಾರಿ

ಹಿರಿಯೂರು : 6/10/2024
ಸ್ನೇಹಿತರೆ ಕಳೆದ ಮೂರು ವರ್ಷಗಳಿಂದ ಹಿರಿಯೂರು ತಾಲೂಕಿನ ಅತ್ಯಂತ ಹಳ್ಳಿ ರಸ್ತೆಗಳು ಸಂಪೂರ್ಣ ನಾಶವಾಗಿದ್ದು ಇದರ ದೋಸ್ತಿ ಕಾರ್ಯವನ್ನು ಕೈಗೊಳ್ಳದೆ ಇರುವುದು ಈಗಿನ ಸರ್ಕಾರದ ಬೇಜವಾಬ್ದಾರಿತನವೇ ಕಾರಣ, ಈ ಸರ್ಕಾರ ಬಂದ ಮೇಲೆ ಸಂಪೂರ್ಣ ಅಭಿವೃದ್ಧಿ ಮೂಲಭೂತ ಸೌಕರ್ಯಗಳು ನೆಲೆಗುಂದಿಗೆ ಬಿದ್ದಿದೆ, ಯಾವುದೇ ಕಟ್ಟಡಗಳು, ಹೊಸ ರಸ್ತೆಗಳು ಮೇಲು ಸೇತುವೆಗಳು ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ಆರಂಭವಾಗಿಲ್ಲ, ಯಾವುದೇ ಸರ್ಕಾರಿ ಅಧಿಕಾರಿಗಳನ್ನು ಕೇಳಿದರು ಖಜನೆಯಲ್ಲಿ ಹಣವಿಲ್ಲ ಹಾಗಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂಬುದಾಗಿ ಹೇಳಿಕೆ ನೀಡುತ್ತಾರೆ, ಚಿತ್ರದುರ್ಗ ಜಿಲ್ಲೆಯಾದ್ಯಂತ ಇದೆ ರೀತಿಯಲ್ಲಿ ರಸ್ತೆಗಳು ಹಾಳಾಗಿದ್ದು ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಅವರ ಅನುಯಾಯಿಗಳು ದಯವಿಟ್ಟು ರಸ್ತೆಗಳಿಗೆ ಮುಕ್ತಿ ತೋರಿಸುವಂತೆ ಹಿರಿಯೂರು ಜನರ ಪರವಾಗಿ ನಾನು ಕೇಳಿಕೊಳ್ಳುತ್ತೇನೆ.

0
2793 views