logo

69ನೇ ಕನ್ನಡ ರಾಜ್ಯೋತ್ಸವವನ್ನು ಜಮಖಂಡಿ ನಗರದ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.

-ವರದಿಗಾರರು ಲಿಂಗರಾಜ್ ಬೆಳ್ಳೆನ್ನವರ
69ನೇ ಕನ್ನಡ ರಾಜ್ಯೋತ್ಸವವನ್ನು ಜಮಖಂಡಿ ನಗರದ ಕರ್ನಾಟಕ ರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು. ಈ ಸಂದರ್ಭದಲ್ಲಿ ಆಟೋ ಚಾಲಕರು , ತಮ್ಮ ವಾಹನದ ಮೇಲೆ ಮಹಾಪುರುಷರು ಮತ್ತು ಜ್ಞಾನಪೀಠ ಪುರಸ್ಕತರು, ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರದೊಂದಿಗೆ , ಟಿಪ್ಪು ಸುಲ್ತಾನ್ ಸರ್ಕಲ್ ದಿಂದ ಚಾಲನೆ ನೀಡಿ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ದೇಸಾಯಿ ಸರ್ಕಲ್ ಗೆ ತಲುಪಿದರು.
ಉತ್ತರ ಭಾರತದ ವಲಸಿಗರು ಕೆಲಸಕ್ಕೆ ಮತ್ತು ವ್ಯಾಪಾರಕ್ಕೆ ಬಂದು ಬೆಂಗಳೂರು ತುಂಬಾ ಅವರೇ ಹರಡುತ್ತಿದ್ದಾರೆ ಆದ್ದರಿಂದ ಕನ್ನಡಿಗರು ಎಚ್ಚರಿಕೆಯಿಂದ ಇರಬೇಕೆಂದು ಹಿರಿಯ ನ್ಯಾಯವಾದಿಗಳು ಎನ್ ಎಸ್ ದೇವರವರು ಹೇಳಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮುತ್ತಣ್ಣ ಮೈತ್ರಿ , ಪ್ರದೀಪ್ ಮೆಟಗುಡ ,ಬಾಗಲಕೋಟ ಜಿಲ್ಲಾ ಕಾರ್ಯದರ್ಶಿಯಾದ ಅರುಣ್ ಲಗಳಿ , ಜಮಖಂಡಿ ತಾಲೂಕು ಅಧ್ಯಕ್ಷರಾದ ಅನಿಲ್ ಮಿಶನ್ನವರ , ತಾಲೂಕು ಉಪಾಧ್ಯಕ್ಷರಾದ ಆನಂದ್ ಕಾಂಬಳೆ, ಅನೇಕರು ಉಪಸ್ಥಿದ್ದರು.

113
5118 views