logo

ಬ್ಯಾಡಗಿ ರೋಟರಿ ಕ್ಲಬ್ ಗೆ ಪ್ರಶಸ್ತಿ ಗರಿ

ರವಿವಾರ ಅಕ್ಟೋಬರ್ 27 ರಂದು ಮಹಾರಾಷ್ಟ್ರದ ಕೊಲ್ಲಾಪುರದ ಪಂಚತಾರ ಹೋಟೆಲ್ ಸಯಾಜಿಯಲ್ಲಿ 2023-24ನೇ ಸಾಲಿನ ಡಿಸ್ಟಿಕ್ ಗವರ್ನರ್ ಅಪ್ರಿಷಿಯೇಷನ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು. ಈ ಸಮಾರಂಭದಲ್ಲಿ ಪಟ್ಟಣದ ಬ್ಯಾಡಗಿ ರೋಟರಿ ಕ್ಲಬ್ಬಿಗೆ ಹಲವು ಪ್ರಶಸ್ತಿಗಳು ಲಭಿಸಿವೆ. 2023-24ನೇ ಸಾಲಿನಲ್ಲಿ ನಡೆಸಿದ ಸೇವಾ ಕಾರ್ಯಗಳನ್ನು ಪರಿಗಣಿಸಿ ಅಧ್ಯಕ್ಷ ಮಾಲತೇಶ ಉಪ್ಪಾರ ಅವರಿಗೆ ಉತ್ತಮ ಸೇವಾ ಅಧ್ಯಕ್ಷ ಮತ್ತು ಕಾರ್ಯದರ್ಶಿ ಅನಿಲಕುಮಾರ ಬೊಡ್ಡಪಾಟಿ ಅವರಿಗೆ ಉತ್ತಮ ಸೇವಾ ಕಾರ್ಯದರ್ಶಿ ಪ್ರಶಸ್ತಿ, ಮಾಲತೇಶ ಅರಳಿಮಟ್ಟಿ ಅವರಿಗೆ ಉತ್ತಮ ಅಸಿಸ್ಟೆಂಟ್ ಗವರ್ನರ್ ಮತ್ತು ಮಾಜಿ ಅಧ್ಯಕ್ಷ ಮಂಜುನಾಥ ಉಪ್ಪಾರ ಅವರಿಗೆ ವೈಯಕ್ತಿಕವಾಗಿ ರೋಟರಿ ಇಂಟರ್ನ್ಯಾಷನಲ್ ಡಿಸ್ಟಿಕ್ 3170 ದಲ್ಲಿ ರೆವೆನ್ಯೂ ಡಿಸ್ಟ್ರಿಕ್ಟ್ ಚೇರ್ಮನ್ ಆಗಿ ಸೇವಾ ಕಾರ್ಯ ನಿರ್ವಹಿಸಿದ್ದಕ್ಕೆ ಮತ್ತು ಬ್ಯಾಡಗಿ ರೋಟರಿ ಸಂಸ್ಥೆಯ ಮುಂದಾಳತ್ವ ವಹಿಸಿ ಎಲ್ಲಾ ಸೇವಾಕಾರ್ಯಗಳನ್ನು ಹಾಗು ಸಂಸ್ಥೆಯ ಎಲ್ಲ ಕೆಲಸಗಳನ್ನೂ ನಿರ್ವಹಿಸಿದ್ದನ್ನು ಅಭಿನಂದಿಸಿ ಬೆಸ್ಟ್ ಕ್ಲಬ್ ಲೀಡರ್ಶಿಪ್ ಪ್ಲಾನರ್ ಎಂಬ ಡಿಸ್ತಿಕ್ಟ್ ಸೇವಾ ಪ್ರಶಸ್ತಿಯನ್ನು ವೈಯಕ್ತಿಕವಾಗಿ ನೀಡಿ ಗೌರವಿಸಿದರು. ಪ್ರಶಸ್ತಿಗಳನ್ನು ಸ್ವೀಕರಿಸಿದ ಸಂದರ್ಭದಲ್ಲಿ 2023-24ನೇ ಸಾಲಿನ ಡಿಸ್ಟಿಕ್ ಗವರ್ನರ್ ನಾಸಿರ್ ಬೋರಸಡ್ವಾಲಾ ಹಾಗೂ ಮಾಜಿ ಡಿಸ್ಟ್ರಿಕ್ಟ್ ಗವರ್ನರ್ ಆನಂದ್ ಕುಲಕರ್ಣಿ ಮತ್ತು ಬ್ಯಾಡಗಿ ರೋಟರಿ ಸಂಸ್ಥೆಯ ಮಂಜುನಾಥ ಉಪ್ಪಾರ, ಬಸವರಾಜ ಸುಂಕಾಪುರ, ಅನಿಲಕುಮಾರ ಬೊಡ್ಡಪಾಟಿ, ಸಿದ್ಧಲಿಂಗಯ್ಯ ಬೂದಿಹಾಳಮಠ, ನಿರಂಜನ ಶೆಟ್ಟಿಹಳ್ಳಿ, ಪವಾಡಪ್ಪ ಆಚನೂರ, ಮಾಲತೇಶ ಅರಳೀಮಟ್ಟಿ ಮತ್ತು ಸತೀಶ ಅಗಡಿ ಉಪಸ್ಥಿತರಿದ್ದರು

20
4008 views