logo

ಕಾರಭಾರಿ ಮೋಶನ್ಸ್ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ ಯ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಶ್ರೀ ಆನಂದ್ ಎನ್ ಜೋಶಿ ಆಯ್ಕೆ

ಸಾರ್ವಜನಿಕ ಹಕ್ಕು ರಕ್ಷಣೆ ಮತ್ತು ಭ್ರಷ್ಟಾಚಾರ ವಿರೋಧಿ ಸಂಸ್ಥೆ, ಕರ್ನಾಟಕ ಇದರ ಅಂಗ ಸಂಸ್ಥೆ ಕಾರಭಾರಿ ಮೋಶನ್ಸ್ ಕೂ ಆಪರೇಟಿವ್ ಫಿಲ್ಮ್ ಸೊಸೈಟಿ ಇದರ ಕರ್ನಾಟಕ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಧಾರವಾಡ ಜಿಲ್ಲೆಯ ಶ್ರೀ ಆನಂದ ಎನ್ ಜೋಶಿ ಆಯ್ಕೆಯಾಗಿದ್ದಾರೆ.
ಕರ್ನಾಟಕ ರಾಜ್ಯದ ಉದ್ದಗಲಕ್ಕೂ ಇರುವ ಉತ್ಸಾಹಿ ಕಲಾವಿದರನ್ನು, ಹೊಸ ಪ್ರತಿಭೆಗಳನ್ನು, ಅವಕಾಶವಂಚಿತ ಪ್ರತಿಭೆಗಳನ್ನು, ಒಟ್ಟಾಗಿ ಸೇರಿಸಿ ಅವರನ್ನೆಲ್ಲ ಸಂಘಟಿಸಿ ಅವರ ಮೂಲಕ ಕೂ ಆಪರೇಟಿವ್ ಫಿಲ್ಮ್ ಮೇಕಿಂಗ್ ಪದ್ದತಿಯಲ್ಲಿ ಭಾರತ ಸರಕಾರದ ನಿಯಮಗಳ ಅಡಿಯಲ್ಲಿ ಸಂಘಟಿಸಿ ಬಹುಭಾಷಾ ಚಲನಚಿತ್ರಗಳ ನಿರ್ಮಾಣಕ್ಕಾಗಿ ಹುಟ್ಟಿಕೊಂಡ ಸಂಸ್ಥೆಯ ಸಂಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷರಾದ ರಾ ದೇ ಕಾರಭಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಮೇರಿ ರಾದೇ ಕಾರಭಾರಿ ಇವರು ಜಂಟಿಯಾಗಿ ಶ್ರೀ ಆನಂದ್ ಎನ್ ಜೋಶಿ ಇವರನ್ನು ಕರ್ನಾಟಕ ರಾಜ್ಯದ ಸಂಘಟನಾ ಕಾರ್ಯದರ್ಶಿಯಾಗಿ ಇಂದು ನೇಮಕ ಮಾಡಿ ಆದೇಶ ಹೊರಡಿಸಿದರು.

120
12320 views