logo

ನಿಧಿ ಆಶೆಗಾಗಿ ಬಲಿ ಕೊಡುವ ಹೇಯ ಕೃತ್ಯ ಇನ್ನು ಜೀವಂತವಿದೆ ಎಂದರೆ ಕಷ್ಟವಾದರೂ ನಂಬಲೇಬೇಕು.

ಬೆಂಗಳೂರು : ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ ನಡೆದಿದ್ದು, ಪಾಪಿ ತಂದೆಯೋರ್ವ (ಮಂತ್ರವಾದಿ) ಮಗುವನ್ನು ನಿಧಿಗಾಗಿ ಬಲಿ ಕೊಡಲು ಮುಂದಾದ ಘಟನೆ ನಡೆದಿದೆ.

ಕೆಆರ್ ಪುರಂ ನಿವಾಸಿ ಸದ್ದಾಂ ಎನ್ನುವ ವ್ಯಕ್ತಿ , ನಿಧಿ ಸಿಗುತ್ತದೆ ಎಂದು ನಂಬಿ ಪ್ರತಿ ರಾತ್ರಿ ಹನ್ನೆರೆಡು ಗಂಟೆಗೆ ಮಂತ್ರವನ್ನು ಪಠಿಸುತ್ತಿದ್ದನು.ಅವನಿಗೆ ದಿನದಿಂದ ದಿನಕ್ಕೆ
ನಿಧಿ ಆಸೆಗಾಗಿ ಕುಟ್ಟಿ ಸೈತಾನ್ ಪೂಜೆಯಲ್ಲಿ ತನ್ನ ಮಗುವನ್ನು ಬಲಿ ಕೊಡಲು ಮುಂದಾಗಿದ್ದು, ಬಲಿ ನೀಡುವಂತೆ ತನ್ನ ಪತ್ನಿಗೆ ಕಿರುಕುಳ ನೀಡಿದ್ದಾನೆ.

ಮಂತ್ರ ಪಠಿಸುತ್ತಾ ಸದ್ದಾಂ ತಡರಾತ್ರಿ ವಾಮಾಚಾರ ಅಭ್ಯಾಸ ಮಾಡುತ್ತಿದ್ದನು ಎಂದು ತಿಳಿದು ಬಂದಿದೆ. ಪತಿ ಸದ್ದಾಂ ಕಿರುಕುಳಕ್ಕೆ ಬೇಸತ್ತು ಪತ್ನಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಅದೃಷ್ಟವಶಾತ್ ಮಗು ಪ್ರಾಣಾಪಾಯದಿಂದ ಪಾರಾಗಿದೆ.

ಅದು ವಿಜ್ಞಾನ ತಂತ್ರಜ್ಞಾನ ಇಷ್ಟೊಂದು ಮುಂದುವರೆದ ಕಾಲಘಟ್ಟದಲ್ಲಿ ಈ ರೀತಿಯ ಮೂಢನಂಬಿಕೆ ಜನರು ಬಲಿಯಾಗುತ್ತಿರುವುದು ನಿಜಕ್ಕೂ ದುರದೃಷ್ಟಕರ. ಜನರಿಗೆ ಇತರಹದ ವಿಷಯಗಳಿಂದ ದೂರವಿರಿಸಲು ಜಾಗೃತಿ ಮೂಡಿಸಬೇಕು.

3
372 views